ಮದ್ದೂರು : ಹಿಂದೂಗಳ ಮೇಲೆ ಕಾಂಗ್ರೆಸ್‌ ಲಾಠಿಜಾರ್ಜ್, ದುಷ್ಕರ್ಮಿಗಳ ಮೇಲೆ ಯಾಕಿಲ್ಲ ಕ್ರಮ: ಸುನಿಲ್‌ ಕುಮಾರ್‌

Maddur Ganpati Festival : ಬೆಂಗಳೂರು : ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದ ಗಣೇಶೋತ್ಸವ ಮೆರವಣಿಗೆಯ ವೇಳೆಯಲ್ಲಿ ನಡೆದ ಕಲ್ಲುತೂರಾಟದ ವಿರುದ್ದ ಪ್ರತಿಭಟಿಸಿದ ಹಿಂದೂಗಳ ಮೇಲೆ ಕಾಂಗ್ರೆಸ್‌ ಲಾಠಿಚಾರ್ಜ್‌ ನಡೆಸಿದೆ.

ಆದರೆ ಕಲ್ಲುತೂರಾಟ ನಡೆಸಿದ ದುಷ್ಕರ್ಮಿಗಳ ವಿರುದ್ದ ಯಾಕೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಕಾರ್ಕಳ ಶಾಸಕರಾದ ವಿ.ಸುನಿಲ್‌ ಕುಮಾರ್‌ ಸರಕಾರವನ್ನು ಪ್ರಶ್ನಿಸಿದ್ದಾರೆ.

ಮದ್ದೂರಿನಲ್ಲಿ ಗಣೇಶ ವಿಸರ್ಜನೆಯ ವೇಳೆ ಮತಾಂಧರು ಕಲ್ಲು ತೂರಾಟ ನಡೆಸಿ ಹಿಂದು ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಪ್ರತಿಬಾರಿಯೂ ಇಂಥ ಘಟನೆ ಮರುಕಳಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಹಿಂದೂ ಸಾಂಸ್ಕೃತಿಕ ಚಟುವಟಿಕೆಗಳ‌ ಬಗ್ಗೆ ಅಸಹನೆ ಹಾಗೂ ಅಸಹಿಷ್ಣತೆ ಹೆಚ್ಚುತ್ತಿದೆ. ಪುನರಾವರ್ತಿತ ಘಟನೆಗಳತ್ತ ದೃಷ್ಟಿ ಹರಿಸಿದರೆ ಮಂಡ್ಯ ಜಿಹಾದಿ ಮನಸ್ಥಿತಿಯ ವ್ಯಕ್ತಿಗಳ ಆಡಂಬೋಲವಾಗುತ್ತಿರುವ ಅನುಮಾನ ಬರುತ್ತಿದೆ ಎಂದಿದ್ದಾರೆ.

ಹಳೆ ಮೈಸೂರು ಭಾಗದಲ್ಲಿ ಮತಾಂಧ ಶಕ್ತಿಗಳ ಕ್ರೋಢೀಕರಣವಾಗುತ್ತಿದ್ದರೂ ಸಿದ್ದರಾಮಯ್ಯ ಸರ್ಕಾರ, ಹಿಂದುಗಳು ಹಾಗೂ ಬಿಜೆಪಿಯತ್ತ ಬೊಟ್ಟು ತೋರುತ್ತಿದೆ. ಸಮಸ್ಯೆ ಇರುವ ಜಾಗಕ್ಕೆ ಟ್ರೀಟ್ಮೆಂಟ್ ಕೊಡುವುದಕ್ಕೆ ಕಾಂಗ್ರೆಸ್ ಸರ್ಕಾರಕ್ಕೆ ಭಯ ಕಾಡುತ್ತಿದೆಯೇ ಎಂದು ಸರಕಾರಕ್ಕೆ ಟಾಂಗ್‌ ಕೊಟ್ಟಿದ್ದಾರೆ.

ಇದನ್ನೂ ಓದಿ : ಚಿಕ್ಕಮಗಳೂರಲ್ಲಿ ಚಿನ್ನ ಪತ್ತೆ..! ಕಾಫಿನಾಡು ಇನ್ಮುಂದೆ ಚಿನ್ನದ ನಾಡು

ಮದ್ದೂರು ಗಣೇಶ ವಿಸರ್ಜನೆ : ಪ್ರಹ್ಲಾದ್‌ ಜೋಷಿ ಸವಾಲು

ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮಾಡುತ್ತಿದ್ದವರ ಮೇಲೆ ಕಲ್ಲುತೂರಾಟ ಮಾಡಿದ್ದು ಅಕ್ಷಮ್ಯ ಅಪರಾಧ. ಬಂಧನದ ಬೆನ್ನಲ್ಲೇ ಯಾವುದೇ ಕ್ರಮಕೈಗೊಳ್ಳದಿರುವುದು ಸರಿಯಲ್ಲ. ಸರಕಾರ ಅಪರಾಧಿಗಳ ಬೆಂಬಲಕ್ಕೆ ನಿಂತಿರುವುದು ದುರಂತ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪಿಎಫ್‌ಐ ಸಂಘಟನೆಯ ಜೊತೆ ಲಿಂಕ್‌ ಇದ್ದವರ ವಿರುದ್ದದ ಎಲ್ಲಾ ಕೇಸ್‌ ವಾಪಾಸ್‌ ಪಡೆದಿರುವ ಕಾರಣದಿಂದಲೇ ಇಂತಹ ಘಟನೆಗಳು ನಡೆಯುತ್ತಿದೆ. ಇದೀಗ ಅಮಾಯಕರ ಮೇಲೆ ಲಾಠಿಚಾರ್ಜ್‌ ಮಾಡುವ ಕೆಲಸವನ್ನು ಮಾಡಿದೆ.

ಇದನ್ನೂ ಓದಿ : ಜಾತಿಗಣತಿ ಸಮೀಕ್ಷೆ, ಹೊಸ ಜಾತಿಯ ನಾಮಕರಣ ಬೇಡ : ಸುನಿಲ್‌ ಕುಮಾರ್‌

ಅಮಾಯಕರ ಮೇಲೆ ಹಲ್ಲೆ ಮಾಡಿದ್ರೆ ಸುಮ್ಮನೆ ಕೂರುವುದಕ್ಕೆ ಸಾಧ್ಯವಿಲ್ಲ. ನಾನೇ ಮದ್ದೂರಿಗೆ ಬರ್ತೇವೆ ಅಂತಾ ಪ್ರಹ್ಲಾದ್‌ ಜೋಷಿ ಸರಕಾರಕ್ಕೆ ಸವಾಲು ಹಾಕಿದ್ದಾರೆ.

Stone Pelting at Maddur Ganpati Festival Sparks Massive Protests Police Lathi-Charge

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories