ಸ್ವಪ್ನ ಶಾಸ್ತ್ರ: ಕನಸಿನಲ್ಲಿ ಬೆಸ್ಟ್‌ ಫ್ರೆಂಡ್‌ ಜೊತೆ ಜಗಳವಾಡಿದಂತೆ ಕಂಡುಬಂದರೆ ಅದರ ಅರ್ಥ ಏನು ಗೊತ್ತಾ?

Dream Astrology: ಕನಸುಗಳು ಬಹಳ ವಿಚಿತ್ರವಾಗಿರುತ್ತವೆ. ಕೆಲವೊಮ್ಮೆ ನಕ್ಕುನಕ್ಕು ಸುಸ್ತಾಗುವಂತೆ ಮಾಡಿದರೆ, ಇನ್ನು ಕೆಲವೊಮ್ಮೆ ಬಿಕ್ಕಿಬಿಕ್ಕಿ ಅಳುವಂತೆ ಮಾಡುತ್ತವೆ.

ಕೆಲವು ಕನಸುಗಳು ಬೆಳಗಾಗುವಷ್ಟರಲ್ಲಿ ಮರೆತು ಹೋದರೆ, ಕೆಲವು ಕನಸುಗಳು ಬಹಳ ದಿನಗಳವರೆಗೆ ಬಿಡದೆ ಕಾಡುತ್ತವೆ.

ಜ್ಯೋತಿಷ್ಯ ಶಾಸ್ತ್ರದಂತೆ ಸ್ವಪ್ನ ಶಾಸ್ತ್ರವೂ ಸಹ ಕನಸುಗಳ ಆಧಾರದ ಮೇಲೆ ಒಂದಿಷ್ಟು ಸಂಕೇತಗಳನ್ನು, ಮುನ್ನೆಚ್ಚರಿಕೆಯನ್ನು ಹೇಳುತ್ತದೆ.

ಕನಸುಗಳು ಶುಭ ಮತ್ತು ಅಶುಭ ಸಂಕೇತಗಳನ್ನು ನೀಡುತ್ತವೆ. ಕೆಲವು ಕನಸುಗಳು ಜೀವನದಲ್ಲಿ ಎಚ್ಚರಿಕೆಯ ಕರೆಗಂಟೆಯಾಗಿದ್ದರೆ, ಕೆಲವು ಬದಲಾವಣೆಗಳನ್ನು ಸೂಚಿಸುತ್ತವೆ.

ನಿಮಗೆ ಕನಸಿನಲ್ಲಿ ನಿಮ್ಮ ಪ್ರಾಣ ಸ್ನೇಹಿತನೊಂದಿಗೆ ಜಗಳವಾಡಿದಂತೆ ಕಂಡುಬಂದರೆ ಅದರ ಅರ್ಥವೇನು? ನಿಮ್ಮ ಸುಂದರ ಗೆಳೆತನ ಹದಗೆಡುವ ಸೂಚನೆಯೇ ಅಥವಾ ಬೇರೆ ಏನನ್ನಾದರೂ ಸೂಚಿಸುತ್ತದೆಯೇ ಎಂದು ನೋಡೋಣ.

ಕನಸಿನಲ್ಲಿ ಬೆಸ್ಟ್‌ ಫ್ರೆಂಡ್‌ ಜೊತೆ ಜಗಳವಾಡುವುದು

ನೀವು ಎಂದಾದರೂ ನಿಮ್ಮ ಬೆಸ್ಟ್‌ ಫ್ರೆಂಡ್‌ನೊಂದಿಗೆ ಜಗಳವಾಡುವ ಕನಸು ಕಂಡಿದ್ದರೆ ನೀವು ಬಹಳ ಜಾಗರೂಕರಾಗಿರಬೇಕು ಎಂಬುದನ್ನು ಅದು ಸೂಚ್ಯವಾಗಿ ತಿಳಿಸುತ್ತದೆ.

ಸ್ವಪ್ನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಸ್ನೇಹಿತನೊಂದಿಗೆ ಜಗಳವಾಡಿದ್ದೀರಿ ಎಂದರೆ ನಿಮ್ಮ ಸ್ನೇಹಿತ ತೊಂದರೆಯಲ್ಲಿದ್ದಾನೆ ಎಂದೂ ಹೇಳುತ್ತದೆ.

ಈ ಕನಸು ನಿಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಬರುವುದರ ಮುನ್ಸೂಚನೆಯೂ ಆಗಿರಬಹದು. ಆದ್ದರಿಂದ ಬಹಳ ಎಚ್ಚರಿಕೆಯಿಂದ ಮುಂದುವರಿಯಿರಿ. ಅನಗತ್ಯ ಚರ್ಚೆಗಳನ್ನು ಮಾಡಬೇಡಿ. ಸ್ವಲ್ಪ ಸಮಯ ಸಮಾಧಾನದಿಂದ ವರ್ತಿಸಿ.

ಇದನ್ನೂ ಓದಿ: ಕಾರ್ತಿಕ ಪೂರ್ಣಿಮಾ 2025 ಯಾವಾಗ? ದಿನಾಂಕ, ಪೂಜಾ ವಿಧಾನ, ದಾನ, ಮಹತ್ವ ತಿಳಿಯಿರಿ

ಕನಸಿನಲ್ಲಿ ಸ್ನೇಹಿತನಿಗೆ ಕೋಪ ಬಂದಿರುವುದು

ನಿಮ್ಮ ಸ್ನೇಹಿತ ನಿಮ್ಮ ಮೇಲೆ ಕೋಪಗೊಂಡಂತೆ ಕನಸು ಬಿದ್ದರೆ ಅದರ ಅರ್ಥ ನಿಮ್ಮ ಮತ್ತು ಅವರ ಸ್ನೇಹದಲ್ಲಿ ಕೆಲವು ಬದಲಾವಣೆಗಳಾಗಬಹುದು ಎಂಬುದನ್ನು ಸೂಚಿಸುತ್ತದೆ.

ಅಂತಹ ಸಂದರ್ಭದಲ್ಲಿ ನಿಮ್ಮ ಸ್ನೇಹಿತನೊಂದಿಗೆ ಕುಳಿತು ಸೂಕ್ಷ್ಮ ವಿಷಯವನ್ನು ಬಗೆಹರಿಸಿಕೊಳ್ಳಿ.

ಕನಸಿನಲ್ಲಿ ಸ್ನೇಹಿತ ಅಳುತ್ತಿರುವುದು

ನಿಮಗೆ ಕನಸಿನಲ್ಲಿ ಸ್ನೇಹಿತ ಅಳುವುದನ್ನು ನೋಡುವುದು ಕೆಟ್ಟದ್ದಂದು ಪರಿಗಣಿಸಲಾಗಿದೆ. ಅದರ ಅರ್ಥ ನಿಮ್ಮ ಸ್ನೇಹಿತ ಸಮಸ್ಯೆ ಎದುರಿಸುತ್ತಿದ್ದಾನೆ ಹಾಗೂ ಅವನಿಗೆ ನಿಮ್ಮ ಅವಶ್ಯಕತೆ ಇದೆ ಎಂದು ಸೂಚಿಸುತ್ತದೆ.

ಸಂಗಾತಿಯೊಂದಿಗೆ ಜಗಳವಾಡುವುದು

ಕನಸಿನಲ್ಲಿ ಸಂಗಾತಿಯೊಂದಿಗೆ ಜಗಳವಾಡುವುದನ್ನು ನೋಡಿದ್ದರೆ, ನೀವಿಬ್ಬರೂ ಕೆಲವು ವಿಷಯಗಳಿಗೆ ಸಂಘರ್ಷ ಮಾಡುತ್ತಿದ್ದೀರಿ ಎಂದರ್ಥ.

ಅಂತಹ ಪರಿಸ್ಥಿತಿಯಲ್ಲಿ ಸಂಗಾತಿಯೊಂದಿಗೆ ಕುಳಿತು ಮಾತನಾಡಿ. ಮನಸ್ಸಿನಲ್ಲಿರುವ ಅನುಮಾನ, ಕಹಿ ಘಟನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ.

ಕನಸಿನಲ್ಲಿ ಬಾಲ್ಯದ ಸ್ನೇಹಿತನನ್ನು ನೋಡುವುದು

ಎಲ್ಲರ ಬಾಲ್ಯದಲ್ಲೂ ಬಹಳಷ್ಟು ಸ್ನೇಹಿತರಿರುತ್ತಾರೆ. ಕೆಲವರು ಇಂದಿಗೂ ಸಂಪರ್ಕದಲ್ಲಿದ್ದರೆ, ಇನ್ನು ಕೆಲವರು ಸದಾ ನೆನಪಿನಲ್ಲಿ ಮಾತ್ರ ಇರುತ್ತಾರೆ.

ಅಂತಹ ಅಪರೂಪದ ಸ್ನೇಹಿತನ ಕನಸು ಬಿದ್ದಿದ್ದರೆ ಅದರ ಅರ್ಥ ಶುಭವೆಂದು ಸ್ವಪ್ನ ಶಾಸ್ತ್ರ ಹೇಳುತ್ತದೆ.

ಈ ಕನಸು ನಿಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವ ಸಂಕೇತವಾಗಿರಬಹುದು. ಇದು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಕೂಡಾ ತರಬಹುದು.

ಇದನ್ನೂ ಓದಿ: Jupiter’s Transit: ಗುರುಗ್ರಹದ ಸಂಚಾರ – ಭಾಗ್ಯ ಬದಲಾವಣೆಯ ಕಾಲ

(What is the meaning of fight with best friend in your dream according to dream astrology)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories