ಐಪಿಎಲ್ನಲ್ಲಿ ಬಿಸಿಸಿಐ ಮಹತ್ವದ ಬದಲಾವಣೆ : ಅಭಿಮಾನಿಗಳಿಗೆ ಗುಡ್‌ನ್ಯೂಸ್

IPL 2026 : ಇಂಡಿಯನ್ ಪ್ರೀಮಿಯರ್ ಲೀಗ್ಗೆ ಇರುವ ಅಭಿಮಾನಿಗಳ ಸಂಖ್ಯೆಗೆ ಬರಗಾಲವಿಲ್ಲ. ಅದರಲ್ಲೂ ಕಳೆದ ಬಾರಿ ಆರ್ಸಿಬಿ ಐಪಿಎಲ್ ಕಪ್ ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿತ್ತು.
ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಗಿಂತಲೂ ಐಪಿಎಲ್ಗೆ ಅಭಿಮಾನಿಗಳು ಜಾಸ್ತಿ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕಳೆದ ಬಾರಿಯಂತೂ ಆರ್ಸಿಬಿ ಅಭಿಮಾನಿಗಳಿಗಾದ ಸಂಭ್ರಮ ಪದಗಳಲ್ಲಿ ವರ್ಣಿಸುವಂತದ್ದಲ್ಲ.
ಇನ್ನೂ ಆರ್ಸಿಬಿ ಗೆಲುವಿನ ಸಿಹಿ ಅಭಿಮಾನಿಗಳ ಎದೆಯಲ್ಲಿ ಮಾಸಿಲ್ಲ. ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ ಅಭಿಮಾನಿಗಳಿಗೆ ಮತ್ತೊಂದು ಸಂತೋಷದ ವಿಚಾರ ಸಿಕ್ಕಿದೆ. ಮುಂದಿನ ಸೀಸನ್ನಲ್ಲಿ ಐಪಿಎಲ್ ಪಂದ್ಯಾವಳಿಗಳ ಸಂಖ್ಯೆಯನ್ನು ಹೆಚ್ಚಿಸಲು ಬಿಸಿಸಿಐ ಚಿಂತಿಸಿದೆ ಎನ್ನಲಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL) ಮಹತ್ವದ ಬದಲಾವಣೆ ಆಗಲಿರುವುದು ಖಚಿತವಾಗಿದೆ. ಅದು ಕೂಡ ಪಂದ್ಯಗಳ ಸಂಖ್ಯೆಗಳ ಹೆಚ್ಚಳದೊಂದಿಗೆ ಎಂಬುದು ವಿಶೇಷ. ಅಂದರೆ ಐಪಿಎಲ್ 2026 ರಿಂದ ಹೆಚ್ಚುವರಿ 10 ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಚಿಂತಿಸಿದೆ.
ಈ ಹಿಂದೆಯೇ ಐಪಿಎಲ್ ಪಂದ್ಯಾವಳಿ ಹೆಚ್ಚಿಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸಿತ್ತು. ಆದರೆ ಈ ವರ್ಷ ಅದು ಸಾಧ್ಯವಾಗಿರಲಿಲ್ಲ. ಪಂದ್ಯಗಳು ಹೆಚ್ಚಾದರೆ ವಿದೇಶಿ ಆಟಗಾರರಿಗೆ ತೊಂದರೆಯಾಗುವ ಸಾಧ್ಯತೆ ಇತ್ತು.
ಇದನ್ನೂ ಓದಿ : ಕಾಪು ಮಾರಿಯಮ್ಮನ ದೇಗುಲಕ್ಕೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಪತ್ನಿ ದೇವಿಶಾ ಭೇಟಿ
IPL 2026 : ಐಪಿಎಲ್ 2027 ರಿಂದ 94 ಪಂದ್ಯ
ಆದರೆ ಮುಂದಿನ ವರ್ಷದಿಂದ ಆಟಗಾರರಿಗೆ ಒಟ್ಟೂ 84 ಪಂದ್ಯಗಳನ್ನು ಆಡಿಸಲು ನಿರ್ಧರಿಸಲಾಗಿದೆ. 2027ರಿಂದ ಈ ಸಂಖ್ಯೆ 94ಕ್ಕೆ ಏರಲಿದೆ ಎನ್ನಲಾಗಿದೆ. ಇಲ್ಲಿಯವರೆಗೆ ಐಪಿಎಲ್ನಲ್ಲಿ 74 ಪಂದ್ಯಗಳು ಇರುತ್ತಿದ್ದವು.
ಮುಂದಿನ ವರ್ಷದಿಂದ 10 ಪಂದ್ಯಗಳ ಏರಿಕೆ ಹಿನ್ನೆಲೆಯಲ್ಲಿ ಪ್ರತಿ ತಂಡಗಳು 18 ಪಂದ್ಯಗಳನ್ನಾಡಲಿವೆ .BCCI ಮಾಧ್ಯಮ ಹಕ್ಕುಗಳ ಒಪ್ಪಂದದ ಪ್ರಕಾರ ಈ ಹಿಂದೆಯೇ ಪಂದ್ಯಗಳ ಸಂಖ್ಯೆ ಹೆಚ್ಚಿಸಬೇಕಿತ್ತು. ಆದರೆ ಆಟಗಾರರ ಅಲಭ್ಯತೆಯಿಂದಾಗಿ ಇದು ಸಾಧ್ಯವಾಗಿರಲಿಲ್ಲ.
ಆದರೆ ಐಪಿಎಲ್ ಪ್ರಸಾರಕ ಸಂಸ್ಥೆಗಳ ಮನವಿ ಹಿನ್ನೆಲೆಯಲ್ಲಿ ಬಿಸಿಸಿಐ ಮುಂದಿನ ವರ್ಷದಿಂದ ಪಂದ್ಯಗಳ ಸಂಖ್ಯೆ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ಇದರಿಂದ ಐಪಿಎಲ್ ಅಭಿಮಾನಿಗಳಿಗೆ ಹೆಚ್ಚುವರಿ ಪಂದ್ಯಗಳನ್ನು ವೀಕ್ಷಿಸುವ ಅವಕಾಶ ಸಿಗಲಿದ್ದು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
BCCI makes significant changes in IPL 2026 Good news for fans



