ಪವನ್ ಕಲ್ಯಾಣ್ ಈಗ ಅಭಿನವ ಶ್ರೀಕೃಷ್ಣದೇವರಾಯ; ಪುತ್ತಿಗೆ ಮಠಾಧೀಶರಿಂದ ಘೋಷಣೆ
ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಉಡುಪಿಗೆ ಆಗಮಿಸಿ ಲಕ್ಷಕಂಠ ಗೀತಾ ಕಾರ್ಯಕ್ರಮದಲ್ಲಿ ಭಾಗಿಯಾದ ವಾರದ ಒಳಗೆ ಉಡುಪಿಗೆ ಪವರ್ ಸ್ಟಾರ್ (Andhra DCM Pawan Kalyan in Udupi) ಆಗಮಿಸಿದ್ದರು. ಗೀತೋತ್ಸವದ ಸಮಾರೋಪ ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಶ್ರೀಕೃಷ್ಣ ದರ್ಶನ ನಡೆಸಿ ರಾಜಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾದರು.
ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆಯುತ್ತಿರುವ ಗೀತೋತ್ಸವ ಕಾರ್ಯಕ್ರಮ ಸಮಾರೋಪಗೊಂಡಿದೆ. ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥರ ನೇತೃತ್ವದಲ್ಲಿ ಆಯೋಜಿಸಲಾದ ಗೀತೋತ್ಸವ ಕಾರ್ಯಕ್ರಮವನ್ನು ತಿಂಗಳ ಹಿಂದೆ ಪೇಜಾವರ ವಿಶ್ವಪ್ರಸನ್ನ ಸ್ವಾಮೀಜಿ ಉದ್ಘಾಟಿಸಿದ್ದರು. ಇದರ ಜೊತೆಗೆ ವಿಶೇಷವಾಗಿ ಈ ಕಾರ್ಯಕ್ರಮದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಇದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇಂದು ಗೀತೋತ್ಸವದ ಸಮಾರೋಪ ಸಮಾರಂಭಕ್ಕೆ ಆಂಧ್ರದ ಡಿಸಿಎಂ ಪವನ್ ಕಲ್ಯಾಣ್ ಅತಿಥಿಯಾಗಿ ಭಾಗಿಯಾಗಿದ್ದಾರೆ. ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿ ಅಲ್ಲಿಂದ ಉಡುಪಿ ಆಗಮಿಸಿದ ಅವರನ್ನು ಮಠದ ವತಿಯಿಂದ ಸ್ವಾಗತಿಸಲಾಯಿತು. ಪ್ರವಾಸಿ ಮಂದಿರದಲ್ಲಿ ಊಟ ಮುಗಿಸಿ ಅವರು ಕೃಷ್ಣಮಠಕ್ಕೆ ತೆರಳಿ ದೇವರ ದರ್ಶನ ಮಾಡಿ ಸ್ವಾಮೀಜಿಗಳ ಜೊತೆ ಭೇಟಿ ಮಾಡಿ ಮಾತುಕತೆ ನಡೆಸಿದರು. ಬಳಿಕ ಅಲ್ಲಿಂದ ಪವನ್ ಕಲ್ಯಾಣ್ ಮಠದತ್ತ ತೆರಳಿದರು. ಮಠದ ರಾಜಾಂಗಣದಲ್ಲಿ ನಡೆಯುವ ಗೀತೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಮಠದ ಭೇಟಿಗೂ ಮೊದಲು ಪವನ್ ಕಲ್ಯಾಣ್ ಅವರು ಮಾಧ್ಯಮದೊಂದಿಗೆ ಮಾತನಾಡಿದರು.
ಉಡುಪಿ ತಲುಪಿದ ಪವನ್ ಕಲ್ಯಾಣ ಅವರನ್ನು ಮಠದ ಪ್ರತಿನಿಧಿಗಳು ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತಿಸಿದರು. ಬಳಿಕ ಅವರು ರಾಜಾಂಗಣದ ಮೂಲಕ ಮಠ ಪ್ರವೇಶಿಸಿ ಶ್ರೀಕೃಷ್ಣನ ಮುಂದೆ ವಿಶೇಷ ಪೂಜೆ ಸಲ್ಲಿಸಿದರು. ತೇಜಸ್ವಿಯಾದ ಮಠದ ಸಂಸ್ಕೃತಿ, ಪರಂಪರೆ ಹಾಗೂ ಸೇವಾ ಚಟುವಟಿಕೆಗಳ ಕುರಿತು ಸ್ವಾಮೀಜಿಗಳಿಂದ ಮಾಹಿತಿ ಪಡೆದರು. ಭಕ್ತರೊಂದಿಗೆ ಸರಳವಾಗಿ ಮಾತನಾಡಿದ ಪವನ್ ಕಲ್ಯಾಣ್, ಉಡುಪಿ ಮಠದ ಆಧ್ಯಾತ್ಮಿಕ ವಾತಾವರಣವು ತನಗೆ ಆತ್ಮಶಾಂತಿಯನ್ನು ನೀಡುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಸ್ಯಾಮ್‌ಸಂಗ್‌ನ ಹೊಸ ಫೋನ್ ಪ್ರಿವ್ಯೂ ಲೀಕ್!
ಶ್ರೀಕೃಷ್ಣನ ದರ್ಶನ ಪಡೆದು ಅದ್ಭುತವಾದ ಶಾಂತಿ ಅನುಭವಿಸಿದ್ದೇನೆ. ಇಲ್ಲಿ ಪ್ರತಿಸಾರಿ ಬರುವಾಗ ಒಂದು ಹೊಸ ಶಕ್ತಿ ಸಿಗುತ್ತದೆ ಎಂದರು. ಇದೇ ಸಂದರ್ಭ ಮಠದ ವತಿಯಿಂದ ಪವನ್ ಕಲ್ಯಾಣ್ ಅವರಿಗೆ ಅಭಿನವ ಶ್ರೀ ಕೃಷ್ಣದೇವರಾಯ ಬಿರುದು ನೀಡಿ ಗೌರವಿಸಿದರು. ಭೇಟಿಯ ವೇಳೆ ಮಠದ ನಿತ್ಯ ಸೇವೆಗಳು, ಅನ್ನ ಸಂತರ್ಪಣೆ, ಶಿಕ್ಷಣ-ಸಾಮಾಜಿಕ ಉದ್ದೇಶಗಳ ಕಾರ್ಯಕ್ರಮಗಳ ಬಗ್ಗೆ ಸಹ ಆಂಧ್ರ ಉಪಮುಖ್ಯಮಂತ್ರಿಗೆ ಮಾಹಿತಿಯನ್ನು ನೀಡಲಾಯಿತು. ಪವನ್ ಕಲ್ಯಾಣ್ ಅವರ ಧಾರ್ಮಿಕ ಭೇಟಿಯ ಹಿನ್ನೆಲೆಯಲ್ಲಿ ಮಠ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭದ್ರತಾ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಹೆಚ್ಚಿನ ಬಂದೋಬಸ್ತ್ ಮಾಡಲಾಗಿತ್ತು. ಅನೇಕ ಭಕ್ತರು, ಜನಸೇನಾ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಮಠ ಆವರಣದಲ್ಲಿ ಸೇರಿದ್ದರು.
ಪ್ರಧಾನಿ ನರೇಂದ್ರ ಮೋದಿ ಭೇಟಿ ಬಳಿಕ ಸಾಕಷ್ಟು ಭಕ್ತರು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡುತ್ತಿತ್ತು. ಈಗ ಪವರ್ ಸ್ಟಾರ್ ಪವನ್ ಕಲ್ಯಾಣ್ ಭೇಟಿ ಭಕ್ತರಲ್ಲಿ ಹೊಸ ಸಂಚಲನ ಮೂಡಿಸಿದೆ.



