ಕ್ರೆಡಿಟ್ ಸ್ಕೋರ್‌ನಲ್ಲಿ ಬಿಗ್ ಅಪ್‌ಡೇಟ್: ಇನ್ಮುಂದೆ ಪ್ರತಿ ವಾರವೂ ನಿಮ್ಮ ಸ್ಕೋರ್ ಬದಲಾಗಲಿದೆ
ನಿಮ್ಮ ಕ್ರೆಡಿಟ್ ವರದಿಗಳು ತಿಂಗಳಿಗೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಅಪ್‌ಡೇಟ್ ಆಗುತ್ತವೆ.

Credit Score update : ಭಾರತದ ಕ್ರೆಡಿಟ್ ವರದಿ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ತರಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಜ್ಜಾಗಿದೆ. 2026ರಲ್ಲಿ ಜಾರಿಗೆ ಬರಲಿರುವ ಈ ಹೊಸ ನಿಯಮದಂತೆ, ಇನ್ಮುಂದೆ ನಿಮ್ಮ ಕ್ರೆಡಿಟ್ ಸ್ಕೋರ್ ಪ್ರತಿ ವಾರ ಅಪ್‌ಡೇಟ್ ಆಗಲಿದೆ.
ಕ್ರೆಡಿಟ್ ಸ್ಕೋರ್ (Credit Score update) ಹೊಸ ಬದಲಾವಣೆ ಏನು?
ಪ್ರಸ್ತುತ ನಿಮ್ಮ ಕ್ರೆಡಿಟ್ ವರದಿಗಳು ತಿಂಗಳಿಗೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಅಪ್‌ಡೇಟ್ ಆಗುತ್ತವೆ. ಆದರೆ ಪ್ರಸ್ತಾವಿತ ಹೊಸ ವ್ಯವಸ್ಥೆಯಲ್ಲಿ:
- ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ತಿಂಗಳಿಗೆ ನಾಲ್ಕು ಬಾರಿ ಗ್ರಾಹಕರ ಡೇಟಾವನ್ನು ಸಲ್ಲಿಸಬೇಕಾಗುತ್ತದೆ.
- ಪ್ರತಿ ತಿಂಗಳ 9, 16, 23 ಮತ್ತು ಕೊನೆಯ ದಿನಾಂಕದಂದು ಮಾಹಿತಿಯನ್ನು ಅಪ್‌ಡೇಟ್ ಮಾಡಲಾಗುತ್ತದೆ.
- ಇದರಿಂದ ನಿಮ್ಮ ಹಣಕಾಸಿನ ಚಟುವಟಿಕೆಗಳು ಹೆಚ್ಚು ಕಡಿಮೆ ‘ರಿಯಲ್ ಟೈಮ್’ನಲ್ಲಿ ಕ್ರೆಡಿಟ್ ವರದಿಯಲ್ಲಿ ಪ್ರತಿಫಲಿಸುತ್ತವೆ.
Also Read : ಆನ್‌ಲೈನ್‌ನಲ್ಲಿ ಪ್ಯಾನ್ ಕಾರ್ಡ್ (PAN Card) ಪಡೆಯುವುದು ಹೇಗೆ ?
Credit Score update : ಗ್ರಾಹಕರಿಗೆ ಆಗುವ ಲಾಭಗಳೇನು?
- ವೇಗದ ಸುಧಾರಣೆ: ನೀವು ಸಾಲವನ್ನು ಬೇಗ ತೀರಿಸಿದರೆ ಅಥವಾ ಕ್ರೆಡಿಟ್ ಕಾರ್ಡ್ ಬಾಕಿ ಪಾವತಿಸಿದರೆ, ನಿಮ್ಮ ಸ್ಕೋರ್ ಸುಧಾರಿಸಿರುವುದು ತಕ್ಷಣವೇ ತಿಳಿಯುತ್ತದೆ.
- ನಿಖರ ಮಾಹಿತಿ: ಸಾಲ ನೀಡುವವರಿಗೆ ಹಳೆಯ ದಾಖಲೆಗಳ ಬದಲು ನಿಮ್ಮ ಇತ್ತೀಚಿನ ಆರ್ಥಿಕ ಸ್ಥಿತಿಯ ಮಾಹಿತಿ ಲಭ್ಯವಿರುತ್ತದೆ. ಇದರಿಂದ ಸಾಲ ಪಡೆಯುವ ಪ್ರಕ್ರಿಯೆ ಸುಲಭವಾಗಬಹುದು.
ಕ್ರೆಡಿಟ್ ಸ್ಕೋರ್: ಎಚ್ಚರಿಕೆ ವಹಿಸುವುದು ಅಗತ್ಯ
ಈ ವ್ಯವಸ್ಥೆಯಲ್ಲಿ ಲಾಭಗಳಿರುವಂತೆಯೇ ಜವಾಬ್ದಾರಿಯೂ ಹೆಚ್ಚಿದೆ.
- ನೀವು ಸಾಲದ ಕಂತು (EMI) ಪಾವತಿಸಲು ವಿಳಂಬ ಮಾಡಿದರೆ ಅಥವಾ ಚೆಕ್ ಬೌನ್ಸ್ ಆದರೆ, ಅದು ಈ ಕೂಡಲೇ ನಿಮ್ಮ ಕ್ರೆಡಿಟ್ ವರದಿಯಲ್ಲಿ ದಾಖಲಾಗುತ್ತದೆ.
- ಇದರಿಂದ ಸಾಲ ಪಡೆಯುವ ಸಾಮರ್ಥ್ಯಕ್ಕೆ ತಕ್ಷಣವೇ ಹೊಡೆತ ಬೀಳಬಹುದು. ಹಾಗಾಗಿ ಆರ್ಥಿಕ ಶಿಸ್ತು ಕಾಪಾಡಿಕೊಳ್ಳುವುದು ಈಗ ಅತ್ಯಗತ್ಯ.
Also Read : ಕೈ ಸಾಲ ಪಡೆಯುವವರೇ ಎಚ್ಚರ..! ನಗದು ವ್ಯವಹಾರಕ್ಕೆ ಹಲವು ಮಹತ್ವದ ಬದಲಾವಣೆ ತಂದ ಕೇಂದ್ರ ಸರ್ಕಾರ
ಈ ಬದಲಾವಣೆಯು ಕ್ರೆಡಿಟ್ ವರದಿಗಳನ್ನು ಹೆಚ್ಚು ಪಾರದರ್ಶಕಗೊಳಿಸಲಿದ್ದು, ವಂಚನೆಗಳನ್ನು ತಡೆಯಲು ಮತ್ತು ಸಾಲ ನೀಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಸಹಾಯ ಮಾಡಲಿದೆ.
RBI weekly credit score update 2026 kannada Kannada



