ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಅನ್ನಭಾಗ್ಯ ಅಕ್ಕಿ : ಬೇರೆ ರಾಜ್ಯಗಳಿಗೂ ರಫ್ತು
ರಾಜ್ಯದ ಜನತೆಯ ಹಸಿವು ನೀಗಿಸಲೆಂದು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್ ಸೇರಿದಂತೆ ನಾನಾ ರಾಜ್ಯಗಳಿಗೆ ರಾಜ್ಯದ ಪಡಿತರದಲ್ಲಿ ದೊರಕಿದ ಅಕ್ಕಿ ಮಾರಾಟವಾಗುತ್ತಿರುವ ವಿಚಾರ ಇದೀಗ ಮುನ್ನೆಲೆಗೆ ಬಂದಿದೆ.
ಅಕ್ರಮ ಪಡಿತರ ಅಕ್ಕಿ ಸಾಗಣೆಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ 2025ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ 482ಪ್ರಕರಣಗಳು ದಾಖಲಾಗಿವೆ. ಈವರೆಗೆ ಅಕ್ರಮವಾಗಿ ಸಾಗಾಟಗೊಳ್ಳುತ್ತಿದ್ದ 29,603 ಕ್ವಿಂಟಾಲ್ ಅಕ್ಕಿ ವಶಪಡಿಸಿಕೊಳ್ಳಲಾಗಿದೆ.
ಪಡಿತರ ಚೀಟಿ ಮೂಲಕ ಅನ್ನಭಾಗ್ಯ ಅಕ್ಕಿಯನ್ನು ಪಡೆಯುವ ಖದೀಮರು ಅದನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಅಕ್ಕಿಗೆ ಹೆಚ್ಚಿನ ಪಾಲಿಶ್ ನೀಡಿ ಬಳಿಕ ಅದನ್ನು ಮಾರುಕಟ್ಟೆಗೆ ತಂದು ಮಾರುತ್ತಿರುವ ಜಾಲ ಕೂಡ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ರೈತರಿಗೆ ಸಿಗಲಿದೆ 2 ಕೋಟಿ ಸಾಲ, ಶೇ. 3ರಷ್ಟು ಬಡ್ಡಿ ರಿಯಾಯಿತಿ ! ಅರ್ಜಿ ಸಲ್ಲಿಕೆಗೆ ಇಲ್ಲಿ ಕ್ಲಿಕ್ ಮಾಡಿ
ಬಾಗಲಕೋಟೆ ಜಿಲ್ಲೆ27, ಕಲಬುರಗಿ 35, ಗದಗ 26, ಚಾಮರಾಜನಗರ 36, ಮೈಸೂರು 33, ವಿಜಯಪುರ 36, ಬೀದರ್ 32, ಬಳ್ಳಾರಿ 33, ರಾಯಚೂರು 21, ಬೆಳಗಾವಿ 23, ಕೊಪ್ಪಳ 20, ವಿಜಯನಗರ 19, ದಾವಣಗೆರೆ 17, ಬೆಂಗಳೂರು ದಕ್ಷಿಣ(ರಾಮನಗರ) 15, ಶಿವಮೊಗ್ಗ 6, ಹಾಸನ 3, ಧಾರವಾಡ 8, ಹಾವೇರಿ 10, ತುಮಕೂರು 3, ಬೆಂಗಳೂರು ದಕ್ಷಿಣ ವಲಯ 4, ಪಶ್ಚಿಮ ವಲಯ 5, ಪೂರ್ವ ವಲಯ 1, ಬೆಂಗಳೂರು ಗ್ರಾಮಾಂತರ 3, ದಕ್ಷಿಣ ಕನ್ನಡ 2, ಮಂಡ್ಯ 5, ಕೋಲಾರ 1, ಕೊಡಗು 3, ಚಿಕ್ಕಮಗಳೂರು 1, ಯಾದಗಿರಿ 2, ಚಿತ್ರದುರ್ಗ 9, ಬೆಂಗಳೂರು ನಗರ 1, ಉತ್ತರ ಕನ್ನಡ 6, ಉಡುಪಿ ಜಿಲ್ಲೆಯಲ್ಲಿ 8 ಪ್ರಕರಣಗಳು ಇವರೆಗೆ ದಾಖಲಾಗಿದೆ. ಗಡಿಭಾಗದ ಜಿಲ್ಲೆಗಳಲ್ಲಿಯೇ ಹೆಚ್ಚು ಪ್ರಕರಣಗಳು ದಾಖಲಾಗಿದ್ದು ಆತಂಕಕಾರಿ ವಿಚಾರವಾಗಿದೆ.



