ಏಷ್ಯಾ ಕಪ್ 2025 : ಭಾರತಕ್ಕೆ ಯುಎಇ ಸವಾಲು : ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಏಷ್ಯಾ ಕಪ್ 2025: ಏಷ್ಯಾ ಕಪ್ 2025 ಪಂದ್ಯಾವಳಿ ಇಂದಿನಿಂದ ಸೆಪ್ಟೆಂಬರ್ 9, 2025) ಅಧಿಕೃತವಾಗಿ ಆರಂಭವಾಘಲಿದೆ. ಏಷ್ಯಾಕಪ್‌ ಈ ವರ್ಷದ ಪಂದ್ಯಾವಳಿಗಳು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯುತ್ತಿದೆ. ಒಟ್ಟು ಎಂಟು ತಂಡಗಳು T20I ಮಾದರಿಯಲ್ಲಿ ಪಂದ್ಯಾವಳಿಯನ್ನು ಆಡಲಿವೆ. ಸೆಪ್ಟೆಂಬರ್ 28ರಂದು ಫೈನಲ್‌ ಪಂದ್ಯಾವಳಿ ನಡೆಯಲಿದೆ.

ಏಷ್ಯಾಕಪ್‌ ಪಂದ್ಯಾವಳಿ : ಗುಂಪುಗಳು

ಗುಂಪು ಎ: ಭಾರತ, ಪಾಕಿಸ್ತಾನ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಮತ್ತು ಓಮನ್

ಗುಂಪು ಬಿ: ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್

ಪಂದ್ಯಾವಳಿಯ ಸ್ಥಳಗಳು : ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಮತ್ತು ಶೇಖ್ ಜಾಯೆದ್ ಕ್ರಿಕೆಟ್ ಕ್ರೀಡಾಂಗಣ, ಅಬುಧಾಬಿ

ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8:00 ಗಂಟೆಗೆ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 15 ರಂದು ಭಾರತೀಯ ಕಾಲಮಾನ ಸಂಜೆ 5:30 ಕ್ಕೆ ಪ್ರಾರಂಭವಾಗುವ ಒಂದು ಪಂದ್ಯವನ್ನು ಹೊರತುಪಡಿಸಿ (ಯುಎಇ ವಿರುದ್ಧ ಓಮನ್).

ಏಷ್ಯಾ ಕಪ್ 2025 : ಪಂದ್ಯಾವಳಿಗಳು

  • ಸೆಪ್ಟೆಂಬರ್ 9 : ಹಾಂಗ್ ಕಾಂಗ್ ಮತ್ತು ಅಫ್ಘಾನಿಸ್ತಾನ – ಅಬುಧಾಬಿ (ರಾತ್ರಿ 8:00ಕ್ಕೆ )
  • ಸೆಪ್ಟೆಂಬರ್ 10: ಭಾರತ vs ಯುಎಇ- ದುಬೈ ( ರಾತ್ರಿ 8:00 )
  • ಸೆಪ್ಟೆಂಬರ್ 11: ಬಾಂಗ್ಲಾದೇಶ vs ಹಾಂಗ್ ಕಾಂಗ್ – ಅಬುಧಾಬಿ (ರಾತ್ರಿ 8:00 IST)
  • ಸೆಪ್ಟೆಂಬರ್ 12: ಪಾಕಿಸ್ತಾನ vs ಒಮಾನ್ – ದುಬೈ (8:00 ರಾತ್ರಿ)
  • ಸೆಪ್ಟೆಂಬರ್ 13: ಬಾಂಗ್ಲಾದೇಶ vs ಶ್ರೀಲಂಕಾ – ಅಬುಧಾಬಿ (ರಾತ್ರಿ 8:00 IST)
  • ಸೆಪ್ಟೆಂಬರ್ 14: ಭಾರತ vs ಪಾಕಿಸ್ತಾನ – ದುಬೈ (8:00 ರಾತ್ರಿ)
  • ಸೆಪ್ಟೆಂಬರ್ 15: ಯುಎಇ vs ಓಮನ್ – ಅಬುಧಾಬಿ (5:30 PM IST)
  • ಸೆಪ್ಟೆಂಬರ್ 15 : ಹಾಂಗ್ ಕಾಂಗ್ vs ಶ್ರೀಲಂಕಾ – ದುಬೈ (ರಾತ್ರಿ 8:00 ಗಂಟೆಗೆ)
  • ಸೆಪ್ಟೆಂಬರ್ 16: ಬಾಂಗ್ಲಾದೇಶ vs ಅಫ್ಘಾನಿಸ್ತಾನ – ಅಬುಧಾಬಿ (ರಾತ್ರಿ 8:00 IST)
  • ಸೆಪ್ಟೆಂಬರ್ 17: ಪಾಕಿಸ್ತಾನ vs UAE – ದುಬೈ (8:00 PM IST)
  • ಸೆ 18: ಶ್ರೀಲಂಕಾ vs ಅಫ್ಘಾನಿಸ್ತಾನ – ಅಬುಧಾಬಿ (ರಾತ್ರಿ 8:00 IST)
  • ಸೆಪ್ಟೆಂಬರ್ 19: ಭಾರತ vs ಓಮನ್ – ಅಬುಧಾಬಿ (ರಾತ್ರಿ 8:00 IST)

