ಐಪಿಎಲ್ ಮಿನಿ ಹರಾಜಿನಲ್ಲಿ 8 ಆಟಗಾರರನ್ನು ಖರೀದಿಸಿದ ಆರ್ಸಿಬಿ : ಹೀಗಿದೆ ತಂಡದ ವಿವರ
2026ನೇ ಸಾಲಿನ ಐಪಿಎಲ್ ಮಿನಿ ಹರಾಜಿನಲ್ಲಿ ಭಾಗಿಯಾದ ಹಾಲಿ ಚಾಂಪಿಯನ್ ಆರ್ಸಿಬಿ ಫ್ರಾಂಚೈಸಿಯು 16.40 ಕೋಟಿ ರೂಪಾಯಿ ಮೊತ್ತಕ್ಕೆ 8 ಆಟಗಾರರನ್ನು ಖರೀದಿ ಮಾಡಿದೆ. ಈ ಮೂಲಕ ತನ್ನ ಸಾಮ್ರಾಜ್ಯವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ. ಈ 8 ಮಂದಿಯ ಪೈಕಿ 6 ದೇಶಿ ಕ್ರಿಕೇಟಿಗರು ಹಾಗೂ ಇಬ್ಬರು ವಿದೇಶಿ ಆಟಗಾರರಿಗೆ ಆರ್ಸಿಬಿ ಮಣೆ ಹಾಕಿದೆ.
ಈ ಬಾರಿ ಉತ್ತಮ ಆಟಗಾರರನ್ನೇ ತಂಡದಿಂದ ಕೈಬಿಟ್ಟಿದ್ದ ಆರ್ಸಿಬಿ ಯಾರನ್ನು ಸೇರಿಸಿಕೊಳ್ಳುತ್ತೆ ಎಂಬ ಆತಂಕ ಅಭಿಮಾನಿಗಳಲ್ಲಿತ್ತು. ಆದರೆ ತಂಡದ ಆಯ್ಕೆಯಲ್ಲಿ ಒಂಚೂರು ಎಡವದೇ ಉತ್ತಮ ಆಟಗಾರರನ್ನೇ ತನ್ನ ತೆಕ್ಕೆಗೆ ಉರುಳಿಸಿಕೊಂಡಿದೆ. ಈ ಬಾರಿ ವೆಂಕಟೇಶ್ ಅಯ್ಯರ್ಗೆ ದುಬಾರಿ ಬಂಡವಾಳ ಹೂಡಿದ ಆರ್ಸಿಬಿ 7 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಮಂಗೇಶ್ ಯಾದವ್ 5.2 ಕೋಟಿ ರೂಪಾಯಿ ಹಾಗೂ ನ್ಯೂಜಿಲೆಂಡ್ ವೇಗಿ ಜಾಕೋಫ್ ಡಫಿ ಅವರನ್ನು 2 ಕೋಟಿ ರೂಪಾಯಿಗಳಿಗೆ ಖರೀದಿಸಿದೆ.
ಇನ್ನುಳಿದಂತೆ ಸಾತ್ವಿಕ್ ದೇಸ್ವಾಲ್- 30 ಲಕ್ಷ ರೂ., ಜೋರ್ಡಾನ್ ಕಾಕ್ಸ್- 75 ಲಕ್ಷ ರೂ., ವಿಕ್ಕಿ ಒಸ್ತ್ವಾಲ್- 30 ಲಕ್ಷ ರೂ., ಕಾನಿಷ್ಕ್ ಚೌಹಾಣ್- 30 ಲಕ್ಷ ರೂ. ಹಾಗೂ ವಿಹಾನ್ ಮಲ್ಹೋತ್ರಾರನ್ನು- 30 ಲಕ್ಷ ರೂಪಾಯಿಗಳಿಗೆ ಖರೀದಿ ಮಾಡಿದೆ.
ಇದನ್ನೂ ಓದಿ: ಪಾಕ್ಗೆ 90 ರನ್ಗಳ ಸೋಲು; ಏಷ್ಯಾ ಕಪ್ನಲ್ಲಿ ಇಂಡಿಯಾ ಅಂಡರ್-19 ತಂಡದ ಅಮೋಘ ಆರಂಭ
ಈ ಮೂಲಕ ಆರ್ಸಿಬಿ ತಂಡದಲ್ಲಿ ನಾಯಕರಾಗಿ ರಜತ್ ಪಾಟಿದಾರ್ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ವೆಂಕಟೇಶ್ ಅಯ್ಯರ್, ಕೃನಾಲ್ ಪಾಂಡ್ಯ, ಮಂಗೇಶ್ ಯಾದವ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜಾಕೋಬ್ ಬೆಥೆಲ್, ಜೋಶ್ ಹೇಜಲ್ವುಡ್, ಜಾಕೋಬ್ ಡಫಿ, ಯಶ್ ದಯಾಳ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ರಸಿಕ್ ಸಲಾಂ, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೋರ್ಡಾನ್ ಕಾಕ್ಸ್, ಸಾತ್ವಿಕ್ ದೇಸ್ವಾಲ್, ವಿಕ್ಕಿ ಒಸ್ತ್ವಾಲ್, ಕಾನಿಷ್ಕ್ ಚೌಹಾಣ್, ವಿಹಾನ್ ಮಲ್ಹೋತ್ರಾ ಸ್ಥಾನ ಪಡೆದಿದ್ದಾರೆ.



