Bigg Boss 12: ಸ್ಪಂದನಾ ಜೊತೆಗಿನ ಜಗಳವೇ ಧ್ರುವಂತ್ಗೆ ಮುಳುವಾಯ್ತು : ಫಿನಾಲೆ ರೇಸ್ನಿಂದ ಧ್ರುವಂತ್ ಔಟ್
Bigg Boss 12: ಬಿಗ್ಬಾಸ್ ಸೀಸನ್ 12 ಹಲವು ಅಡೆತಡೆಗಳ ನಡುವೆಯೂ ಯಶಸ್ವಿಯಾಗಿ ಸಾಗುತ್ತಿದೆ. ಅತೀ ಹೆಚ್ಚು ಟಿಆರ್ಪಿ ಹೊಂದಿರುವ ಶೋ ಎನಿಸಿರುವ ಬಿಗ್ಬಾಸ್ ಸೀಸನ್ 12(Bigg Boss 12) ಈಗಾಗಲೇ ಫಿನಾಲೆ ವಾರದಲ್ಲಿದೆ. ಶೋ ಶುರುವಾಗಿ ಮೂರನೇ ವಾರದಲ್ಲಿಯೇ ಫಿನಾಲೆ ವಾರ ಆರಂಭಗೊಂಡಿರುವುದು ಬಿಗ್ಬಾಸ್ ಕನ್ನಡ ಇತಿಹಾಸದಲ್ಲಿ ಇದೇ ಮೊದಲು.
ಕಳೆದ ವಾರ ಫಿನಾಲೆ ರೇಸ್ನಿಂದ ಹೊರಗುಳಿದಿದ್ದ ಧ್ರುವಂತ್ ಅಶ್ವಿನಿ ಗೌಡ ಅವರನ್ನು ಫಿನಾಲೆ ವಾರಕ್ಕೆ ಆಯ್ಕೆ ಮಾಡಿದ್ದರು. ಇದಾದ ಬಳಿಕ ಅಶ್ವಿನಿ ತಮ್ಮೊಂದಿಗೆ ಸರಿಯಾಗಿ ಮಾತನಾಡುತ್ತಿಲ್ಲ ಎಂಬ ಅಸಮಾಧಾನವನ್ನೂ ಹೊರ ಹಾಕುತ್ತಲೇ ಇದ್ದರು.
ಜಂಟಿ ತಂಡದಲ್ಲಿದ್ದ ಸ್ಪಂದನಾ ಅವರೊಂದಿಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದ ಧ್ರುವಂತ್ ನೀವು ಕೇವಲ ಮೇಕಪ್ ಮಾಡಲಿಕ್ಕೆ ಲಾಯಕ್ಕು ಎಂಬೆಲ್ಲ ಮಾತುಗಳನ್ನಾಡಿದ್ದರು. ಆದರೆ ಇದೀಗ ಧ್ರುವಂತ್ ಅವರು ಮಾಡಿದ ಈ ಜಗಳವೇ ಅವರಿಗೆ ಮುಳುವಾಗಿ ಪರಿಣಮಿಸಿದೆ.
Also read: Raju Talikote : ಹಿರಿಯ ರಂಗಕರ್ಮಿ ರಾಜು ತಾಳಿಕೋಟೆ ಹೃದಯಾಘಾತದಿಂದ ನಿಧನ
ಇಂದು ಫಿನಾಲೆ ವಾರದ ಟಾಸ್ಕ್ ಆರಂಭಗೊಂಡಿದ್ದು ಸಂಪೂರ್ಣ ವಾರದ ಟಾಸ್ಕ್ಗಳಿಂದ ಯಾರನ್ನಾದರೂ ಹೊರಗಿಡುವ ಅಧಿಕಾರವನ್ನು ಸ್ಪಂದನಾ ಅವರಿಗೆ ನೀಡಲಾಗಿತ್ತು. ಈ ಅವಕಾಶ ಬಳಸಿಕೊಂಡ ಸ್ಪಂದನಾ ಧ್ರುವಂತ್ ಅವರನ್ನೇ ಟಾಸ್ಕ್ಗಳಿಂದ ಹೊರಗಿಟ್ಟಿದ್ದಾರೆ. ಈಗಾಗಲೇ ಈ ಪ್ರೊಮೋ ಬಿಡುಗಡೆಯಾಗಿದ್ದು ಈ ಎಪಿಸೋಡ್ ಇಂದು ರಾತ್ರಿ ಪ್ರಸಾರ ಕಾಣಲಿದೆ.
ಒಂಟಿ – ಜಂಟಿ ಟಾಸ್ಕ್ಗಳಿದ್ದ ಸಂದರ್ಭದಲ್ಲಿ ಸ್ಪಂದನಾ ಮೇಲೆ ದರ್ಪ ತೋರಿದ್ದ ಧ್ರುವಂತ್ಗೆ ಸರಿಯಾದ ಶಾಸ್ತಿಯಾಗಿದೆ. ಕರ್ಮ ರಿರ್ಟನ್ಸ್ ಅಂದ್ರೆ ಇದೇನೆ ಅಂತಾ ನೆಟ್ಟಿಗರು ಕಮೆಂಟ್ ಮಾಡ್ತಾ ಇದ್ದಾರೆ. ಈ ಫಿನಾಲೆ ರೇಸ್ನಲ್ಲಿ ಯಾರು ಜಯ ಸಾಧಿಸಬಹುದು ? ಎಂಬ ಕುತೂಹಲ ವೀಕ್ಷಕರಲ್ಲೂ ಮನೆ ಮಾಡಿದ್ದು ಶೀಘ್ರದಲ್ಲೇ ಈ ಕುತುಹೂಲಕ್ಕೂ ಬಿಗ್ಬಾಸ್ ತೆರೆ ಎಳೆಯಲಿದ್ದಾರೆ.
Also Read: ಬಾಹುಬಲಿ, ಸಲಾರ್ ದಾಖಲೆಗಳನ್ನು ಪುಡಿ : ಕಾಂತಾರ ಚಾಪ್ಟರ್ 1 ಗಳಿಕೆ ಎಷ್ಟು ಗೊತ್ತಾ ?



