ಟೀಂ ಇಂಡಿಯಾ ಮಹಿಳಾ ಆಟಗಾರರಿಗೆ ಪುರುಷ ಆಟಗಾರರಷ್ಟೇ ವೇತನ ದೊರೆಯುತ್ತಾ : ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

Team India: 2025ರ ಮಹಿಳಾ ವಿಶ್ವಕಪ್​ ನೇತೃತ್ವವನ್ನು ಭಾರತ ವಹಿಸಿದೆ. ಆದರೆ ಆತಿಥೇಯ ಪಂದ್ಯಾವಳಿಗಳು ಯಾಕೋ ವರದಾನವಾಗಿ ಪರಿಣಮಿಸುತ್ತಿಲ್ಲ. ಶ್ರೀಲಂಕಾ ಹಾಗೂ ಪಾಕ್​ ವಿರುದ್ಧದ ಗೆಲುವಿನ ಬಳಿಕ ಟೀಂ ಇಂಡಿಯಾ ಹ್ಯಾಟ್ರಿಕ್​ ಸೋಲು ಕಂಡಿದೆ. ಈ ಸೋಲುಗಳ ಬಳಿಕ ಒಟ್ಟೂ ಐದು ಪಂದ್ಯಗಳಲ್ಲಿ ಕೇವಲ 4 ಅಂಕ ಸಾಧನೆ ಮಾಡುವ ಮೂಲಕ ಪಾಯಿಂಟ್​ ಪಟ್ಟಿಯಲ್ಲಿ ಅನಿಶ್ಚಿತಿತ ಸ್ಥಾನದಲ್ಲಿದೆ.

ಟೀಂ ಇಂಡಿಯಾ ಮಹಿಳಾ ಆಟಗಾರರ ಪ್ರದರ್ಶನ ದಿನದಿಂದ ದಿನಕ್ಕೆ ಕಳಪೆ ಸಾಧನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಇವರಿಗೆ ಕಡಿಮೆ ವೇತನ ಏನಾದರೂ ನೀಡಲಾಗುತ್ತಿದೆಯಾ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭಿಸಿದೆ.

ಟೀಂ ಇಂಡಿಯಾ ಮಹಿಳಾ ಆಟಗಾರರು ಪುರುಷ ಆಟಗಾರರಷ್ಟೇ ವೇತನ ಪಡೆಯುತ್ತಾರಾ ಎಂಬ ಪ್ರಶ್ನೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಕೇಳಿದ್ದಾರೆ.

ಬಿಸಿಸಿಐನ ಮಾಜಿ ಕಾರ್ಯದರ್ಶಿ ಜಯ್ ಶಾ ಅವರು ಅಕ್ಟೋಬರ್ 2022 ರಲ್ಲಿ ಮಹಿಳಾ ಕ್ರಿಕೆಟಿಗರಿಗೆ ಐತಿಹಾಸಿಕ ವೇತನ ಸಮಾನತೆ ನೀತಿಯನ್ನು ಘೋಷಿಸಿದರು.ಹೀಗಾಗಿ ಮಹಿಳಾ ಕ್ರಿಕೆಟಿಗರು ಭಾರತದಲ್ಲಿ ಪುರುಷ ಕ್ರಿಕೆಟಿಗರಷ್ಟೇ ಸಮಾನ ವೇತನ ಪಡೆಯುತ್ತಿದ್ದಾರೆ.

Also Read: ಕೇವಲ 14ನೇ ವಯಸ್ಸಿಗೆ ರಣಜಿ ಉಪನಾಯಕನಾದ ವೈಭವ್ ಸೂರ್ಯವಂಶಿ

ಈ ನೀತಿಯಡಿಯಲ್ಲಿ, ಭಾರತೀಯ ಮಹಿಳಾ ತಂಡದ ಆಟಗಾರ್ತಿಯರು ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂಪಾಯಿ, ODI ಗೆ 6 ಲಕ್ಷ ರೂಪಾಯಿ ಮತ್ತು T20 ಪಂದ್ಯಾವಳಿಗೆ 3 ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ . ಇದೇ ವೇತನವನ್ನು ಪುರಷ ಆಟಗಾರರಿಗೂ ಸಹ ನೀಡಲಾಗುತ್ತಿದೆ.

ಬಿಸಿಸಿಐ ಮಹಿಳಾ ಕ್ರಿಕೇಟಿಗರಿಗೆ ಪಂದ್ಯ ಶುಲ್ಕದಲ್ಲಿ ಸಮಾನತೆಯನ್ನು ನೀಡಿದೆ. ಆದರೆ ವಾರ್ಷಿಕ ಒಪ್ಪಂದದ ಸಂಭಾವನೆಯಲ್ಲಿ ಪುರಷರ ತಂಡಕ್ಕಿಂತ ಬಹಳ ಹಿಂದೆಯಿದ್ದಾರೆ. ಬಿಸಿಸಿಐ ಮಹಿಳಾ ವಾರ್ಷಿಕ ಒಪ್ಪಂದಗಳಲ್ಲಿ ಮೂರು ವಿಭಾಗಗಳಿವೆ. ಅವುಗಳೆಂದರೆ ಗ್ರೇಡ್ ಎ, ಬಿ ಮತ್ತು ಸಿ. ಮತ್ತೊಂದೆಡೆ, ಪುರುಷರ ತಂಡವು ನಾಲ್ಕು ವಿಭಾಗಗಳನ್ನು ಹೊಂದಿದೆ – ಗ್ರೇಡ್ ಎ+, ಎ, ಬಿ ಮತ್ತು ಸಿ.

2024-25ನೇ ಸಾಲಿನಲ್ಲಿ ಟೀಂ ಇಂಡಿಯಾ ಪುರುಷ ತಂಡದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಅವರು ಅತಿ ಹೆಚ್ಚು ಸಂಭಾವನೆ ಪಡೆಯುವ ಎ+ ವಿಭಾಗದಲ್ಲಿ ಸ್ಥಾನ ಪಡೆದಿದ್ದಾರೆ.

ಮತ್ತೊಂದೆಡೆ, ಮಹಿಳಾ ತಂಡಕ್ಕೆ, ಲಭ್ಯವಿರುವ ಅತ್ಯುನ್ನತ ದರ್ಜೆಯೆಂದರೆ ಎ ವರ್ಗ, ಇದರಲ್ಲಿ ಪ್ರಸ್ತುತ ಸ್ಮೃತಿ ಮಂಧಾನ, ಹರ್ಮನ್ಪ್ರೀತ್ ಕೌರ್ ಮತ್ತು ದೀಪ್ತಿ ಶರ್ಮಾ ಸ್ಥಾನ ಪಡೆದಿದ್ದಾರೆ.
ಬಿಸಿಸಿಐನಿಂದ ಅಧಿಕೃತವಾಗಿ ಹೊರಬಿದ್ದಿರುವ ಮಾಹಿತಿಯ ಪ್ರಕಾರ ಎ+ ವಿಭಾಗದಲ್ಲಿ ಸ್ಥಾನ ಪಡೆದ ಆಟಗಾರರು 7 ಕೋಟಿ ರೂಪಾಯಿ ವಾರ್ಷಿಕ ಆದಾಯ ಗಳಿಸಿದರೆ, ಎ,ಬಿ ಹಾಗೂ ಸಿ ವಿಭಾಗಗಳಲ್ಲಿ ಸ್ಥಾನ ಪಡೆದವರು ಕ್ರಮವಾಗಿ 5 ಕೋಟಿ, 3 ಕೋಟಿ ಹಾಗೂ 1 ಕೋಟಿ ರೂಪಾಯಿ ಆದಾಯ ಗಳಿಸುತ್ತಾರೆ.

ಇದೇ ಮಹಿಳಾ ತಂಡದಲ್ಲಿ ಎ ವರ್ಗದ ಕ್ರಿಕೆಟಿಗರು 50 ಲಕ್ಷ ರೂಪಾಯಿ ವಾರ್ಷಿಕ ಆದಾಯ ಪಡೆದರೆ, ಬಿ ಹಾಗೂ ಸಿ ವರ್ಗಗಗಳಲ್ಲಿ ಸ್ಥಾನ ಪಡೆದವರು ಕ್ರಮವಾಗಿ 30 ಲಕ್ಷ ಹಾಗೂ 10 ಲಕ್ಷ ರೂಪಾಯಿಗಳ ಆದಾಯ ಗಳಿಸುತ್ತಾರೆ.

ವೇತನದ ಅಂತರದಲ್ಲಿ ಮಹಿಳಾ ಹಾಗೂ ಪುರುಷ ತಂಡಗಳ ನಡುವೆ ಈ ರೀತಿಯ ಗಮನಾರ್ಹ ವ್ಯತ್ಯಾಸ ಇರುವುದರ ಹಿಂದೆ ಬಲವಾದ ಕಾರಣವಿದೆ. ಭಾರತೀಯ ಪುರುಷರ ಕ್ರಿಕೆಟ್​ಗೆ ಹೆಚ್ಚು ಮಾರುಕಟ್ಟೆಯಿದೆ. ಐಸಿಸಿ ಇವೆಂಟ್​​ಗಳಲ್ಲಿ ಟೀಂ ಇಂಡಿಯಾ ಪುರುಷರ ತಂಡ ಎರಡನೇ ಅತ್ಯಂತ ಯಶಸ್ವಿ ತಂಡ ಎನಿಸಿದೆ. ಟೀಮ ಇಂಡಿಯಾ ಪುರುಷರ ತಂಡವು 7 ಪ್ರಮುಖ ಟ್ರೋಫಿಗಳನ್ನು ಗೆದ್ದಿದೆ.

Also Read: IPL 2026 – Virat Kohli : ಆರ್‌ಬಿಸಿಗೆ ವಿರಾಟ್‌ ಕೊಹ್ಲಿ ಗುಡ್‌ ಬೈ..!

ಇತ್ತ ಮಹಿಳಾ ಟೀಂ ಇಂಡಿಯಾ ತಂಡವು ಐಸಿಸಿ ಇವೆಂಟ್​ಗಳಲ್ಲಿ ಪ್ರಮುಖ ಟ್ರೋಫಿಗಳನ್ನು ಗೆದ್ದಿಲ್ಲ. ಮೂರು ಬಾರಿ ರನ್ನರ್​ ಅಪ್​ ಸ್ಥಾನಕ್ಕೆ ಭಾಜನವಾಗಿದೆ. ಇದು ಮಾತ್ರವಲ್ಲದೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ರಾಷ್ಟ್ರೀಯ ಫುಟ್ಬಾಲ್ ಲೀಗ್ ನಂತರ ಪ್ರಸಾರ ಹಕ್ಕುಗಳ ವಿಷಯದಲ್ಲಿ ವಿಶ್ವದ ಎರಡನೇ ಅತ್ಯಂತ ಮೌಲ್ಯಯುತ ಕ್ರೀಡಾ ಲೀಗ್ ಎನಿಸಿಕೊಂಡಿದೆ.

Darshan Shetty Narkali | ದರ್ಶನ್‌ ಶೆಟ್ಟಿ ನಾರ್ಕಳಿ

ದರ್ಶನ್‌ ಶೆಟ್ಟಿ ನಾರ್ಕಳಿ (Darshan Shetty Narkali) ಅವರು ನ್ಯೂಸ್‌ ನೆಕ್ಸ್ಟ್ ಕನ್ನಡ ( News Next Kannada) ವಿಭಾಗದ ಪತ್ರಕರ್ತ. ಮಂಗಳೂರು ವಿವಿಯಲ್ಲಿ ಪದವಿ ಪಡೆದಿದ್ದಾರೆ. ಕಳೆದ 1 ವರ್ಷಗಳಿಂದ ವೆಬ್‌ಸೈಟ್‌ನಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ನ್ಯೂಸ್‌ ನೆಕ್ಸ್ಟ್‌ ( News Next Digital) ಸುದ್ದಿ ವಾಹಿನಿಯಲ್ಲಿ ನಿರೂಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೋಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು. More »

Related Stories