ಕೌಟುಂಬಿಕ ದ್ವೇಷಕ್ಕೆ ಮೈದುನನ ಖಾಸಗಿ ಅಂಗಾಂಗ ಕತ್ತರಿಸಿದ ಮಹಿಳೆ

Prayag Raj : ತನ್ನ ಮೈದುನನ ಮೇಲೆ ಅತ್ಯಂತ ಕ್ರೂರವಾಗಿ ಹಲ್ಲೆ ನಡೆಸಿ ಆತನ ಖಾಸಗಿ ಅಂಗಾಂಗಳನ್ನೇ ಮಹಿಳೆಯೊಬ್ಬರು ಕತ್ತರಿಸಿದಂತಹ ಬೆಚ್ಚಿ ಬೀಳಿಸುವ ಘಟನೆಯೊಂದು ಪ್ರಯಾಗ್ರಾಜ್ನಲ್ಲಿ ಸಂಭವಿಸಿದೆ.
ಈ ಪ್ರಕರಣದಲ್ಲಿ ಆರೋಪಿ ಮಹಿಳೆಯನ್ನು ಬಂಧಿಸಲಾಗಿದ್ದು ಈ ಘಟನೆಯು ಪ್ರಯಾಗ್ ರಾಜ್ನ ಮೌಯಿಮಾ ನಿವಾಸಿಗಳನ್ನು ದಿಗ್ಭ್ರಮೆಗೊಳಿಸಿದೆ. ಕೌಟುಂಬಿಕ ದ್ವೇಷದಿಂದ ಮಹಿಳೆ ಈ ಕೃತ್ಯ ಎಸಗಿದ್ದಾಳೆ ಎನ್ನಲಾಗಿದೆ.
ಅಕ್ಟೋಬರ್ 16ರ ರಾತ್ರಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೌಯಿಮಾದ ಮಲ್ಖಾನ್ಪುರ ಗ್ರಾಮದ ರಾಮ ಆಸರೆ ಎಂಬವರ ಪುತ್ರ 20 ವರ್ಷದ ಉಮೇಶ್ ತನ್ನ ಮಲಗುವ ಕೋಣೆಯಲ್ಲಿ ತೀವ್ರ ರಕ್ತಸ್ರಾವದಿಂದ ಒದ್ದಾಡಿದ್ದ.
ಆತನ ಕಿರುಚಾಟ ಕೇಳಿ ಎದ್ದು ಬಂದ ಕುಟುಂಬಸ್ಥರು ಆತನ ಸ್ಥಿತಿ ಕಂಡು ಕಂಗಾಲಾಗಿದ್ದಾರೆ. ಆತನ ಮೈ ಮೇಲೆಲ್ಲ ಇರಿತವಿದ್ದರೆ ಖಾಸಗಿ ಅಂಗವನ್ನು ತುಂಡರಿಸಲಾಗಿತ್ತು. ಕುಟುಂಬಸ್ಥರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹಾಗೂ ಪೊಲೀಸ್ ಠಾಣೆಗೆ ದೂರನ್ನೂ ನೀಡಿದ್ದರು. ಯಾರು ಈ ಕೃತ್ಯ ಎಸಗಿರಬಹುದು ಎಂಬ ವಿಚಾರ ಮಾತ್ರ ನಿಗೂಢವಾಗಿಯೇ ಇತ್ತು.
Also Read: ಐಎನ್ಎಸ್ ವಿಕ್ರಾಂತ್ ಪಾಕಿಸ್ತಾನಿಗಳ ನಿದ್ದೆಗೆಡಿಸಿದೆ, ಭಾರತದೆದುರು ಮಂಡಿಯೂರಿದೆ : ಪ್ರಧಾನಿ ಮೋದಿ
ಈ ರೀತಿಯ ಕ್ರೌರ್ಯ ಯಾರಿಂದ ಮೆರೆಯಲು ಸಾಧ್ಯ ಎಂಬ ಪ್ರಶ್ನೆ ಎಲ್ಲರಲ್ಲೂ ಮನೆ ಮಾಡಿತ್ತು. ಪೊಲೀಸರು ಈ ಪ್ರಕರಣ ಸಂಬಂಧ ತೀವ್ರ ತನಿಖೆ ನಡೆಸಿದ್ದು ಆಗ ಕೌಟುಂಬಿಕ ದ್ವೇಷ ಮುನ್ನೆಲೆಗೆ ಬಂದಿದೆ. ಉಮೇಶ್ ಸಹೋದರ ಉದಯ್ ಮಂಜುಳಾ ಎಂಬಾಕೆಯನ್ನು ವಿವಾಹವಾಗಿದ್ದ. ಕಾಲಾಂತರದಲ್ಲಿ ಉಮೇಶ್ ಹಾಗೂ ಮಂಜುಳಾ ತಂಗಿಯ ನಡುವೆ ಪ್ರೇಮಾಂಕುರವಾಗಿತ್ತು.
ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು ಎನ್ನಲಾಗಿದೆ. ಆದರೆ ಇದಕ್ಕೆ ಕುಟುಂಬಸ್ಥರ ವಿರೋಧವಿತ್ತು. ತೀರಾ ಹತ್ತಿರದ ಸಂಬಂಧದಲ್ಲಿ ಮದುವೆ ಬೇಡವೆಂದು ಈ ಸಂಬಂಧವನ್ನು ವಿರೋಧಿಸಲಾಗಿತ್ತು. ಇದಾದ ಬಳಿಕ ಉಮೇಶ ಆಕೆಯನ್ನು ಬಿಟ್ಟು ಮತ್ತೊಬ್ಬ ಯುವತಿಯನ್ನು ಪ್ರೀತಿಸಲು ಆರಂಭಿಸಿದ್ದ ಎನ್ನಲಾಗಿದೆ.
ಆದರೆ ಉಮೇಶ ಒಂದೇ ಬಾರಿಗೆ ತನ್ನನ್ನು ಬಿಟ್ಟು ಮತ್ತೊಬ್ಬಳನ್ನು ಪ್ರೀತಿಸಲು ಆರಂಭಿಸಿದ್ದು ಮಂಜು ತಂಗಿಯ ಕೋಪಕ್ಕೆ ಕಾರಣವಾಗಿತ್ತು. ಇದರಿಂದ ಆಕೆ ಖಿನ್ನತೆಗೆ ಒಳಗಾಗಿದ್ದಳು ಎನ್ನಲಾಗಿದೆ. ತನ್ನ ತಂಗಿಯ ಈ ಪರಿಸ್ಥಿತಿಯನ್ನು ಕಂಡು ಮೈದುನ ಉಮೇಶ್ ಮೇಲೆ ಮಂಜು ಅತಿಯಾದ ಕೋಪ ಹಾಗೂ ದ್ವೇಷ ಬೆಳೆಸಿಕೊಂಡಿದ್ದಳು ಎನ್ನಲಾಗಿದೆ.
ಇದೇ ಕಾರಣಕ್ಕೆ ಉಮೇಶ್ ವಿರುದ್ಧ ಮಂಜು ಈ ಕೃತ್ಯ ಎಸಗಿದ್ದಾಳೆ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ,ಮನೆಯಲ್ಲಿ ಎಲ್ಲರೂ ನಿದ್ರಿಸುವವರೆಗೂ ಮಂಜು ಕಾದಿದ್ದಳು ಎನ್ನಲಾಗಿದೆ.
Also Read: ಭಾರತದ ಏಕೈಕ ಟ್ರಾಫಿಕ್ ಜಾಮ್ ಇಲ್ಲದ ನಗರ : ಈ ಊರಲ್ಲಿ ಕೇಳಿಸದು ವಾಹನಗಳ ಹಾರ್ನ್ !
ಮಧ್ಯರಾತ್ರಿ ಸುಮಾರಿಗೆ ಚಾಕು ತೆಗೆದುಕೊಂಡು ಉಮೇಶನ ಕೋಣೆಗೆ ಪ್ರವೇಶಿಸಿದ ಮಂಜು ಆತನ ಖಾಸಗಿ ಅಂಗಗಳನ್ನು ಕತ್ತರಿಸುವ ಮುನ್ನ ಆತನಿಗೆ ಹಲವು ಬಾರಿ ಇರಿದಿದ್ದಳು ಎನ್ನಲಾಗಿದೆ.
ತೀವ್ರ ನೋವಿನಿಂದ ಬಳಲುತ್ತಿದ್ದ ಉಮೇಶ್ ಸಹಾಯಕ್ಕಾಗಿ ಕಿರುಚಿದ್ದಾನೆ. ಆದರೆ ಕುಟುಂಬಸ್ಥರು ಆತನ ಸಹಾಯಕ್ಕೆ ಧಾವಿಸುವಷ್ಟರಲ್ಲಿ ಮಂಜು ಪರಾರಿಯಾಗಿದ್ದಳು. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಲಾಗಿದೆ. ಸುಮಾರು ಒಂದೂವರೆ ಗಂಟೆಗಳ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಉಮೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
Prayag Raj Woman cuts off boyfriend s private parts over family feud



