ಶ್ರೀಶಾಂತ್- ಹರ್ಭಜನ್ ಸಿಂಗ್ ಕಪಾಳಮೋಕ್ಷ : ಹಳೆ ವಿಡಿಯೋ ವೈರಲ್

Harbhajan Singh S Sreesanth : ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಕಳೆದ 17 ವರ್ಷಗಳ ಹಿಂದೆ ನಡೆದಿದ್ದ ವಿಡಿಯೋವೊಂದು ಮತ್ತೆ ವೈರಲ್ ಆಗಿದೆ. ಭಾರತ ಕ್ರಿಕೆಟ್ ತಂಡದ ಕ್ರಿಕೆಟಿಗ ಹರ್ಭಜನ್ ಸಿಂಗ್ ಶ್ರೀಶಾಂತ್‌ಗೆ ಕಪಾಳಮೋಕ್ಷ ಮಾಡಿದ್ದರು. ವಿಡಿಯೋ ವೈರಲ್ ಆಗಿರೋದಕ್ಕೆ ಶ್ರೀಶಾಂತ್ ಪತ್ನಿ ಗರಂ ಆಗಿದ್ದಾರೆ.
ಹರ್‌ಭಜನ್ ಸಿಂಗ್ ಮತ್ತು ಶ್ರೀಶಾಂತ್ ಅವರ ನಡುವೆ 2008ರಲ್ಲಿ ಐಪಿಎಲ್‌ನಲ್ಲಿ ನಡೆದಿರುವ “ಕಪಾಳಮೋಕ್ಷ” ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕ್ರಿಕೆಟ್ ವಲಯದಲ್ಲಿ ಈ ಘಟನೆ ಸಂಭವಿಸಿ 17 ವರ್ಷ ಕಳೆದಿದೆ. ಇದೀಗ ಐಪಿಎಲ್‌ನ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರು ಈ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.
ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯದ ನಂತರ ಹರ್‌ಭಜನ್ ಸಿಂಗ್ ಅವರು ಶ್ರೀಶಾಂತ್ ಕೆನ್ನೆಗೆ ಬಾರಿಸಿದ್ದರು. ಈ ಘಟನೆಯನ್ನು ಟಿವಿ ಕ್ಯಾಮರಾಗಳು ಸೆರೆ ಹಿಡಿದಿರಲಿಲ್ಲ, ಆದರೆ ಶ್ರೀಶಾಂತ್ ಅತ್ತಿದ್ದ ದೃಶ್ಯಗಳು ಮಾತ್ರ ಕಾಣಿಸಿದ್ದವು. ಈಗ ಬಿಡುಗಡೆಯಾಗಿರುವ ವಿಡಿಯೋದಲ್ಲಿ, ಹರ್‌ಭಜನ್ ಅವರು ಶ್ರೀಶಾಂತ್‌ಗೆ ಹೊಡೆಯುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.
ಇದನ್ನೂ ಓದಿ : ಭಾರತ ಏಕದಿನ ತಂಡಕ್ಕೆ ಕೆಎಲ್ ರಾಹುಲ್ ನಾಯಕ
ಈ ವಿಡಿಯೋ ಕುರಿತು ಅನೇಕ ಕ್ರಿಕೆಟ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಈ ಘಟನೆಯಿಂದಾಗಿ ಹರ್‌ಭಜನ್ ಸಿಂಗ್ ಅವರನ್ನು ಆ ಸೀಸನ್‌ನ ಉಳಿದ ಪಂದ್ಯಗಳಿಂದ ನಿಷೇಧಿಸಲಾಗಿತ್ತು.
ಈ ವಿವಾದದ ನಂತರ ಹರ್‌ಭಜನ್ ಸಿಂಗ್ ಹಲವು ಬಾರಿ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದ್ದರು. ಇಬ್ಬರೂ ಆಟಗಾರರು ನಂತರದಲ್ಲಿ ತಮ್ಮ ಸಂಬಂಧವನ್ನು ಸುಧಾರಿಸಿಕೊಂಡಿದ್ದು, ಇಂದಿಗೂ ಉತ್ತಮ ಸ್ನೇಹಿತರಾಗಿದ್ದಾರೆ. ಆದರೂ, ಈ ವಿಡಿಯೋ ಹಳೆಯ ಗಾಯಗಳನ್ನು ಕೆದಕಿದಂತಾಗಿದೆ.
ಇದನ್ನೂ ಓದಿ : ಬೆಂಗಳೂರಲ್ಲಿ ವಿರಾಟ್ ಕೊಹ್ಲಿ ಆಡೋದಿಲ್ಲ : ಆರ್‌ಸಿಬಿ ಅಭಿಮಾನಿಗಳಿಗೆ ಶಾಕ್
Harbhajan Singh Ugly Slapgate S Sreesanth vedio Released By Lalit Modi 18 Years back Kannada News



