Online Game Ban : ಆನ್ಲೈನ್ ಗೇಮಿಂಗ್ ಜಾಲದ ವಿರುದ್ಧ ಕೇಂದ್ರ ಸರ್ಕಾರದ ಸಮರ : ಎಲ್ಲಾ ಆ್ಯಪ್ಗಳೂ ಬ್ಯಾನ್
ಆಟ ಯಾವುದೇ ಆಗಿರಲಿ. ಅದರಲ್ಲಿ ಹಣ ಕಟ್ಟಿ ಆಡುವ ಆಯ್ಕೆ ಇದ್ದರೆ ಅಂತಹ ಆಟಗಳಿಗೆ ಅವಕಾಶ ನೀಡಲಾಗುವುದಿಲ್ಲ. ಡಿಜಿಟಲ್ ವೇದಿಕೆಗಳು ಜನರಿಗೆ ಸುರಕ್ಷಿತವಾಗಿರಬೇಕು.
Online Game Ban : ಹಣ ಕಟ್ಟಿ ಆಡುವ ಆನ್ಲೈನ್ ಜೂಜಿನ ಆಟಗಳಿಗೆ ಕೇಂದ್ರ ಸರ್ಕಾರ ಶಾಶ್ವತ ಕಡಿವಾಣ ಹಾಕಿದೆ. ಆನ್ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ ಕಾಯ್ದೆ 2025ನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು , ಹಣಕಟ್ಟಿ ಆಡುವ ಎಲ್ಲಾ ಆನ್ಲೈನ್ ಗೇಮಿಂಗ್ ಆಟಗಳನ್ನು ಬ್ಯಾನ್ ಮಾಡಲಾಗಿದೆ. ಲೋಕಸಭೆಯಲ್ಲಿ ಕೇಂದ್ರ ಸಚಿವ ಡಾ. ಎಲ್. ಮುರುಗನ್ ಈ ಸಂಬಂಧ ಮಾಹಿತಿ ನೀಡಿದ್ದಾರೆ.
ಆಟ ಯಾವುದೇ ಆಗಿರಲಿ. ಅದರಲ್ಲಿ ಹಣ ಕಟ್ಟಿ ಆಡುವ ಆಯ್ಕೆ ಇದ್ದರೆ ಅಂತಹ ಆಟಗಳಿಗೆ ಅವಕಾಶ ನೀಡಲಾಗುವುದಿಲ್ಲ. ಡಿಜಿಟಲ್ ವೇದಿಕೆಗಳು ಜನರಿಗೆ ಸುರಕ್ಷಿತವಾಗಿರಬೇಕು. ಬೆಟ್ಟಿಂಗ್ ಕಟ್ಟಿ ಆಡುವ ಯಾವುದೇ ಆಟಗಳನ್ನು ಪ್ರೋತ್ಸಾಹಿಸಲು ಸಾಧ್ಯವಿಲ್ಲ. ಇವುಗಳಿಗೆ ಹಣ ಪಾವತಿಸಲು ಇರುವ ಪೇಮೆಂಟ್ ಗೇಟ್ ವೇಗಳನ್ನೂ ನಿರ್ಬಂಧಿಸಲಾಗಿದೆ ಎಂದು ಡಾ. ಎಲ್. ಮುರುಗನ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಉಡುಪಿ: ಸಂತೆಕಟ್ಟೆಯಲ್ಲಿ ಕಾರು-ಎಕ್ಸ್‌ಪ್ರೆಸ್ ಬಸ್ ನಡುವೆ ಭೀಕರ ಅಪಘಾತ; ನಜ್ಜುಗುಜ್ಜಾದ ಕಾರು, ಹಲವರು ಗಂಭೀರ
ಇಂತಹ ಆ್ಯಪ್ಗಳ ಜಾಹಿರಾತುಗಳನ್ನು ಕಾಣಿಸಿಕೊಳ್ಳುವವರಿಗೂ ಕಾನೂನಿನ ಅಡಿಯಲ್ಲಿ ಶಿಕ್ಷೆ ನೀಡಲಾಗುತ್ತದೆ. 2 ವರ್ಷಗಳ ಕಾಲ ಜೈಲು ಶಿಕ್ಷೆ ಹಾಗೂ 50 ಸಾವಿರ ರೂಪಾಯಿಗಳವರೆಗೆ ದಂಡ ಪಾವತಿ ಮಾಡಬೇಕುತ್ತದೆ. ಆನ್ಲೈನ್ ಗೇಮಿಂಗ್ಗಳನ್ನು ಮೊದಲ ಬಾರಿಗೆ ಆರಂಭಿಸಿದ್ದರೆ ಅಂತವರಿಗೆ 1 ಕೋಟಿ ರೂಪಾಯಿ ದಂಡ ಹಾಗೂ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಎರಡನೇ ಬಾರಿ ಅಪರಾಧ ಎಸಗಿದರೆ 2 ಕೋಟಿ ರೂಪಾಯಿ ದಂಡ ಹಾಗೂ ಕನಿಷ್ಠ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ.
ಭಾರತೀಯ ಆನ್ಲೈನ್ ಗೇಮಿಂಗ್ ಪ್ರಾಧಿಕಾರವನ್ನೂ ಶೀಘ್ರದಲ್ಲಿಯೇ ತೆರೆಯಲಾಗುವುದು. ಈ ಪ್ರಾಧಿಕಾರದಿಂದ ಅನುಮತಿ ಪಡೆದ ಬಳಿಕವಷ್ಟೇ ಆನ್ಲೈನ್ ಗೇಮಿಂಗ್ಗೆ ಅವಕಾಶ ನೀಡಲಾಗುತ್ತದೆ ಎಂದು ಡಾ. ಎಲ್. ಮುರುಗನ್ ಮಾಹಿತಿ ನೀಡಿದ್ದಾರೆ.



