Suhana Syed wedding: ಮಂತ್ರ ಮಾಂಗಲ್ಯದ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟ, ಸರಿಗಮಪ ಖ್ಯಾತಿಯ ಸುಹಾನಾ ಸೈಯದ್
Suhana Syed wedding: ಝೀ ಕನ್ನಡದ ಸರಿಗಮಪ(SaReGaMaPa) ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಗಳಿಸಿದ್ದ ಗಾಯಕಿ ಸುಹಾನಾ ಸೈಯ್ಯದ್ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಸ್ಲಿಂ ಧರ್ಮಕ್ಕೆ ಸೇರಿರುವ ಸುಹಾನಾ ಸೈಯ್ಯದ್ ಅವರು ತಮ್ಮ ಗೆಳೆಯ, ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಜೊತೆ ಮಂತ್ರ ಮಾಂಗಲ್ಯದ ಮೂಲಕ ವಿವಾಹವಾಗಿದ್ದಾರೆ.
ಗಾಯಕಿ ಸುಹಾನಾ ಝೀ ಕನ್ನಡ ವೇದಿಕೆಯಲ್ಲಿ ಭಕ್ತಿ ಗೀತೆಯನ್ನು ಹಾಡುವ ಮೂಲಕ ಸದ್ದು ಮಾಡಿದ್ದರು. ರಿಯಾಲಿಟಿ ಶೋನಲ್ಲಿ ಇವರು ಆಯ್ಕೆ ಮಾಡುತ್ತಿದ್ದ ಹಾಡು ಹಾಗೂ ಧರಿಸುತ್ತಿದ್ದ ಉಡುಗೆ ತೊಡುಗೆಗಳನ್ನು ಸಾಕಷ್ಟು ಸುದ್ದಿ ಮಾಡಿತ್ತು. ಮುಸ್ಲಿಂ ಧರ್ಮದ ಟೀಕೆಯ ನಡುವೆಯೂ ಕಿರುತೆರೆ ರಿಯಾಲಿಟಿ ಶೋಗಳಲ್ಲಿ ಸುಹಾನಾ ಮಿಂಚಿದ್ದಾರೆ.
Also Read: ದೈವಕ್ಕೆ ಅಪಚಾರ ಎಂದಿಗೂ ಎಸಗಿಲ್ಲ: ದೈವ ನರ್ತಕರ ಆರೋಪಗಳಿಗೆ ರಿಷಬ್ ಶೆಟ್ಟಿ ಉತ್ತರ
16 ವರ್ಷಗಳಿಂದ ಪರಸ್ಪರ ಪರಿಚಯವಿರುವ ಸುಹಾನಾ ಹಾಗೂ ನಿತಿನ್ ಇಂದು ಮದುವೆಗೆ ಮಂತ್ರ ಮಾಂಗಲ್ಯ ಪದ್ಧತಿ ಆಯ್ಕೆ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರೀತಿಯ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ಶೇರ್ ಮಾಡಿದ್ದ ಸುಹಾನಾ, ಪ್ರತಿ ಜೀವಿಯೂ ಪ್ರೀತಿಯನ್ನು ಹುಡುಕುತ್ತದೆ.
ಪ್ರತಿಯೊಂದು ಹೃದಯವೂ ಪ್ರೀತಿಗಾಗಿ ಹಾತೊರೆಯುತ್ತದೆ. ಪ್ರೀತಿಗೆ ಕೊನೆಯಿಲ್ಲ, ಇದೊಂದು ಅನುಮಾನ, ಭಯಗಳನ್ನು ಮೀರಿದ ಪ್ರಯಾಣ. ಈ ಪ್ರೀತಿಗೆ ನಾವು ಸಾಕ್ಷಿಯಾಗುತ್ತಾ ನಮ್ಮ ಈ ಗುಟ್ಟನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ತಮ್ಮೆಲ್ಲರ ಆಶೀರ್ವಾದವಿರಲಿ ಎಂದು ಬರೆದುಕೊಂಡಿದ್ದರು.
Also Read: Bigg Boss 12: ಸ್ಪಂದನಾ ಜೊತೆಗಿನ ಜಗಳವೇ ಧ್ರುವಂತ್ಗೆ ಮುಳುವಾಯ್ತು : ಫಿನಾಲೆ ರೇಸ್ನಿಂದ ಧ್ರುವಂತ್ ಔಟ್
ಸರಳ ವಿವಾಹದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸುಹಾನಾ ಹಾಗೂ ನಿತಿನ್ ಮದುವೆಗೆ ಆಗಮಿಸಿದ, ಶುಭಕೋರಿದ ಎಲ್ಲರಿಗೆ ಧನ್ಯವಾದ ಅರ್ಪಿಸಿದ್ದಾರೆ. ನಿತಿನ್ ಅವರನ್ನು ಇಂಪ್ರೆಸ್ ಮಾಡಲು ಯಾವ ಹಾಡು ಹಾಡಿದ್ದೀರಿ ಎಂಬ ಮಾಧ್ಯಮಗಳ ಪ್ರಶ್ನೆಗೆ ಮುಗುಳ್ನಕ್ಕ ಸುಹಾನಾ ಈವರೆಗೆ ಅವರಿಗಾಗಿ ನಾನು ಯಾವ ಹಾಡನ್ನು ಹೇಳಿಲ್ಲ.
ಆದರೆ ಇಂದು ಅವರಿಗಾಗಿ ಹಾಡುವೆ ಎನ್ನುತ್ತಾ ‘ ನಗುವಾ ನಯನ ಮಧುರ ಮೌನ’ ಹಾಡಿಗೆ ಧ್ವನಿಯಾದರು.



