ವಾಸ್ತು ಪ್ರಕಾರ ಮಲ್ಲಿಗೆ ಗಿಡ ಹೀಗೆ ಬೆಳೆಸಿ: ನಿಮ್ಮ ಮನೆಯ ಆಂತರಿಕ ಸಮಸ್ಯೆ ದೂರವಾಗಿ, ಲಕ್ಷ್ಮಿ ದೇವಿ ನೆಲೆಸುತ್ತಾಳೆ

vastu tips : ಅಂದದ ಮನೆಗೆ ಚೆಂದದ ಹೂದೋಟವಿದ್ದರೆ ಅದು ಸ್ವರ್ಗಕ್ಕೆ ಸಮಾನವಾಗಿರುತ್ತದೆ ಎಂದು ಹೇಳುವುದನ್ನು ಕೇಳಿರಬಹುದು. ಬಣ್ಣ ಬಣ್ಣದ ಹೂವುಗಳು ಅರಳಿ ನಿಂತಾಗ ಮನೆಯ ವಾತಾವರಣವೂ ಸಂತೋಷದಿಂದ ಕೂಡಿರುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರವೂ ಮನೆಯಲ್ಲಿ ಕೆಲವು ಗಿಡಗಳನ್ನು ನೆಡುವುದು ಬಹಳ ಲಾಭದಾಯಕ ಎಂದು ಹೇಳಲಾಗಿದೆ. ವಾಸ್ತು ದೋಷ ನಿವಾರಣೆ ಮಾಡಬಲ್ಲ ಹೂವಿನ ಗಿಡಗಳ ಸಾಲಿಗೆ ಮಲ್ಲಿಗೆಯೂ ಸೇರುತ್ತದೆ.

ಸುವಾಸನೆಯಿಂದಲೇ ಮಲ್ಲಿಗೆ ಹೂವು ಎಲ್ಲರನ್ನೂ ಆಕರ್ಷಿಸುತ್ತದೆ. ವಿಶೇಷ ದಿನಗಳಲ್ಲಿ ದೇವರ ಪೂಜೆಗೆ ಅಗತ್ಯವಾಗಿ ಬಳಸುವ ಮಲ್ಲಿಗೆ ಜನರ ಮನಸ್ಸನ್ನು ತನ್ನ ಪರಿಮಳದಿಂದಲೇ ಗೆದ್ದಿದೆ. ವಾಸ್ತು ಶಾಸ್ತ್ರದಲ್ಲೂ ಕೂಡಾ ಮಲ್ಲಿಗೆ ವಿಶೇಷ ಸ್ಥಾನವನ್ನು ಗಳಿಸಿದೆ.

ಇದು ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ, ಸಕಾರಾತ್ಮಕ ಶಕ್ತಿಯನ್ನು ಮನೆಯ ತುಂಬೆಲ್ಲಾ ಹರಡುತ್ತದೆ. ಜೊತೆಗೆ ಲಕ್ಷ್ಮಿ ದೇವಿಯ ಆಶೀರ್ವಾದವೂ ದೊರೆಯುತ್ತದೆ.

ವಾಸ್ತುಶಾಸ್ತ್ರದಲ್ಲಿ ಮಲ್ಲಿಗೆ ಗಿಡ ನೆಡಲು ಕೆಲವು ಸಲಹೆಗಳನ್ನು ನೀಡಲಾಗಿದೆ. ಅದರ ಪ್ರಕಾರ ಮಲ್ಲಿಗೆ ಗಿಡ ನೆಡುವುದರಿಂದ ಮನೆಯಲ್ಲಿ ಯಾವುದೇ ಸುಖ, ಸಮೃದ್ಧಿಗೆ ಕೊರತೆಯಾಗಲಾರದು.

vastu tips : ಮಲ್ಲಿಗೆ ಗಿಡದ ಮಹತ್ವ

ಗಾಢ ಪರಿಮಳವನ್ನು ಹೊಂದಿರುವ ಮಲ್ಲಿಗೆ ಹೂವು ದೇವರ ಪೂಜೆಯಲ್ಲಿ ವಿಶೇಷ ಸ್ಥಾನ ಗಳಿಸಿದೆ. ಶಿವ, ವಿಷ್ಣು ಮತ್ತು ಲಕ್ಷ್ಮಿ ದೇವಿಯ ಪೂಜೆಯ ಸಮಯದಲ್ಲಿ ಈ ಹೂವನ್ನು ಬಳಸುವುದರಿಂದ ಶುಭ ಫಲಿತಾಂಶಗಳು ದೊರೆಯುತ್ತವೆ.

ಇದು ಸುತ್ತಲಿನ ವಾತಾವರಣವನ್ನು ಶುದ್ಧೀಕರಿಸುತ್ತದೆ. ಅಷ್ಟೇ ಅಲ್ಲದೇ ಗುರುವಾರ ಮತ್ತು ಶುಕ್ರವಾರದ ಪೂಜೆಯಲ್ಲಿ ಮಲ್ಲಿಗೆ ಹೂವನ್ನು ಬಳಸುವುದರಿಂದ ವಿಷ್ಣು ಮತ್ತು ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದ ಪಡೆಯಬಹುದಾಗಿದೆ.

ಇದನ್ನೂ ಓದಿ : ಮನೆಯಲ್ಲಿ ದೇವರ ಕೋಣೆ ಹೇಗಿರಬೇಕು ? ಯಾವ ದಿಕ್ಕಿನಲ್ಲಿದ್ರೆ ಸಂಪತ್ತು ವೃದ್ದಿ

ಇದು ಕುಟುಂಬದ ಆಂತರಿಕ ಸಮಸ್ಯೆಗಳನ್ನು ದೂರಮಾಡಿ, ಕುಟುಂಬ ಸದಸ್ಯರ ಜೀವನದಲ್ಲಿರುವ ಅನೇಕ ದುಃಖಗಳನ್ನು ಪರಿಹಾರ ಮಾಡುತ್ತದೆ.

vastu tips : ವಾಸ್ತು ಪ್ರಕಾರ ಮಲ್ಲಿಗೆ ಗಿಡವನ್ನು ಯಾವ ದಿಕ್ಕಿನಲ್ಲಿ ನೆಡಬೇಕು ?

ಮಲ್ಲಿಗೆ ಗಿಡವನ್ನು ವಾಸ್ತು ಪ್ರಕಾರ ಸರಿಯಾದ ದಿಕ್ಕಿನಲ್ಲಿ ನೆಡುವುದು ಬಹಳ ಮುಖ್ಯ. ವಾಸ್ತು ನಿಯಮಗಳನ್ನು ಪಾಲಿಸಿ ಗಿಡವನ್ನು ನೆಡುವುದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ನೆಲೆಸುತ್ತದೆ.

ಮಲ್ಲಿಗೆ ಗಿಡವನ್ನು ಈಶಾನ್ಯ ಅಥವಾ ಉತ್ತರ ದಿಕ್ಕಿನಲ್ಲಿ ನೆಡಬೇಕು. ಪೂರ್ವ ದಿಕ್ಕಿನಲ್ಲಿಯೂ ಕೂಡಾ ಮಲ್ಲಿಗೆ ಗಿಡವನ್ನು ನೆಡಬಹುದು. ಅಲ್ಲದೇ ಗಿಡ ಚೆನ್ನಾಗಿ ಬೆಳೆಯಲು ಸೂರ್ಯನ ಬೆಳಕು ಮತ್ತು ಗಾಳಿಯಿರುವ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು.

ಇದನ್ನೂ ಓದಿ : ವಾಸ್ತುಶಾಸ್ತ್ರದ ಪ್ರಕಾರ ನಿಮ್ಮ ಮನೆ ಹೇಗಿರಬೇಕು ?

vastu tips : ಈ ವಿಷಯಗಳನ್ನು ಎಂದಿಗೂ ಮರೆಯಬೇಡಿ

  • ಮಲ್ಲಿಗೆ ಹೂವಿನ ಪರಿಮಳವು ಅತ್ಯಂತ ಆಕರ್ಷವಾಗಿದ್ದು, ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಆದ್ದರಿಂದ ಇದನ್ನು ಮನೆಯ ಪ್ರವೇಶದ್ವಾರ ಅಥವಾ ಕಿಟಕಿಯ ಬಳಿಯೂ ನೆಡಬಹುದು.
  • ವಾಸ್ತು ಶಾಸ್ತ್ರದ ಪ್ರಕಾರ ಈ ಗಿಡವನ್ನು ಮನೆಯ ಶೌಚಾಲಯ ಅಥವಾ ಸ್ನಾನಗೃಹದ ಬಳಿ ಎಂದಿಗೂ ನೆಡಬಾರದು. ಒಂದು ವೇಳೆ ಹಾಗೆ ಮಾಡಿದರೆ ಅದು ಶುಭವೆಂದು ಪರಿಗಣಿಸಲಾಗುವುದಿಲ್ಲ.
  • ಈ ಗಿಡವನ್ನು ಅತಿಯಾಗಿ ನೆರಳು ಬೀಳುವ ಜಾಗದಲ್ಲಿ ನೆಡಬಾರದು. ಮಲ್ಲಿಗೆ ಗಿಡ ಇರುವ ಜಾಗವನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಿರಬೇಕು.
  • ಮಲ್ಲಿಗೆ ಗಿಡ ಒಣಗಿ ಹೋದರೆ ಅದನ್ನು ತಕ್ಷಣ ತೆಗೆದುಹಾಕಿ. ಇಲ್ಲವಾದರೆ ಸಕಾರಾತ್ಮಕ ಶಕ್ತಿಯ ಬದಲು ನಕಾರಾತ್ಮಕ ಶಕ್ತಿ ಮನೆಯಲ್ಲಿ ಹರಡುತ್ತದೆ.

vastu tips follow these vastu rules for planting jasmine plant to get prosperity in house arc in Kannada News

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories