ಅಂದದ ಮನೆಗೆ ಚೆಂದದ ಬಾಲ್ಕನಿ: ಈ ವಿಚಾರ ನೆನಪಿರಲಿ
Balcony Vastu Tips: ಬಾಲ್ಕನಿ ಎನ್ನುವುದು ಮನೆಗೆ ವಿಶೇಷವಾದ ಮೆರುಗನ್ನು ನೀಡುತ್ತದೆ. ಅದರಲ್ಲೂ ಫ್ಲಾಟ್ಗಳಲ್ಲಿ ವಾಸಿಸುವವರಿಗೆ ತಮ್ಮ ಬಾಲ್ಕನಿಯ ಬಗ್ಗೆ ವಿಶೇಷ ಅಭಿಮಾನ ಇರುತ್ತದೆ.
ದುಡಿದು, ದಣಿದು ಮನೆಗೆ ಬಂದಾಗ ಬಿಸಿ ಬಿಸಿ ಚಹಾ ಹೀರುತ್ತಾ ಒಂದಿಷ್ಟು ಸಮಯ ಶಾಂತಿಯಿಂದ ಕುಳಿತುಕೊಳ್ಳುವ ಜಾಗ ಎಂಬ ಭಾವನೆಯಿರುತ್ತದೆ.
ಇತ್ತೀಚೆಗಂತೂ ಬಾಲ್ಕನಿ ಎನ್ನುವುದು ನಮ್ಮೊಳಗಿರುವ ಕಲಾತ್ಮಕತೆಯನ್ನು ತೋರಿಸುವ, ವಿವಿಧ ಹೂವಿನ ಗಿಡ, ಸಣ್ಣಪುಟ್ಟ ತರಕಾರಿಗಳನ್ನು ಬೆಳೆದು ಸಂತೋಷಪಡುವ ಜಾಗ.
ಅಷ್ಟೇ ಅಲ್ಲದೇ ಮನೆಗೆ ಬಂದ ಅತಿಥಿಗಳ ಜೊತೆ ಕುಳಿತು ಹರಟುವ ಸ್ಥಳವೂ ಹೌದು. ವಾಸ್ತು ಶಾಸ್ತ್ರದ ದೃಷ್ಟಿಯಿಂದಲೂ ಮನೆಗೆ ಬಾಲ್ಕನಿ ಬಹಳ ಮುಖ್ಯವಾಗಿದೆ.
ಬಾಲ್ಕನಿಯನ್ನು ವಾಸ್ತು ಪ್ರಕಾರ ನಿರ್ವಹಣೆ ಮಾಡಿದರೆ, ಸಕಾರಾತ್ಮಕ ಶಕ್ತಿ ಮನೆಯಲ್ಲೆಲ್ಲಾ ಹರಡುತ್ತದೆ. ಹಾಗಾದರೆ ನಿಮ್ಮ ಮನೆಯ ಬಾಲ್ಕನಿ ಯಾವ ದಿಕ್ಕಿಗಿದ್ದರೆ ನಿಮಗೆ ಹೆಚ್ಚಿನ ಲಾಭ ತರುತ್ತದೆ ಎಂದು ನೋಡೋಣ.
ವಾಸ್ತು ಪ್ರಕಾರ ಯಾವ ದಿಕ್ಕಿನ ಬಾಲ್ಕನಿಯನ್ನು ಹೇಗೆ ಜೋಡಿಸಬೇಕು?
ಬಾಲ್ಕನಿ ಪೂರ್ವ ದಿಕ್ಕಿನಲ್ಲಿದ್ದರೆ:
ನಿಮ್ಮ ಮನೆಯ ಬಾಲ್ಕನಿ ಪೂರ್ವ ದಿಕ್ಕಿನಲ್ಲಿದ್ದರೆ, ಅದು ನಿಮ್ಮ ಇಡೀ ಮನೆಗೆ ಪ್ರಯೋಜನಕಾರಿಯಾಗಿದೆ. ಅದು ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹರಡಲು ನೆರವಾಗುತ್ತದೆ. ಸೂರ್ಯ ದೇವರ ಧನಾತ್ಮಕ ಕಿರಣಗಳು ಬೆಳಿಗ್ಗೆ ಈ ದಿಕ್ಕಿನಿಂದ ನಿಮ್ಮ ಮನೆಗೆ ಪ್ರವೇಶಿಸುವುದರಿಂದ, ನಿಮ್ಮ ದಿನ ಆರಂಭ ಉತ್ತಮವಾಗಿರುತ್ತದೆ. ವಾಸ್ತು ಪ್ರಕಾರ ಪೂರ್ವ ದಿಕ್ಕಿಗೆ ಇರುವ ಬಾಲ್ಕನಿಯಲ್ಲಿ ದೊಡ್ಡ ಮತ್ತು ಭಾರವಾದ ವಸ್ತ. ತುಳಸಿ ಗಿಡವನ್ನು ಮರೆಯದೇ ಇಡಿ. ಆದರೆ ತುಂಬಾ ಭಾರವಾ ಪಾಟ್ಗಳನ್ನು, ಮುರಿದ ಗೃಹೋಪಯೋಗಿ ವಸ್ತು, ಕಸ ಇತ್ಯಾದಿಗಳನ್ನು ಅಲ್ಲಿ ಇಡಬೇಡಿ.
