ಮಂಚಿಕೆರೆಯಲ್ಲಿ ಕೆರೆಗೆ ಬಿದ್ದ ಹೋರಿಗೆ ಜೀವದಾನ, ಸ್ಥಳೀಯ ಯುವಕರ ಮಾನವೀಯ ಕಾರ್ಯಕ್ಕೆ ಭಾರೀ ಮೆಚ್ಚುಗೆ
ಉಡುಪಿ: ಮಣಿಪಾಲ ಮಂಚಿಕೆರೆಯ ಶ್ರೀ ವಾಸುಕಿ ನಾಗಯಕ್ಷಿ ಸನ್ನಿಧಾನದ ಕೆರೆಗೆ ಆಯತಪ್ಪಿ ಬಿದ್ದ ಹೋರಿಯೊಂದನ್ನು ಸ್ಥಳೀಯ ಯುವಕರು ಸಮಯಪ್ರಜ್ಞೆಯಿಂದ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಕೆರೆಯ ಬದಿಯಲ್ಲಿ ಮೇಯುತ್ತಿದ್ದ ಹೋರಿ ಅಕಸ್ಮಾತ್ ಕಾಲು ಜಾರಿ ಕೆರೆಯೊಳಗೆ ಬಿದ್ದಿದೆ. ಆಳವಾದ ನೀರಿನಲ್ಲಿ ಸಿಲುಕಿದ ಹೋರಿ ಮೇಲಕ್ಕೆ ಬರಲಾಗದೆ ಒದ್ದಾಡುತ್ತಿರುವುದನ್ನು ಗಮನಿಸಿದ ಸ್ಥಳೀಯ ಯುವಕರು ತಕ್ಷಣ ಧಾವಿಸಿ, ಹಗ್ಗ ಹಾಗೂ ಇತರೆ ಸಲಕರಣೆಗಳ ಸಹಾಯದಿಂದ ಹೋರಿಯನ್ನು ಹೊರತೆಗೆದಿದ್ದಾರೆ. ದಡಕ್ಕೆ ಬಂದ ಕೂಡಲೇ ಹೋರಿ ಸುರಕ್ಷಿತವಾಗಿ ಓಡಿ ಹೋಗಿದ್ದು, ಈ ದೃಶ್ಯವನ್ನು ಕಂಡ ಸ್ಥಳೀಯರು ಯುವಕರ ಸಾಹಸ ಮತ್ತು ಮಾನವೀಯ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



