ರೈಲ್ವೆ ನೇಮಕಾತಿಯಿಂದ ಅತಿದೊಡ್ಡ ಘೋಷಣೆ: 11,127 ಅಸಿಸ್ಟಂಟ್ ಲೊಕೊ ಪೈಲಟ್ ಹುದ್ದೆಗಳ ಭರ್ತಿ, ಈ ದಿನಾಂಕಗಳನ್ನು ಗಮನಿಸಿ
RRB ALP Vacancy 2026: ಆರ್‌ಆರ್‌ಬಿ 11,127 ಅಸಿಸ್ಟಂಟ್ ಲೊಕೊ ಪೈಲಟ್ ಹುದ್ದೆಗಳ ನೇಮಕಾತಿಗೆ ಅಧಿಕೃತವಾಗಿ ಶಾರ್ಟ್ ನೋಟಿಫಿಕೇಷನ್ ಪ್ರಕಟಿಸಿದೆ.
RRB ALP Vacancy 2026: ಸರ್ಕಾರಿ ನೌಕರಿಯ ಹುಡುಕಾಟದಲ್ಲಿರುವ ಯುವಕರಿಗೆ ಗುಡ್ ನ್ಯೂಸ್. ರೈಲ್ವೆ ನೇಮಕಾತಿ ಮಂಡಳಿಯಿಂದ ಅತಿ ದೊಡ್ಡ ಘೋಷಣೆ ಮಾಡಲಾಗಿದೆ. ಆರ್‌ಆರ್‌ಬಿ 11,127 ಅಸಿಸ್ಟಂಟ್ ಲೊಕೊ ಪೈಲಟ್ ಹುದ್ದೆಗಳ ನೇಮಕಾತಿಗೆ ಅಧಿಕೃತವಾಗಿ ಶಾರ್ಟ್ ನೋಟಿಫಿಕೇಷನ್ ಪ್ರಕಟಿಸಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ದೇಶಾದ್ಯಂತ ವಿವಿಧ ರೈಲ್ವೆ ವಲಯಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಮೇ 15, 2026 ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಜೂನ್ 14, 2026 ಆಗಿದೆ.
ಅರ್ಹತಾ ಮಾನದಂಡಗಳು
ಹುದ್ದೆಯ ವಿವರ
ಆರ್‌ಆರ್‌ಬಿ ಈ ನೇಮಕಾತಿ ಮೂಲಕ ಒಟ್ಟು 11,127 ಅಸಿಸ್ಟಂಟ್ ಲೊಕೊ ಪೈಲಟ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ.

ವಯೋಮಿತಿ
ಜುಲೈ 01, 2026 ರಂತೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು. ಹಾಗೂ ಗರಿಷ್ಠ ವಯಸ್ಸು 30 ವರ್ಷ. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.
ವಿದ್ಯಾರ್ಹತೆ
ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ ಪ್ರಮಾಣಪತ್ರವನ್ನು ಅಭ್ಯರ್ಥಿಗಳು ಹೊಂದಿರಬೇಕು. ಈ ನೇಮಕಾತಿಯಲ್ಲಿ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಅಥವಾ ಪದವಿ ಹೊಂದಿರುವರು ಅರ್ಜಿ ಸಲ್ಲಿಸಹುದು.
ಇದನ್ನೂ ಓದಿ: ಇಂಡಿಯನ್ ನೇವಿ ಅಗ್ನಿವೀರ್ ನೇಮಕಾತಿ 2026 ಪ್ರಾರಂಭ: ಈ ದಿನದ ಒಳಗೆ ಅರ್ಜಿ ಸಲ್ಲಿಸಿ
ಆಯ್ಕೆ ಪ್ರಕ್ರಿಯೆ ಹೇಗೆ?
ಹಂತ 1 (CBT-1): ಇದು ಸ್ತ್ರೀನಿಂಗ್ ಪರೀಕ್ಷೆಯಾಗಿರುತ್ತದೆ.
ಎರಡನೇ ಹಂತ (CBT-2): ಇದು ತಾಂತ್ರಿಕ ಮತ್ತು ಸಾಮಾನ್ಯ ವಿಷಯಗಳ ಆಧಾರದ ಮೇಲೆ ಪರೀಕ್ಷೆಯನ್ನು ಒಳಗೊಂಡಿರುತ್ತದೆ.
ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಟೆಸ್ಟ್ (CBAT): ಅಸಿಸ್ಟಂಟ್ ಲೊಕೊ ಪೈಲಟ್ ಹುದ್ದೆಗೆ ಮಾತ್ರ ಈ ಪರೀಕ್ಷೆ ಕಡ್ಡಾಯ.
ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ: ಅಭ್ಯರ್ಥಿಯು ದೈಹಿಕವಾಗಿ ಸದೃಢರಾಗಿರಬೇಕು ಮತ್ತು ‘A-1’ ದೃಷ್ಟಿ ಮಾನದಂಡವನ್ನು ಹೊಂದಿರಬೇಕು.
ಸಂಬಳ ಮತ್ತು ಆಯ್ಕೆ ಪ್ರಕ್ರಿಯೆ
ಅಸಿಸ್ಟಂಟ್ ಲೋಕೋ ಪೈಲಟ್ ಹುದ್ದೆಯು 7ನೇ ವೇತನ ಆಯೋಗದ ವೇತನ ಮಟ್ಟ 2 ರ ಅಡಿಯಲ್ಲಿ ಬರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಆರಂಭಿಕ ಮೂಲ ವೇತನ 19,900 ರೂ. ಜೊತೆಗೆ ಇತರ ರೈಲ್ವೆ ಭತ್ಯೆಗಳನ್ನು ಪಡೆಯುತ್ತಾರೆ.
ಅರ್ಜಿ ಸಲ್ಲಿಕೆ ಹೇಗೆ?
ಅರ್ಜಿ ಪ್ರಕ್ರಿಯೆ ಪ್ರಾರಂಭವಾದ ದಿನದಿಂಲೇ ಅಭ್ಯರ್ಥಿಗಳು ರೈಲ್ವೆಯ ಅಧಿಕೃತ ವೆಬ್‌ಸೈಟ್ rrbapply.gov.in ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು.



