ಸೆಕೆಂಡ್ ಇನ್ನಿಂಗ್ಸ್ಗೆ ಮುನ್ನುಡಿ ಬರೆದ ಶಿಖರ್ ಧವನ್ : ಐರಿಷ್ ಚೆಲುವೆಯೊಂದಿಗೆ ನಿಶ್ಚಿತಾರ್ಥ
ಟೀಂ ಇಂಡಿಯಾ ಮಾಜಿ ಓಪ್ನರ್ ಶಿಖರ್ ಧವನ್ ಮೊದಲ ಮದುವೆ ಮುರಿದುಬಿದ್ದ ವಿಚಾರ ಎಲ್ಲರಿಗೂ ತಿಳಿದಿರೋ ಸಂಗತಿ. ಆದರೆ ಇದೀಗ ಟೀಂ ಇಂಡಿಯಾ ಗಬ್ಬರ್ ತಮ್ಮ ಜೀವನದ 2ನೇ ಇನ್ನಿಂಗ್ಸ್ ಆರಂಭಿಸಲು ಮುಂದಾಗಿದ್ದಾರೆ. ಐರಿಷ್ ಮೂಲದ ತಮ್ಮ ಪ್ರೇಯಸಿ ಸೋಫು ಶೈನ್ ಜೊತೆ ಶಿಖರ್ ಧವನ್ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ತಮ್ಮ ಅಧಿಕೃತ ಇನ್ಸ್ಟಾ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸಂದರ್ಭದಲ್ಲಿ ಈ ಜೋಡಿ ಒಟ್ಟಾಗಿ ಕಾಣಿಸಿಕೊಂಡಿತ್ತು. ಆಗ ಯಾರು ಈ ಯುವತಿ ಎಂಬ ಪ್ರಶ್ನೆ ಎಲ್ಲರಲ್ಲೂ ಮನೆ ಮಾಡಿತ್ತು. ಇದಾದ ಬಳಿಕ ಕಳೆದ ವರ್ಷ ಮೇ 1ರಂದು ಈ ಜೋಡಿ ತಮ್ಮ ಸಂಬಂಧವನ್ನು ಬಹಿರಂಗಪಡಿಸಿತ್ತು.
ಇದೀಗ ಶಿಖರ್ ಧವನ್ ಹಾಗೂ ಸೋಫಿ ಶೈನ್ ತಮ್ಮ ಉಂಗುರಗಳ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಮದುವೆಯ ದಿನಾಂಕವನ್ನು ಈ ಜೋಡಿ ಇನ್ನೂ ಬಹಿರಂಗಪಡಿಸಿಲ್ಲ. ಅಮೆರಿಕದ ಹಣಕಾಸು ಸೇವೆಗಳ ಸಂಸ್ಥೆಯಾದ ನಾರ್ದರ್ನ್ ಟ್ರಸ್ಟ್ ಕಾರ್ಪೊರೇಷನ್‌ನಲ್ಲಿ ಸೆಕೆಂಡ್ ವೈಸ್ ಪ್ರೆಸಿಡೆಂಟ್ – ಪ್ರಾಡಕ್ಟ್ ಕನ್ಸಲ್ಟೆಂಟ್ ಆಗಿ ಸೋಫಿ ಶೈನ್ ಕಾರ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.
ಈ ಮೊದಲು 2011ರಲ್ಲಿ ಎರಡು ಮಕ್ಕಳ ತಾಯಿ ಆಯಿಷಾ ಮುಖರ್ಜಿ ಎಂಬವರನ್ನು ಶಿಖರ್ ಧವನ್ ಮದುವೆಯಾಗಿದ್ದರು. ಇವರ ವಿವಾಹದ ಬಳಿಕ ಜೋರಾವರ್ ಎಂಬ ಪುತ್ರ ಜನಿಸಿದ್ದ. 11 ವರ್ಷ ವೈವಾಹಿಕ ಜೀವನ ನಡೆಸಿದ್ದ ಈ ಜೋಡಿ 2023ರಲ್ಲಿ ವಿಚ್ಚೇದನ ಪಡೆದುಕೊಂಡಿತ್ತು.



