ಬಾಯಲ್ಲಿ ನೀರೂರಿಸುವ ಕುಂದಾಪ್ರ ಚಿಕನ್‌ ಸುಕ್ಕ ಮನೆಯಲ್ಲೇ ಮಾಡುವುದು ಹೇಗೆ?

ನೀರು ದೋಸೆ, ಇಡ್ಲಿ ಜೊತೆಗೆ ಕುಂದಾಪ್ರ ಚಿಕನ್‌ ಸುಕ್ಕ ಅತ್ಯುತ್ತಮ ಕಾಂಬಿನೇಷನ್

kundapura chicken sukka : ನಾನ್‌ ವೆಜ್‌ ಅಡುಗೆಗೆ ಕರಾವಳಿ ಭಾಗದಲ್ಲಿ ಖ್ಯಾತಿ ಪಡೆದುಕೊಂಡಿದೆ. ಅದ್ರಲ್ಲೂ ಕುಂದಾಪುರದಲ್ಲಿನ ಕುಂದಾಪ್ರ ಚಿಕನ್‌ ಬಹು ಖ್ಯಾತಿ ಪಡೆದುಕೊಂಡಿದೆ. ಹೋಟೆಲ್‌ಗಳಲ್ಲಿ ಹೆಚ್ಚಾಗಿ ಸಿಗುವ ಈ ಖಾದ್ಯವನ್ನು ಮನೆಯಲ್ಲಿಯೇ ತಯಾರಿಸುವುದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ.

ಕೆಂಪು ಮೆಣಸಿನಕಾಯಿಗಳ ಖಾರ, ಸಾಂಬಾರ ಪದಾರ್ಥಗಳ ಪರಿಮಳ ಮತ್ತು ಹುರಿದ ತೆಂಗಿನ ತುರಿಯ ತರಿತರಿಯಾದ ಹದಕ್ಕೆ ಹೆಸರುವಾಸಿ. ಸಾಂಪ್ರದಾಯಿಕ ಕುಂದಾಪುರ ಶೈಲಿಯಲ್ಲಿ ತಯಾರಿಸಿದ ಮಸಾಲೆಯು ಚಿಕನ್ ಸುಕ್ಕ ಊಟಕ್ಕೆ ಒಂದು ವಿಶಿಷ್ಟ ರುಚಿಯನ್ನು ನೀಡುತ್ತದೆ. ಇದು ನೀರು ದೋಸೆ, ಇಡ್ಲಿ ಜೊತೆಗೆ ಅತ್ಯುತ್ತಮ ಕಾಂಬಿನೇಷನ್ ಎನಿಸಿಕೊಳ್ಳುತ್ತದೆ.

kundapura chicken sukka : ಬೇಕಾಗುವ ಸಾಮಗ್ರಿಗಳು:

  • ಚಿಕನ್: 1/2 ಕೆಜಿ (ಚಿಕ್ಕದಾಗಿ ಕತ್ತರಿಸಿದ್ದು)
  • ಈರುಳ್ಳಿ: 2 ದೊಡ್ಡದು (ಸಣ್ಣದಾಗಿ ಹೆಚ್ಚಿದ್ದು)
  • ಶುಂಠಿ-ಬೆಳ್ಳುಳ್ಳಿ ಪೇಸ್ಟ್: 1 ಚಮಚ
  • ಕರಿಬೇವು: ಸ್ವಲ್ಪ
  • ತೆಂಗಿನ ತುರಿ: 1 ಕಪ್
  • ತುಪ್ಪ ಅಥವಾ ಎಣ್ಣೆ: 2-3 ಚಮಚ
  • ಉಪ್ಪು: ರುಚಿಗೆ ತಕ್ಕಷ್ಟು

 ಮಸಾಲೆ ಹುದಿಕೊಳ್ಳಲು ಈ ಸಾಮಗ್ರಿ ಬಳಸಿ 

  • ಒಣ ಮೆಣಸಿನಕಾಯಿ: 8-10
  • ಧನಿಯಾ (ಕೊತ್ತಂಬರಿ ಬೀಜ): 2 ಚಮಚ
  • ಜೀರಿಗೆ: 1 ಚಮಚ
  • ಸೋಂಪು: 1/2 ಚಮಚ
  • ಮೆಂತೆ: 1/4 ಚಮಚ
  • ಕಾಳು ಮೆಣಸು: 1 ಚಮಚ
  • ಚಕ್ಕೆ, ಲವಂಗ, ಏಲಕ್ಕಿ: ತಲಾ 2-3
  • ಹುಣಸೆಹಣ್ಣು: ಸಣ್ಣ ನಿಂಬೆಹಣ್ಣಿನ ಗಾತ್ರದ್ದು

ಇದನ್ನೂ ಓದಿ : Beauty Tips : ಬಿಸಿಲ ಝಳದಲ್ಲೂ ನಿಮ್ಮ ಚರ್ಮ ಪಳಪಳ ಹೊಳಿಬೇಕಾ ? ಇಲ್ಲಿದೆ ಸಿಂಪಲ್‌ ಟಿಫ್ಸ್‌

ಕುಂದಾಪುರ ಚಿಕನ್‌ ಸುಕ್ಕ ಮಾಡುವುದು ಹೇಗೆ ? 

ಹಂತ 1: ಮಸಾಲೆ ತಯಾರಿ

  • ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಒಣ ಮೆಣಸಿನಕಾಯಿ, ಧನಿಯಾ, ಜೀರಿಗೆ, ಮೆಂತೆ, ಸೋಂಪು, ಕಾಳು ಮೆಣಸು ಮತ್ತು ಗರಂ ಮಸಾಲಾ ಪದಾರ್ಥಗಳನ್ನು ಸಣ್ಣ ಉರಿಯಲ್ಲಿ ಕೆಂಪಾಗುವವರೆಗೆ ಹುರಿಯಿರಿ.
  • ತಣಿಗಾದ ನಂತರ, ಹುಣಸೆಹಣ್ಣು ಮತ್ತು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
  • ಕೊನೆಯಲ್ಲಿ ತೆಂಗಿನ ತುರಿಯನ್ನು ಸೇರಿಸಿ ಕೇವಲ 1-2 ಸೆಕೆಂಡ್ ‘ಪಲ್ಸ್’ ಮಾಡಿ (ತೆಂಗಿನಕಾಯಿ ಪೂರ್ತಿ ಪೇಸ್ಟ್ ಆಗಬಾರದು, ತರಿತರಿಯಾಗಿರಲಿ).

ಹಂತ 2: ಚಿಕನ್ ಬೇಯಿಸುವುದು

  • ಒಂದು ಪಾತ್ರೆ ಅಥವಾ ಕಡಾಯಿಗೆ ಎಣ್ಣೆ/ತುಪ್ಪ ಹಾಕಿ ಬಿಸಿಯಾದ ನಂತರ ಕರಿಬೇವು ಮತ್ತು ಈರುಳ್ಳಿ ಹಾಕಿ ಕೆಂಪಾಗುವವರೆಗೆ ಹುರಿಯಿರಿ.
  • ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಬಾಡಿಸಿ.
  • ಈಗ ತೊಳೆದಿಟ್ಟ ಚಿಕನ್ ತುಂಡುಗಳನ್ನು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸ್ವಲ್ಪ ಅರಿಶಿನ ಹಾಕಿ ಚೆನ್ನಾಗಿ ಬೆರೆಸಿ.
  • ಚಿಕನ್ ತನ್ನಷ್ಟಕ್ಕೆ ನೀರು ಬಿಟ್ಟುಕೊಳ್ಳುತ್ತದೆ, ಹಾಗಾಗಿ ಹೆಚ್ಚುವರಿ ನೀರು ಹಾಕಬೇಡಿ. ಮುಚ್ಚಳ ಮುಚ್ಚಿ 10-15 ನಿಮಿಷ ಬೇಯಿಸಿ.

ಇದನ್ನೂ ಓದಿ : ಬೇಸಿಗೆಗೂ ಸೈ ತೂಕ ಇಳಿಕೆಗೂ ಜೈ! ಬಿಸಿಲಿನ ಬೇಗೆ ತಣಿಸುವ ತಂಪು ತಂಪು ಪಾನೀಯಗಳು 

ಹಂತ 3: ಮಸಾಲೆ ಬೆರೆಸುವುದು

  • ಚಿಕನ್ ಮುಕ್ಕಾಲು ಭಾಗ ಬೆಂದ ನಂತರ, ಸಿದ್ಧಪಡಿಸಿದ ಮಸಾಲೆಯನ್ನು ಸೇರಿಸಿ.
  • ಮಸಾಲೆಯ ಹಸಿ ವಾಸನೆ ಹೋಗಿ, ಚಿಕನ್ ಜೊತೆ ಚೆನ್ನಾಗಿ ಹೊಂದಿಕೊಳ್ಳುವವರೆಗೆ ಬೇಯಿಸಿ.
  • ನೀರೆಲ್ಲಾ ಆರಿ, ಮಸಾಲೆ ಚಿಕನ್ ತುಂಡುಗಳಿಗೆ ಗಟ್ಟಿಯಾಗಿ ಅಂಟಿಕೊಳ್ಳುವಂತಾಗಬೇಕು (ಡ್ರೈ ಆಗಬೇಕು).

ಕೊನೆಯಲ್ಲಿ ಸ್ವಲ್ಪ ತಾಜಾ ತೆಂಗಿನ ತುರಿ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಯಾದ ಕುಂದಾಪುರ ಚಿಕನ್ ಸುಕ್ಕ ಸಿದ್ಧ!

 

 

 

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.

Related Stories