ಸಾಲು ಸಾಲು ರಜೆ ಹಿನ್ನೆಲೆ ಸಾರಿಗೆ ಇಲಾಖೆಯಿಂದ ಬಂಪರ್ ಆಫರ್ : ರಸ್ತೆಗಿಳಿಯಲಿವೆ ಹೆಚ್ಚುವರಿ ಬಸ್ಗಳು
ಬೆಂಗಳೂರು : ವೀಕೆಂಡ್ ಹಾಗೂ ಗಣರಾಜ್ಯೋತ್ಸವ ಒಟ್ಟೊಟ್ಟಿಗೆ ಬಂದಿರುವ ಹಿನ್ನೆಲೆಯಲ್ಲಿ ರಾಜ್ಯದ ಜನತೆಗೆ ಸಾಲು ಸಾಲು ರಜೆ ದೊರಕಿದೆ. ಈ ಸಂದರ್ಭದಲ್ಲಿ ಪ್ರಯಾಣ ಮಾಡಲು ಇಚ್ಛಿಸುವ ರಾಜ್ಯದ ಪ್ರಯಾಣಿಕರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಬಿಎಂಟಿಸಿ ಹೆಚ್ಚುವರಿ ಬಸ್ಗಳನ್ನು (Additional buses) ರಸ್ತೆಗಿಳಿಸಲು ಮುಂದಾಗಿದೆ.
ಈ ಮೂಲಕ ಪ್ರಯಾಣಿಕರ ಸುಗಮ ಪ್ರಯಾಣಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರದಂದು 265 ಹೆಚ್ಚುವರಿ ಬಿಎಂಟಿಸಿ ಬಸ್ಗಳು, ಶನಿವಾರದಿಂದ 500 ಹೆಚ್ಚುವರಿ ಬಸ್ಗಳು ಸಂಚರಿಸಲಿವೆ.
ಶಾಂತಿನಗರ, ಮಜೆಸ್ಟಿಕ್, ಯಶವಂತಪುರ, ಬೈಯಪ್ಪನಹಳ್ಳಿ, ಕೆಂಗೇರಿ, ಸಿಲ್ಕ್ ಬೋರ್ಡ್, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಪ್ರಮುಖ ಬಸ್ ನಿಲ್ದಾಣಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಸೇವೆ ಒದಗಿಸಲಾಗುತ್ತದೆ ಎಂದು ಸಾರಿಗೆ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಇನ್ಮುಂದೆ ಲಂಡನ್ ಅನುಭವ : ಸಿಟಿಯಲ್ಲಿ ಸಂಚರಿಸಲಿದೆ ಡಬಲ್ ಡೆಕ್ಕರ್ ಬಸ್
ಇನ್ನು ಇದರ ಜೊತೆಯಲ್ಲಿ ಬೆಂಗಳೂರಿನಿಂದ ಮೈಸೂರು, ಮಂಡ್ಯ, ತುಮಕೂರು, ಹಾಸನ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ದಾವಣಗೆರೆ, ಶಿವಮೊಗ್ಗ, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ, ಬಳ್ಳಾರಿ, ವಿಜಯಪುರ ಸೇರಿದಂತೆ ಪ್ರಮುಖ ಜಿಲ್ಲೆಗಳಿಗೆ ಹೆಚ್ಚುವರಿ ಕೆಎಸ್ಆರ್ಟಿಸಿ ಬಸ್ಗಳು ಈ ಮೂರು ದಿನಗಳ ಅವಧಿಯಲ್ಲಿ ಸಂಚರಿಸಲಿವೆ.
ಇದನ್ನೂ ಓದಿ : 20 ರೂಪಾಯಿ ನೀರಿನ ಬಾಟಲಿಗೆ 55 ರೂಪಾಯಿ ವಸೂಲಿ: ಚಂಡೀಗಢದ ರೆಸ್ಟೋರೆಂಟ್ಗೆ ಭಾರೀ ದಂಡ!
Good News for Transport Department ongoing holiday Additional buses will be on the road Kannada news