ಇದನ್ನೂ ಓದಿ: Marigold Vastu Tips: ಮನೆಯ ಈ ದಿಕ್ಕಿಗೆ ಚೆಂಡು ಹೂವಿನ ಗಿಡ ಬೆಳೆಸಿ; ಸಂಪತ್ತು ವೃದ್ಧಿಸಿ
ಬಾಲ್ಕನಿ ಪಶ್ಚಿಮ ದಿಕ್ಕಿನಲ್ಲಿದ್ದರೆ:
ನಿಮ್ಮ ಮನೆ ಅಥವಾ ಫ್ಲಾಟ್ನ ಪಶ್ಚಿಮ ದಿಕ್ಕಿನಲ್ಲಿ ಬಾಲ್ಕನಿಯಿದ್ದರೆ ಮಧ್ಯಾಹ್ನದ ನಂತರ ಅದನ್ನು ಪರದೆಯಿಂದ ಮುಚ್ಚಿ. ಏಕೆಂದರೆ ವಾಸ್ತು ಪ್ರಕಾರ, ಪಶ್ಚಿಮ ದಿಕ್ಕಿನಿಂದ ದುರ್ಬಲ ಅಥವಾ ನಕಾರಾತ್ಮಕ ಶಕ್ತಿ ಮಾತ್ರ ಪ್ರವೇಶಿಸುತ್ತದೆ. ಕೆಲವು ಭಾರವಾದ ಪಾಟ್ ಮತ್ತು ಸಸ್ಯಗಳನ್ನು ಇಲ್ಲಿ ಬೆಳೆಸಬಹುದು.
ಬಾಲ್ಕನಿ ಉತ್ತರ ದಿಕ್ಕಿನಲ್ಲಿದ್ದರೆ:
ನೀವು ನಿಮ್ಮ ಮನೆ ಅಥವಾ ಫ್ಲಾಟ್ನ ಬಾಲ್ಕನಿಯನ್ನು ಉತ್ತರ ದಿಕ್ಕಿನಲ್ಲಿ ನಿರ್ಮಿಸಿದ್ದರೆ, ಅದನ್ನು ಪೂರ್ವ ದಿಕ್ಕಿನಲ್ಲಿರುವ ಬಾಲ್ಕನಿಯಷ್ಟೇ ಸ್ವಚ್ಛವಾಗಿಡಿ. ನೀವೇ ಸ್ವತಃ ಮನೆ ಕಟ್ಟಿಸುತ್ತಿದ್ದರೆ ಪೂರ್ವ, ಉತ್ತರ ಮತ್ತು ಈಶಾನ್ಯ ಮೂಲೆಯಲ್ಲಿ ದೊಡ್ಡ ಬಾಲ್ಕನಿಯನ್ನು ನಿರ್ಮಿಸುವುದು ವಾಸ್ತು ಪ್ರಕಾರ ಉತ್ತಮವಾಗಿದೆ. ಅಂತಹ ಬಾಲ್ಕನಿಯು ಕಟ್ಟಡಕ್ಕೆ ವಿಶಾಲವಾದ ನೆಲೆ ಮತ್ತು ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ.
