ಕೇವಲ 100 ರೂಪಾಯಿಗಳಲ್ಲಿ ಸುಲಭವಾಗಿ ಸಿಗಬಲ್ಲ ಪ್ರೊಟೀನ್ ಮೂಲಗಳ ಬಗ್ಗೆ ಇಲ್ಲಿದೆ ಮಾಹಿತಿ

Top Protein Sources : ಶ್ರಮದಾಯಕ ಜೀವನ ಈಗ ಎಲ್ಲರದ್ದಾಗಿ ಉಳಿದಿಲ್ಲ. ದೈಹಿಕ ಕೆಲಸಗಳಿಗಿಂತ ಮಾನಸಿಕ ಒತ್ತಡವಿರುವ ಕಾರ್ಯಗಳೇ ಹೆಚ್ಚಾಗಿವೆ. ಇಂತಹ ಸಂದರ್ಭದಲ್ಲಿ ತೂಕ ನಿರ್ವಹಣೆ ಮಾಡಲು ನಾವು ತುಸು ಹೆಚ್ಚೇ ಒತ್ತು ನೀಡಬೇಕಾಗುತ್ತದೆ.
ತೂಕ ನಿರ್ವಹಣೆ ಮಾಡಲು ಪ್ರೊಟೀನ್ ಸೇವನೆ ಜಾಸ್ತಿ ಇರಬೇಕು. ಹೀಗಾಗಿ ಅನೇಕರು ಕೈಗೆಟುವ ದರದಲ್ಲಿ ಯಾವುದಾದರೂ ಪ್ರೊಟೀನ್ ಮೂಲಗಳು ಸಿಗಬಹುದೇ ? ಎಂಬ ಹುಡುಕಾಟದಲ್ಲಿರುತ್ತಾರೆ. ನೀವು ಕೂಡ ಇದೇ ಮಾದರಿಯ ಹುಡುಕಾಟದಲ್ಲಿದ್ದರೆ ಮಾರುಕಟ್ಟೆಯಲ್ಲಿ ನೂರು ರೂಪಾಯಿಗೂ ಕಡಿಮೆ ದರದಲ್ಲಿ ಸಿಗಬಲ್ಲ ಜನಸ್ನೇಹಿ ಪ್ರೊಟೀನ್ ಮೂಲಗಳ ಬಗ್ಗೆ ಇಲ್ಲಿದೆ ಮಾಹಿತಿ.
100 ರೂಪಾಯಿಗೂ ಕಡಿಮೆ ದರದಲ್ಲಿ ಸಿಗುವ ಪ್ರೊಟೀನ್ ಮೂಲಗಳು :
ಮೊಟ್ಟೆಗಳು : ಮೊಟ್ಟೆಗಳು ಪ್ರೋಟೀನ್ನ ಸಂಪೂರ್ಣ ಮೂಲವಾಗಿದ್ದು, ಲಭ್ಯವಿರುವ ಅತ್ಯಂತ ಒಳ್ಳೆ ಆಯ್ಕೆಗಳಲ್ಲಿ ಒಂದಾಗಿದೆ. ನೀವು ಅವುಗಳನ್ನು ಬೇಯಿಸಬಹುದು, ಸ್ಕ್ರಾಂಬಲ್ ಮಾಡಬಹುದು ಅಥವಾ ಕರಿಯಲ್ಲಿ ಹಾಕಬಹುದು. ಮೊಟ್ಟೆಗಳು ಯಾವುದೇ ವಿಧದಲ್ಲಿ ತಿಂದರೂ ಆಹ್ಲಾದಕರ ಎನಿಸುತ್ತದೆ.
.ಪನ್ನೀರು : ಇದು ಪ್ರೋಟೀನ್ನ ಉತ್ತಮ ಸಸ್ಯಾಹಾರಿ ಮೂಲವಾಗಿದೆ. ಪನ್ನೀರ್ ಭಕ್ಷ್ಯಗಳನ್ನು ತಯಾರಿಸಲು ನೀವು ಕೇವಲ 100 ಗ್ರಾಂ ಪನ್ನೀರು ಖರೀದಿ ಮಾಡಿದರೆ ಸಾಕು. ಅದರಲ್ಲೂ ಮನೆಯಲ್ಲಿಯೇ ತಯಾರಿಸುವ ಪನ್ನೀರು ಆರೋಗ್ಯಕ್ಕೆ ಮತ್ತಷ್ಟು ಒಳ್ಳೆಯದು.
ಇದನ್ನೂ ಓದಿ : ಮಹಿಳೆಯರೇ…! ಈ ೮ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸಬೇಡಿ : ವಿಟಮಿನ್ ಡಿ ಕೊರತೆ ನಿಮ್ಮನ್ನು ಕಾಡುತ್ತಿರಬಹುದು
ಸೋಯಾ ಚಂಕ್ಗಳು : ಮೊಟ್ಟೆ ಹಾಗೂ ಪನ್ನೀರಿನ ಬಗ್ಗೆ ಬಹುತೇಕರಿಗೆ ತಿಳಿದಿದೆ. ಆದರೆ ಸೋಯಾ ಚಂಕ್ಸ್ ಪ್ರೊಟೀನ್ ಮೂಲ ಎನ್ನುವುದರ ಬಗ್ಗೆ ಬಹುತೇಕರಿಗೆ ಮಾಹಿತಿ ಇಲ್ಲ. 100 ಗ್ರಾಂ ಸೋಯಾ ಚಂಕ್ಸ್ ನಿಮಗೆ 52 ಗ್ರಾಂ ಪ್ರೊಟೀನ್ ನೀಡುತ್ತದೆ. ಬಿರಿಯಾನಿ, ಕರ್ರಿ ರೂಪದಲ್ಲಿ ನೀವು ಸೋಯಾ ಚಂಕ್ಸ್ ಸೇವನೆ ಮಾಡಬಹುದಾಗಿದೆ.
