ಶಿರಸಿ ಮಾರಿಕಾಂಬಾ ಜಾತ್ರೆ ಬೆನ್ನಲ್ಲೇ ಸೈಬರ್​ ವಂಚಕರಿಂದ ಮೋಸದ ಜಾಲ : ಭಕ್ತಾದಿಗಳೇ ಎಚ್ಚರ, ಎಚ್ಚರ…

ಶಿರಸಿ : ಕರ್ನಾಟಕದ ಸುಪ್ರಸಿದ್ಧ ಶಿರಸಿಯ ಮಾರಿಕಾಂಬಾ ದೇವಿಯ ಜಾತ್ರೆ ಆರಂಭಗೊಂಡಿದೆ. ರಾಜ್ಯದ ನಾನಾ ಭಾಗಗಳಿಂದ ಮಾರಿಕಾಂಬೆಯ ದರ್ಶನಕ್ಕೆ ಜನಸಾಗರವೇ ಹರಿದುಬರ್ತಿದೆ. ಇದನ್ನೇ ಬಂಡವಾಳವಾಗಿಸಿಕೊಂಡಿರುವ ಕೆಲ ಸೈಬರ್​ ವಂಚಕರು ಜನಸಾಮಾನ್ಯರನ್ನು ವಂಚಿಸಲು ಮುಂದಾಗಿರುವ ಪ್ರಕರಣ ಬೆಳಕಿಗೆ ಬಂದಿದ್ದು ಈ ಸಂಬಂಧ ಸೈಬರ್​ ವಂಚಕರ ಮೇಲೆ ಶಿರಸಿ ಶಹರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂಕುಮಾರ್ಚನೆ ಹಾಗೂ ಸೇವೆ, ದೇಣಿಗೆ ವಿಚಾರದಲ್ಲಿ ಎಐ ವಿಡಿಯೋವೊಂದನ್ನು ಹರಿಬಿಟ್ಟು ಭಕ್ತರಿಂದ ಹಣ ಪೀಕಲು ಈ ಸೈಬರ್​ ವಂಚಕರು ಯೋಜನೆ ರೂಪಿಸಿದ್ದರು. Yajaman ಹೆಸರಿನ ಅಕೌಂಟ್ ನಿಂದ ವಂಚನೆ ನಡೆಯುತ್ತಿದ್ದುದ್ದು ಗಮನಕ್ಕೆ ಬಂದಿದ್ದು ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇನ್ನು ದೇವಸ್ಥಾನದ ಸೇವೆಯ ವಿಚಾರದಲ್ಲಿ ಶ್ರೀ ಮಾರಿಕಾಂಬಾ ದೇವಿ ಆಡಳಿತ ಮಂಡಳಿಯಿಂದ ಸ್ಪಷ್ಟನೆ ಹೊರಬಿದ್ದಿದೆ. ಭಕ್ತರಲ್ಲಿ ಸೈಬರ್​ ವಂಚಕರಿಂದ ಎಚ್ಚರಿಕೆಯಿಂದ ಇರುವಂತೆ ಮಾರಿಕಾಂಬಾ ದೇವಿ ಆಡಳಿತ ಮಂಡಳಿ ಮನವಿ ಮಾಡಿದೆ. ಅಲ್ಲದೇ www.marikambatemple.com ಇದೊಂದೇ ದೇವಸ್ಥಾನದ ಅಧಿಕೃತ ವೆಬ್​ಸೈಟ್​ ಆಗಿದ್ದು ದೇಣಿಗೆ ಹಾಗೂ ಸೇವೆಯ ವಿಚಾರದಲ್ಲಿ ಇದೊಂದೇ ವೆಬ್​ಸೈಟ್​ ಸಂಪರ್ಕಿಸಲು ಮನವಿ ಮಾಡಲಾಗಿದೆ. ಇಲ್ಲವಾದಲ್ಲಿ ನೇರವಾಗಿ ದೇವಸ್ಥಾನಕ್ಕೆ ಬಂದು ಹಣಪಾವತಿಸುವಂತೆ ದೇಗುಲದ ಆಡಳಿತ ಮಂಡಳಿ ಭಕ್ತರಿಗೆ ಮಾಹಿತಿ ನೀಡಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories