
pataleshwar temple : ಗಣೇಶ.. ಅಥವಾ ಗಜವದನ … ಈತ ದೇವನನ್ನುವುದಕ್ಕಿಂತ ಗೆಳೆಯನೆಂದು ಕೊಂಡದ್ದೇ ನಮ್ಮಲ್ಲಿ ಹೆಚ್ಚು. ಗಣೇಶ ಹಬ್ಬ ಬಂದ್ರೆ ಸಾಕು ಹಿರಿಯರು ಕಿರಿಯರೆನ್ನದೆ ಹನೇಶನ ಹಬ್ಬ ಮಾಡೋಕೆ ಕಾಯುತ್ತಿರುತ್ತಾರೆ.
ಮನೆಗಳಲ್ಲಿ ಮಾತ್ರವಲ್ಲ . ರೋಡು ರೋಡುಗಳಲ್ಲಿ ಗಣೇಶನದ್ದೇ ಕಾರುಬಾರು ಈಗ ಮೊನ್ನೆ ಎಷ್ಟೇ ಗಣೇಶ ಚತುರ್ಥಿ ಮುಗಿದಿದೆ. ಆದ್ರೆ ಗಣೇಶ ಹಬ್ಬದ ಸಂಭ್ರಮ ಇನ್ನೂ ನಿಂತಿಲ್ಲ. ಪುಟ್ಟ ಮಕ್ಕಳ ಪಾಲಿಗಂತು ಗಣೇಶ ಸಹಪಾಠಿ ಇದ್ದಂತೆ.
ಪುಟ್ಟ ಮಕ್ಕಳಂತೂ ಗಣೇಶನಿಗೆ ಸೊಂಡಿಲು ಹೇಗೆ ಬಂತು , ಆನೆ ಮುಖ ಯಾಕಿದೆ ಅಂತ ಹಿರಿಯರನ್ನು ಕೇಳೇ ಇರುತ್ತಾರೆ. ಆಗ ಗೊತ್ತಿರೋರು ಶಿವ ಪಾರ್ವತಿಯ ಕಥೆಯನ್ನು ಹೇಳಿರುತ್ತೀರಾ.
ಹೌದು ಗಣೇಶನ ಆನೆಯ ತಲೆ ಬರೋ ಮುನ್ನ ಸಾಮಾನ್ಯ ಬಾಲಕನಂತೆ ಕಾಣುತ್ತಿದ್ದ. ತಾಯಿ ಪಾರ್ವತಿ ಮಣ್ಣಿನಿಂದ ನಿರ್ಮಿಸಿ ತನ್ನ ಶಕದ್ತಿಯಿಂದ ಗಣ ನಾಯಕನಿಗೆ ಜೀವ ನೀಡಿದ್ದಳು.
ಆದರೆ ತಾಯಿ ಮಾತನ್ನು ನೆರವೇರಿಸಲು ಹೋಗಿ ತಂದೆಯ ಗುರಿಯಾದ ಗಣೇಶ ತನ್ನ ತಲೆಯನ್ನು ಕಳೆದುಕೊಂಡ. ಆದ್ರೆ ತಾಯಿಯ ಪಾರ್ವತಿಯ ಹಠಕ್ಕೆ ಸೋತ ಸದಾಶಿವ ಬಾಲಕನಿಗೆ ಆನೆಯ ಮುಖ ನೀಡಿದ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ.
ಅದ್ಯಾಕೆ ಈ ಕತೆ ಇಲ್ಲಿ ಅಂತ ನೀವು ಯೋಚನೆ ಮಾಡುತ್ತಿರಬಹುದು. ನಾವು ಹೇಳಕ್ಕೆ ಹೊರಟಿರುವ ದೇವಾಲಯ ಇದೇ ಕಥೆಗೆ ಸಂಬಂಧಪಟ್ಟದ್ದು. ಹೌದು ಇದು ಗಣೇಶನಾಗುವ ಮುನ್ನ ಇದ್ದ ಬಾಲಕನ ರುಂಡ ಬಿದ್ದ ಜಾಗ.
ಇದನ್ನೂ ಓದಿ : ಪಿತೃ ಪಕ್ಷ ಯಾವಾಗ ಪ್ರಾರಂಭ: ದಿನಾಂಕ, ಪಿತೃ ತರ್ಪಣ, ಶ್ರಾದ್ಧ ನಿಯಮಗಳೇನು ?
ಇಲ್ಲೇ ಶಿವ ತನ್ನ ತ್ರಿಶೂಲದಿಂದ ಬಾಲ ಗಣೇಶನ ರುಂಡವನ್ನು ಕತ್ತರಿಸಿದ್ದ ಅಂತ ನಂಬಲಾಗುತ್ತದೆ. ಈ ದೇವಾಲಯವಿರುವುದು ದೇವಭೂಮಿ ಉತ್ತರಾಖಂಡ್ ಪಾತಾಳೇಶ್ವರ ಪರ್ವತದಲ್ಲಿ.
ಇದು ನೈಸರ್ಗಿಕವಾಗಿ ನಿರ್ಮಿತವಾದ ಪುರಾತನ ಗುಹೆ.
ಪರ್ವತದ ಒಳಗೆ ಸ್ಥಿತವಾಗಿರುವ ಈ ಗುಹೆಯನ್ನು ಪ್ರವೇಶಿಸುವಾಗಲೇ ಒಂದು ಆಧ್ಯಾತ್ಮಿಕ ಲೋಕಕ್ಕೆ ಪ್ರವೇಶಿಸಿದಂತೆ ಭಾಸವಾಗುತ್ತಂತೆ . ಸುಮಾರು 160 ಮೀಟರ್ ಉದ್ದ ಹಾಗು 90 m ಆಳವನ್ನು ಹೊಂದಿದೆ.
ಇಲ್ಲಿ ಒಳ ಪ್ರವೇಶಿಸಲು ಕಡಿದಾದ ದ್ವಾರವಿದ್ದು ಮೆಟ್ಟಿಲುಗಳ ಸಹಾಯದಿಂದ ಒಳಗೆ ಹೋಗಲಾಗುತ್ತೆ ಆದರೆ ಈ ಮೆಟ್ಟಿಲುಗಳು ಎಷ್ಟು ಕಡಿದಾಗಿವೆ ಅಂದ್ರೆ ಒಂದು ಸಮಯಕ್ಕೆ ಒಬ್ಬರು ಮಾತ್ರ ತೆರಳಬಹುದಾಗಿದೆ.
ಇನ್ನು ಇಲ್ಲಿಯ ನಂಬಿಕೆಗಳ ಪ್ರಕಾರ ಈ ಗುಹೆಯನ್ನು ಪ್ರವೇಶಿಸಲು ಮೊದಲು 4 ದ್ವಾರಗಳು ಇದ್ದವಂತೆ. ಅವುಗಳನ್ನು ರಣದ್ವಾರ ಧರ್ಮ ದ್ವಾರ ,ಪಾಪದ್ವಾರ ಹಾಗೂ ಮೋಕ್ಷದ್ವಾರ ಅಂತ ಕರೆಯಲಾಗುತ್ತಿತ್ತು.
ಇದನ್ನೂ ಓದಿ : ಇದು ಕೇರಳದ ಶಕ್ತಿಶಾಲಿ ಶಿವನ ಆಲಯ : ಇಲ್ಲಿ ಹೆಣ್ಣು ಮಕ್ಕಳಿಗೆ ಹಗಲಲ್ಲಿ ಇಲ್ಲ ಪ್ರವೇಶ
ಆದರೆ ರಾವಣನ ಮೃತ್ಯುವಿನ ನಂತರ ಪಾಪ ದ್ವಾರವನ್ನು ಹಾಗೂ ಮಹಾಭಾರತ ಯುದ್ಧದ ಬಳಿಕ ರಣದ್ವಾರವನ್ನು ಮುಚ್ಚಲಾಯಿತು. ಇನ್ನು ಇಲ್ಲಿಂದ ಕೈಲಾಸಕ್ಕೆ ನೇರ ದಾರಿ ಇದೆ ಅಂತ ನಂಬಲಾಗುತ್ತದೆ.
ಆದರೆ ಇಲ್ಲಿ ಆಮ್ಲಜನಕದ ಕೊರತೆ ಇರೋ ಕಾರಣಕ್ಕೆ ದಾರಿಯಲ್ಲಿ ಮುಂದುವರಿಯುವ ಪ್ರಯತ್ನ ಯಾರು ಮಾಡಿಲ್ಲ ಅಂತ ಅನ್ನಲಾಗುತ್ತೆ. ಇನ್ನು ಇಲ್ಲಿ ಕಾಣುವ ಅಚ್ಚರಿ ಅಂದ್ರೆ ಈ ಗುಹೆಗೆ ಪ್ರವೇಶಿಸುತ್ತಿದ್ದಂತೆ ದೇವಾನುದೇವತೆಗಳ ಕೆತ್ತನೆಗಳು ನಮಗೆ ಕಾಣಿಸುತ್ತದೆ.
ಇದನ್ನು ಪಾಂಡವರು ಇಲ್ಲಿ ಆಗಮಿಸಿದಾಗ ಕೆತ್ತಿಸಿದರು ಅನ್ನುವ ನಂಬಿಕೆ ಇದೆ. ಜೊತೆಗೆ ಇಲ್ಲಿ ಅವರು ಸ್ಥಾಪಿಸಿದರು ಎನ್ನಲಾದ ಶಿವಲಿಂಗವು ಇದೆ . ಅಚ್ಚರಿ ಏನೆಂದರೆ ಈ ಶಿವಲಿಂಗಕ್ಕೆ ನಿತ್ಯವೂ ಒಂದು ಬಂಡೆಯ ಮೂಲಕ ನೀರು ಬೀಳುತ್ತಿರುತ್ತದೆ.
ಆದ್ರೆ ಪೂರ್ತಿ ದಿನ ಬೀಳುತ್ತಿದ್ರೂ ಲಿಂಗದ ಒಂದು ಭಾಗ ಮಾತ್ರ ಒದ್ದೆಯಾಗಿ ಕಾಣುತ್ತದೆ. ಮತ್ತೊಂದು ಭಾಗದಲ್ಲಿ ಬಿದ್ದ ನೀರನ್ನು ಶಿವ ಲಿಂಗ ಹೀರಿಕೊಂಡು ಒಣಗಿದ ಸ್ಥಿತಿಯಲ್ಲಿ ನಮಗೆ ಕಾಣುತ್ತದೆ.
ಈ ಲಿಂಗದ ಮತ್ತೊಂದು ವಿಶೇಷ ಅಂದ್ರೆ ಇದು ದಿನದಿಂದ ದಿನಕ್ಕೆ ಬೆಳೆಯುತ್ತಿದೆಯಂತೆ. ಯಾವಾಗ ಈ ಲಿಂಗವು ಗುಹೆಯ ಮೇಲ್ಬಾಗಕ್ಕೆ ತಾಗುತ್ತದೆಯೋ ಆಗ ಜಗತ್ತಿನಲ್ಲಿ ಪ್ರಳಯವಾಗುತ್ತೆ ಅನ್ನೋ ನಂಬಿಕೆ ಇದೆ.
ಇನ್ನು ಇಲ್ಲಿ ಸಪ್ತ ಋಷಿಕುಂಡವು ಇದರಲ್ಲಿನ ನೀರಿನ ಮಟ್ಟವು ವರ್ಷ ಪೂರ್ತಿ ಒಂದೇ ರೀತಿ ಇರುತ್ತದೆ. ಜೊತೆಯಲ್ಲಿ ಇಲ್ಲಿ ಶಂಕರಾಚಾರ್ಯರು ನಿರ್ಮಿಸಿದರು ಎನ್ನಲಾಗುವ ತಾಮ್ರದ ಲಿಂಗವು ಇದ್ದು ಬರುವ ಭಕ್ತರು ಇದನ್ನು ಪೂಜಿಸಿ ಆರಾಧಿಸುತ್ತಾರೆ.
ಇನ್ನು ಗಣೇಶನ ವಿಷಯಕ್ಕೆ ಬರುವುದಾದರೆ ಇಲ್ಲಿ ಗಣೇಶನ ಶಿರದ ರೀತಿಯಲ್ಲಿ ಶಿಲೆಯೊಂದು ನಮಗೆ ಕಾಣಿಸಿಗುತ್ತದೆ ಇದರ ಮೇಲ್ಭಾಗದಲ್ಲಿ ಸಹಸ್ರದಳ ಪದ್ಮದ ಚಿತ್ರವನ್ನು ಕೆತ್ತಲಾಗಿದೆ . ಇದೇ ಅಂದು ಕತ್ತರಿಸಲಾದ ಗಣೇಶನ ತಲೆ ಅಂತ ಜನರು ನಂಬಿಕೊಂಡು ಹಾಗೂ ಆರಾಧಿಸಿಕೊಂಡು ಬರುತ್ತಿದ್ದಾರೆ.
pataleshwar temple ಇದು ಬೆಂಗಳೂರಿನಿಂದ ಸುಮಾರು 2242 ಕಿಲೋ ಮೀಟರ್ ದೂರದಲ್ಲಿದೆ . ರಸ್ತೆ ಮಾರ್ಗದಲ್ಲಿ ಹೋಗೋದಾದ್ರೆ ಸುಮಾರು 40 ಗಂಟೆ ಬೇಕಾಗುತ್ತೆ. ಇನ್ನು ಡೆಹರಾದೂನ್ ಗೆ ಹೋದ್ರೆ ಅಲ್ಲಿ ಸುಮಾರು 224 ಕಿಲೋ ಮೀಟರ್ ದೂರದಲ್ಲಿದೆ ಈ ದೇವಾಲಯ.



