ಐಪಿಎಲ್‌ನಲ್ಲಿ ಅಬ್ಬರಿಸಲು ರೆಡಿಯಾದ ಆರ್‌ಸಿಬಿ ಸಿಡಿಲಮರಿ
ಜಾಕೋಬ್ ಬೆಥೆಲ್ ಮೇಲೆ ಹೆಚ್ಚು ನಿರೀಕ್ಷೆ

ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಕೆಲ ದಿನಗಳಷ್ಟೇ ಬಾಕಿ ಇದೆ. ಮಾರ್ಚ್ 28ಕ್ಕೆ ಆರ್‌ಸಿಬಿ ತನ್ನ ಮೊದಲ ಪಂದ್ಯವಾಡುವ ಮೂಲಕ ಸೀಸನ್ ಶುರು ಮಾಡುತ್ತಿದೆ. ಹಾಲಿ ಚಾಂಪಿಯನ್ ಆಗಿರೋ ಆರ್‌ಸಿಬಿ ತಂಡದ ಮೇಲೆ ಭಾರೀ ನಿರೀಕ್ಷೆ ಇದೆ. ಹೀಗಾಗಿ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಪ್ಲೇಯಿಂಗ್ 11 ಬಲಿಷ್ಠ ಮಾಡಬೇಕಿದೆ. ಬ್ಯಾಟಿಂಗ್ ಶಕ್ತಿ ವಿರಾಟ್ ಕೊಹ್ಲಿ ಜೊತೆ
ಇಂಗ್ಲೆಂಡ್‌ನಾ ಫಿಲ್ ಸಾಲ್ಟ್ ಹಾಗೂ ಜಾಕೋಬ್ ಬೆಥೆಲ್ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ.
ಆಲ್‌ರೌಂಡರ್ಸ್ ಮೇಲೆ ಕಣ್ಣು
ಆರ್‌ಸಿಬಿ ಪ್ಲೇಯಿಂಗ್ 11 ಈ ಬಾರಿ ಬಲಿಷ್ಟವಾಗಿದೆ. ವಿರಾಟ್ ಕೊಹ್ಲಿ, ಸಾಲ್ಟ್, ರಜತ್ ಪಾಟೀದಾರ್, ದೇವದತ್ ಪಡಿಕ್ಕಲ್, ಜಿತೇಶ್ ಶರ್ಮಾ ಬ್ಯಾಟಿಂಗ್ ವಿಭಾಗದ ಶಕ್ತಿಯಾಗಿದ್ದಾರೆ.
ಆಲ್‌ರೌಂಡರ್ ವಿಭಾಗದಲ್ಲಿ ಭಾರತೀಯ ಕೃನಾಲ್ ಪಾಂಡ್ಯ ಜೊತೆ ಮೂವರು ವಿದೇಶಿ ಆಟಗಾರರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ವೆಸ್ಟ್ ಇಂಡೀಸ್ ದೈತ್ಯ ರೊಮಾರಿಯೋ ಶೆಫರ್ಡ್,
ಆಸ್ಟ್ರೇಲಿಯಾದ ಹೊಡಿಬಡಿ ದಾಂಡಿಗ ಟಿಮ್ ಡೇವಿಡ್, ಹಾಗೂ ಇಂಗ್ಲೆಂಡ್‌ನಾ ಯಂಗ್ ಬ್ಯಾಟರ್ ಜಾಕೋಬ್ ಬೆಥೆಲ್ ಅಬ್ಬರಿಸಲು ರೆಡಿಯಾಗಿದ್ದಾರೆ.