ಬಾಲ್ಕನಿ ದಕ್ಷಿಣ ದಿಕ್ಕಿನಲ್ಲಿದ್ದರೆ:
ಬಾಲ್ಕನಿಯನ್ನು ಮನೆಯ ದಕ್ಷಿಣ ದಿಕ್ಕಿನಲ್ಲಿ ನಿರ್ಮಿಸಿದ್ದರೆ, ಅಲ್ಲಿ ಎತ್ತರದ ಹಾಗೂ ಹ್ಯಾಂಗಿಂಗ್ ಹೂವುಗಳ ಅಥವಾ ವಿವಿಧ ರೀತಿಯ ಅಲಂಕಾರಿಕ ಬಳ್ಳಿಗಳನ್ನು ನೆಡಬೇಕು. ದಕ್ಷಿಣಾಭಿಮುಖ ಬಾಲ್ಕನಿಯ ಒಂದು ಭಾಗವನ್ನು ನೀವು ಸದ್ಯ ಬಳಸದ ಕೆಲವು ವಸ್ತುಗಳನ್ನು ಸಹ ಇಡಬಹುದು. ಆದರೆ ಅವುಗಳನ್ನು ಸಹ ವ್ಯವಸ್ಥಿತವಾಗಿಡಬೇಕು. ದಕ್ಷಿಣಾಭಿಮುಖ ಬಾಲ್ಕನಿಯು ಮನೆಯ ಮುಂಭಾಗವಾಗಿದ್ದರೆ, ಆ ಬಾಲ್ಕನಿಯಲ್ಲಿ ದೊಡ್ಡ ಸಸ್ಯಗಳಿಂದ ಅಲಂಕರಿಸಬಹುದು.
ಇದನ್ನೂ ಓದಿ: ಶನಿ ದೋಷ ದೂರಮಾಡುತ್ತದೆ ಶಂಖಪುಷ್ಪ ಗಿಡ: ಆದರೆ ಮನೆಯ ಈ ದಿಕ್ಕಿಗೆ ಬೆಳೆಸಿದ್ರೆ ಮಾತ್ರ ನಿಮಗೆ ಸಿಗತ್ತೆ ಲಾಭ
ಬಾಲ್ಕನಿಯನ್ನು ಯಾವುದೇ ದಿಕ್ಕಿನಲ್ಲಿ ನಿರ್ಮಿಸಿದರೂ ಅದು ಯಾವಾಗಲೂ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಏಕೆಂದರೆ ಸಾಮಾನ್ಯವಾಗಿ ಮನೆಯ ಪ್ರತಿ ಕೋಣೆಯಲ್ಲೂ ಒಂದು ಅಥವಾ ಹೆಚ್ಚಿನ ಕಿಟಕಿಗಳು ಮತ್ತು ಬಾಗಿಲು ಇರುತ್ತವೆ. ಧನಾತ್ಮಕ ಶಕ್ತಿಯು ಯಾವಾಗಲೂ ಮನೆಯ ಕಿಟಕಿಗಳು ಮತ್ತು ಬಾಗಿಲುಗಳ ಮೂಲಕ ಮನೆಗೆ ಪ್ರವೇಶಿಸುತ್ತದೆ. ಈಗ ಶಕ್ತಿಯು ಪ್ರವೇಶಿಸುವ ಮಾರ್ಗವು ಶುದ್ಧವಾಗಿಲ್ಲದಿದ್ದರೆ, ನಕಾರಾತ್ಮಕ ಶಕ್ತಿಗಳು ಮಾತ್ರ ನಮ್ಮ ಮನೆಗೆ ಪ್ರವೇಶಿಸುತ್ತವೆ. ಇದು ಮನೆಯಲ್ಲಿ ಅಶಾಂತಿಯ ವಾತಾವರಣವನ್ನು ಸೃಷ್ಟಿಸಬಹುದು. ಆದ್ದರಿಂದ ಬಾಲ್ಕನಿಯ ಬಗ್ಗೆಯೂ ವಿಶೇಷ ಕಾಳಜಿವಹಿಸುವುದು ಅಗತ್ಯವಾಗಿದೆ.
ಇದನ್ನೂ ಓದಿ: Vastu Tipe : ಕನಸಿನ ಮನೆ ಕಟ್ಟಿಸೋಕೆ ಜಾಗ ಪರಿಶೀಲಿಸುತ್ತಿದ್ದೀರಾ ? ಒಂದು ನಿಮಿಷ ತಾಳಿ, ವಾಸ್ತುಶಾಸ್ತ್ರ ಏನು ಹೇಳುತ್ತೆ ?
Which Direction Is The Best To Place Balcony For Your Sweet Home Vastu Tips In Kannada