ಕಡ್ಲೆಕಾಳು : ಪೌಷ್ಟಿಕ ಮತ್ತು ಪ್ರೋಟೀನ್-ಭರಿತ ಆಹಾರಗಳಲ್ಲಿ ಕಪ್ಪು ಕಡ್ಲೆಗಳು ಕೂಡ ಒಂದಾಗಿವೆ. ಒಂದು ಕಪ್ ಸುಮಾರು 19 ಗ್ರಾಂ ಪ್ರೋಟೀನ್ ನೀಡುತ್ತದೆ, ಮತ್ತು ನೀವು ಅದನ್ನು ಬೇಯಿಸಿದ, ಹುರಿದ ಅಥವಾ ಸರಳವಾದ ಮೇಲೋಗರದಲ್ಲಿ ಆನಂದಿಸಬಹುದು.
ರಾಜ್ಮಾ : ಇದು ಕೂಡ ಸಸ್ಯಮೂಲದಿಂದ ಸಿಗಬಹುದಾದ ಉತ್ತಮ ಪ್ರೊಟೀನ್ ಮೂಲವಾಗಿದೆ. 100 ಗ್ರಾಂ ರಾಜ್ಮಾದಿಂದ ನಿಮಗೆ 24 ಗ್ರಾಂ ಪ್ರೊಟೀನ್ ಸಿಗಲಿದೆ.
ಮೊಸರು : ಮೊಸರು ಕೇವಲ ಬಾಯಿ ರುಚಿಗೆ ಮಾತ್ರವಲ್ಲ. ಇದು ಪ್ರೊಟೀನ್ನಿಂದಲೂ ಸಮೃದ್ಧವಾಗಿದೆ. ಪ್ರತಿ 100 ಗ್ರಾಂನಲ್ಲಿ ನಿಮಗೆ 12 ಗ್ರಾಂ ಪ್ರೊಟೀನ್ ಸಿಗುತ್ತದೆ. ಇದನ್ನು ನೀವು ಹಾಗೆಯೇ ಕುಡಿಯಬಹುದು. ಅಥವಾ ಸಲಾಡ್ಗಳೊಂದಿಗೆ ಸೇರಿಸಿಕೊಳ್ಳಬಹುದು.
ಇದನ್ನೂ ಓದಿ : ಪ್ರತಿಯೊಬ್ಬ ಮಹಿಳೆ ತಿಳಿದುಕೊಳ್ಳಲೇ ಬೇಕಾದ ಆಹಾರ ತಪಾಸಣೆಗಳು
ಕಡ್ಲೆ ಹಿಟ್ಟು : ಕಡ್ಲೆಹಿಟ್ಟು ನಿಮಗೆ ಮಾರುಕಟ್ಟೆಯಲ್ಲಿ ಅತ್ಯಂತ ಅಗ್ಗದ ದರಕ್ಕೆ ದೊರೆಯುತ್ತದೆ. 100 ಗ್ರಾಂ ಕಡ್ಲೆಹಿಟ್ಟಿನಲ್ಲಿ ನಿಮಗೆ 22 ಗ್ರಾಂ ಪ್ರೊಟೀನ್ ದೊರೆಯುತ್ತದೆ. ನೀವು ತಯಾರಿಸುವ ರೊಟ್ಟಿಗಳಲ್ಲಿ ಕಡ್ಲೆಹಿಟ್ಟನ್ನು ಸೇರಿಸಿಕೊಳ್ಳಬಹುದು.
.ಟೋಫುಗಳು : ಇದು ಕೂಡಾ ಸೋಯಾಬಿನ್ ಮೂಲದಿಂದ ಬರುವ ಪದಾರ್ಥ. ಡೈರಿ ಉತ್ಪನ್ನಗಳನ್ನು ತಿನ್ನದವರು ಟೋಫುಗಳನ್ನು ತಿನ್ನಬಹುದು. ಸೋಯಾಬಿನ್ನ ಹಾಲನ್ನು ತೆಗೆದು ಟೋಪುಗಳನ್ನು ತಯಾರಿಸಲಾಗುತ್ತದೆ. ನೀವು ಪನ್ನೀರಿನ ರೂಪದಲ್ಲಿಯೇ ಟೋಪುಗಳನ್ನು ಬಳಸಬಹುದಾಗಿದೆ.
ತೊಗರಿಬೆಳೆಗಳು : ಕಡ್ಲೆಕಾಳುಗಳಂತೆಯೇ ತೊಗರಿ ಬೆಳೆಕೂಡ ಉತ್ತಮ ಪ್ರೊಟೀನ್ ಮೂಲವಾಗಿದೆ. ಪ್ರತಿನಿತ್ಯ ನೀವು ದಾಲ್ನ ರೂಪದಲ್ಲಿ ಪ್ರೊಟೀನ್ಗಳನ್ನು ಸೇವನೆ ಮಾಡಬಹುದಾಗಿದೆ.
Health tips Top Protein Sources Under 100 rs The Best Budget-Friendly Foods for Your Muscle Gain