ಸಿಡಿಲಮರಿ ಬೆಥೆಲ್
ಆರ್‌ಸಿಬಿ ಟೀಂನಲ್ಲಿರುವ ಜಾಕೋಬ್ ಬೆಥೆಲ್ ಇಂಗ್ಲೆಂಡ್ ದೇಶದವರು. ಇತ್ತೀಚೆಗಷ್ಟೇ ನಡೆದ ಟಿ-20 ವಿಶ್ವಕಪ್‌ನಾ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ರನ್ ಮಳೆ ಹರಿಸಿದ್ದ ಬೆಥೆಲ್ ಕೋಟ್ಯಂತರ ಭಾರತೀಯರಿಗೆ ನಡುಕ ಹುಟ್ಟಿಸಿದ್ರು.. ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಬೆಥೆಲ್ ಭಾರತ ನೀಡಿದ್ದ ಬೃಹತ್ ಗುರಿಯನ್ನ ಬೆನ್ನಟ್ಟಿ ಇಂಗ್ಲೆಂಡ್ ತಂಡಕ್ಕೆ ಬ್ಯಾಟಿಂಗ್ ಬಲ ನೀಡಿದ್ರು.. ಅದೊಂದು ಇನ್ನಿಂಗ್ಸ್‌ನಿಂದ ಬೆಥೆಲ್ ಆಟ ಜಗತ್ತಿಗೆ ಗೊತ್ತಾಗಿದೆ. ಹೀಗಾಗಿ ಈ ಬಾರಿ ಆರ್‌ಸಿಬಿ ತಂಡದಲ್ಲಿ ಬೆಥೆಲ್‌ಗೆ ಹೆಚ್ಚು ಅವಕಾಶ ಸಿಗುವ ಸಾಧ್ಯತೆ ಇದೆ. ಕಳೆದ ವರ್ಷದ ಐಪಿಎಲ್‌ನಲ್ಲಿ ಕೇವಲ 2 ಪಂದ್ಯ ಆಡಿದ್ದ ಬೆಥೆಲ್ ಒಂದು ಅರ್ಧಶತಕ ಸಹಿತ 67ರನ್ ಬಾರಿಸಿದ್ದಾರೆ. ಈ ಬಾರಿ ಬೆಥೆಲ್ ಬ್ಯಾಟ್‌ನಿಂದ ಮತ್ತಷ್ಟು ರನ್‌ಗಳು ಹರಿದು ಬರುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ:
ಆರ್‌ಸಿಬಿಗೆ ಅಶ್ವಿನ್ ಫುಲ್‌ಮಾರ್ಕ್ಸ್
ಫಿಲ್ ಸಾಲ್ಟ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್ ಮತ್ತು ಜಾಕೋಬ್ ಬೆಥೆಲ್ .. ನಾಲ್ವರು ವಿದೇಶಿ ಆಟಗಾರರು ಆರ್‌ಸಿಬಿಯ ಉತ್ತಮ ಸಂಯೋಜನೆಯಾಗಿದ್ದಾರೆ. ಈ ಬಾರಿಯ ಟೂರ್ನಿಯಲ್ಲೇ ಇದು ಅತ್ಯುತ್ತಮ ನಾಲ್ಕು ವಿದೇಶಿ ಆಟಗಾರರ ಕಾಂಬಿನೇಷನ್ ಆಗುವ ಸಾಧ್ಯತೆ ಇದೆ ಎಂದು ಟೀಂ ಇಂಡಿಯಾ ಸ್ಪಿನ್ ಲೆಜೆಂಡ್ ಆರ್ ಅಶ್ವಿನಿ ಅಭಿಪ್ರಾಯ ಪಟ್ಟಿದ್ದಾರೆ. ಮೊದಲ ಪಂದ್ಯದಲ್ಲೇ ಆರ್‌ಸಿಬಿ ಬಲಿಷ್ಠ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಅಭಿಮಾನಿಗಳು ಈಗಾಗಲೇ ದೇವಸ್ಥಾನಗಳ ಮೊರೆ ಹೋಗುತ್ತಿದ್ದು, ಆರ್‌ಸಿಬಿ ಗೆಲುವಿಗಾಗಿ ಪ್ರಾರ್ಥನೆ ಮಾಡ್ತಿದ್ದಾರೆ. ಅಷ್ಟರ ಮಟ್ಟಿಗೆ ದೊಡ್ಡ ಅಭಿಮಾನಿಗಳ ಬಳಗ ಹೊಂದಿದೆ ಆರ್‌ಸಿಬಿ.