ಭಾರತದ ಮೊದಲ ಪಂದ್ಯ: ಭಾರತ ಸೆಪ್ಟೆಂಬರ್ 10 ರಂದು ದುಬೈನಲ್ಲಿ ಆತಿಥೇಯ ರಾಷ್ಟ್ರವಾದ ಯುಎಇ (UAE) ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.

ಭಾರತ vs ಪಾಕಿಸ್ತಾನ: ಭಾರತ ಮತ್ತು ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಪಂದ್ಯವು ಸೆಪ್ಟೆಂಬರ್ 14 ರಂದು ದುಬೈನಲ್ಲಿ ನಡೆಯಲಿದೆ.

ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೂಪರ್ ಫೋರ್ ಹಂತಕ್ಕೆ ಮುನ್ನಡೆಯುತ್ತವೆ ಮತ್ತು ಆ ಹಂತದ ಅಗ್ರ ಎರಡು ತಂಡಗಳು ನಂತರ ಫೈನಲ್‌ನಲ್ಲಿ ಸ್ಪರ್ಧಿಸುತ್ತವೆ. ಮುಂದಿನ ವರ್ಷ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ಈ ಪಂದ್ಯಾವಳಿಯನ್ನು ನಿರ್ಣಾಯಕ ತಯಾರಿ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ವಿಶ್ವ ಜಂಪ್‌- ರೋಪ್‌ ಚಾಂಪಿಯನ್ ಶಿಪ್ ನಲ್ಲಿ ವಿಶ್ವ ದಾಖಲೆ ಮುರಿದ ಚೀನಾದ ವ್ಯಕ್ತಿ!

ಏಷ್ಯಾ ಕಪ್ 2025 : ಸೂಪರ್ 4 ಮತ್ತು ಫೈನಲ್:

ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಪ್ಟೆಂಬರ್ 20 ರಂದು ಪ್ರಾರಂಭವಾಗುವ ಸೂಪರ್ ಫೋರ್ ಹಂತಕ್ಕೆ ಅರ್ಹತೆ ಪಡೆಯುತ್ತವೆ. ಫೈನಲ್ ಪಂದ್ಯ ಸೆಪ್ಟೆಂಬರ್ 28 ರಂದು ನಿಗದಿಯಾಗಿದೆ. ಸೂಪರ್‌ 4 ಹಾಗೂ ಫೈನಲ್ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8:00 ಗಂಟೆಗೆ ನಿಗದಿಯಾಗಿದೆ.

ಇದನ್ನೂ ಓದಿ: Hulk Hogan: ವಿಶ್ವ ಕುಸ್ತಿ ದಂತಕಥೆ ಹಲ್ಕ್‌ ಹೋಗನ್‌ ನಿಧನ

ಏಷ್ಯಾ ಕಪ್ 2025 : ನೇರ ಪ್ರಸಾರ ಮತ್ತು ಸ್ಟ್ರೀಮಿಂಗ್:

ಭಾರತದಲ್ಲಿ ಏಷ್ಯಾಕಪ್‌ ಪಂದ್ಯಾವಳಿಯನ್ನು ಸೋನಿ ಸ್ಪೋರ್ಟ್‌ ವಾಹಿನಿಯ ಮೂಲಕ ವೀಕ್ಷಿಸಬಹುದಾಗಿದೆ. ಸೋನಿ ನೆಟ್‌ವರ್ಕ್ಸ್‌ನ ಲೈವ್‌ ಸ್ಟ್ರೀಮಿಂಗ್ ಸೋನಿಲೈವ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಪಂದ್ಯಗಳನ್ನು ವಿವಿಧ ಭಾಷೆಗಳಲ್ಲಿ ವಿವಿಧ ಸೋನಿ ಸ್ಪೋರ್ಟ್ಸ್ ಚಾನೆಲ್‌ಗಳಲ್ಲಿ ಪ್ರಸಾರ ಮಾಡಲಾಗುತ್ತದೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories