ಕಾರ್ತಿಕ ಪೂರ್ಣಿಮಾ 2025 ಯಾವಾಗ? ದಿನಾಂಕ, ಪೂಜಾ ವಿಧಾನ, ದಾನ, ಮಹತ್ವ ತಿಳಿಯಿರಿ

Kartika Purnima 2025: ಹಿಂದೂ ಧರ್ಮದಲ್ಲಿ ಪ್ರತಿಯೊಂದು ತಿಂಗಳಿಗೂ ಅದರದೇ ಆದ ಮಹತ್ವವಿದೆ. ಕಾರ್ತಿಕ ಮಾಸದ ಹುಣ್ಣಿಮೆಯನ್ನು ಕಾರ್ತಿಕ ಪೂರ್ಣಿಮಾ ಎಂದು ಕರೆಯುತ್ತಾರೆ.

ಹಿಂದೂ ಪಂಚಾಂಗದ ಹನ್ನೆರಡು ತಿಂಗಳುಗಳಲ್ಲಿ ಕಾರ್ತಿಕ ಮಾಸವು ದೇವರ ಆರಾಧನೆಗೆ ಉತ್ತಮವೆಂದು ಪರಿಗಣಿಸಲಾಗಿದೆ.

ಶ್ರೀಮನ್ ನಾರಾಯಣನೇ ಮಾಸಗಳಲ್ಲಿ ನಾನು ಕಾರ್ತಿಕ ಮಾಸ ಎಂದು ಹೇಳಿದ್ದಾನೆ. ಕಾರ್ತಿಕ ಮಾಸದಲ್ಲಿ ದೀಪೋತ್ಸವಗಳನ್ನು ನಡೆಸಲಾಗುತ್ತದೆ.

ಸ್ಕಂದ ಪುರಾಣದ ಪ್ರಕಾರ ಕಾರ್ತಿಕ ಮಾಸದಲ್ಲಿ ಸೂರ್ಯೋದಯಕ್ಕೆ ಮೊದಲು ಸ್ನಾನ ಮಾಡಿ ದೇವರ ಪೂಜೆ ಮಾಡುವ ವ್ಯಕ್ತಿ ಅಪಾರ ಪುಣ್ಯ ಗಳಿಸುತ್ತಾನೆ.

ಕಾರ್ತಿಕ ಪೂರ್ಣಿಮಾಗೆ ಎಷ್ಟೊಂದು ಮಹತ್ವ ಏಕೆ?

ಕಾರ್ತಿಕ ಮಾಸದಲ್ಲಿ ತುಳಸಿ ಮದುವೆ, ದೇವ ಉತ್ಥಾನ ಏಕಾದಶಿ, ದೇವ ದೀಪಾವಳಿಯಂತಹ ಹಲವು ಪುಣ್ಯದ ಆಚರಣೆಗಳನ್ನು ಮಾಡುತ್ತಾರೆ.

ಶಾಸ್ತ್ರಗಳಲ್ಲಿ ಕಾರ್ತಿಕ ಹುಣ್ಣಿಮೆಯ ದಿನದಂದು ಗಂಗಾ ಸ್ನಾನಮಾಡುವುದರಿಂದ ಸಿಗುವ ಮಹತ್ವವನ್ನು ವಿವರಿಸಿದ್ದಾರೆ. ಈ ದಿನದಂದು ಗಂಗಾ ನದಿ ಸೇರಿದಂತೆ ಇತರ ಪವಿತ್ರ ನದಿಗಳಲ್ಲಿ ಮಾಡುವ ಸ್ನಾನವು ವಿಶೇಷ ಪುಣ್ಯ ನೀಡುತ್ತದೆ ಎಂದು ನಂಬಲಾಗಿದೆ.

ಪೂರ್ಣಿಮಾಯಂದು ಸ್ನಾನ, ಅರ್ಘ್ಯ ಸಮರ್ಪಣೆ, ತರ್ಪಣ, ಜಪ, ತಪಸ್ಸು, ಪೂಜೆ, ಕೀರ್ತನೆ ಮತ್ತು ದಾನ ಮಾಡುವ ಮೂಲಕ, ವಿಷ್ಣು ಸ್ವತಃ ಜೀವಿಗಳನ್ನು ಪಾಪಗಳಿಂದ ಮುಕ್ತಗೊಳಿಸುತ್ತಾನೆ ಎಂಬ ನಂಬಿಕೆಯಿದೆ.

ಜೀವನದಲ್ಲಿ ಕಷ್ಟಗಳು ದೂರವಾಗಿ, ಶಾಂತಿ ನೆಮ್ಮದಿ ಸಿಗುತ್ತದೆ. ಜೊತೆಗೆ ಮೋಕ್ಷ ದೊರಕುತ್ತದೆ.

ಕಾರ್ತಿಕ ಹುಣ್ಣಿಮೆ ತಿಥಿ ಯಾವಾಗ?

ಹುಣ್ಣಿಮೆ ತಿಥಿ ಪ್ರಾರಂಭ : ನವೆಂಬರ್‌ 4, 2025 ರಾತ್ರಿ 10 ಗಂಟೆ 36 ನಿಮಿಷಕ್ಕೆ ಪ್ರಾರಂಭ.

ಹುಣ್ಣಿಮೆ ತಿಥಿ ಅಂತ್ಯ : ನವೆಂಬರ್‌ 5, 2025 ಸಂಜೆ 6 ಗಂಟೆ 48 ನಿಮಿಷಕ್ಕೆ ಅಂತ್ಯ.

ಆದರೆ ಉದಯ ತಿಥಿಯ ಪ್ರಕಾರ ಕಾರ್ತಿಕ ಹುಣ್ಣಿಮೆಯನ್ನು ನವೆಂಬರ್‌ 5 ರಂದು ಆಚರಿಸಲಾಗುತ್ತದೆ.

ಇದನ್ನೂ ಓದಿ: ಮಲಗುವಾಗ ಈ 5 ವಸ್ತುಗಳನ್ನು ಪಕ್ಕಕ್ಕಿಟ್ಟು ಮಲಗಬೇಡಿ: ಆರ್ಥಿಕ ಸಂಕಷ್ಟ ಎದುರಾಗಬಹುದು

ಪೂಜಾ ವಿಧಾನ ಮತ್ತು ದಾನ

ಈ ದಿನದಂದು ಭಕ್ತರು ಬೆಳಿಗ್ಗೆ ಬೇಗನೆ ಎದ್ದು ಬ್ರಾಹ್ಮಿ ಮುಹೂರ್ತದಲ್ಲಿ ಸ್ನಾನ ಮಾಡಬೇಕು. ನಂತರ, ಸೂರ್ಯ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಸಾಧ್ಯವಾದರೆ, ದೇವಸ್ಥಾನಕ್ಕೆ ಭೇಟಿ ನೀಡಬೇಕು.

ನಂತರ ಪೂಜೆಯನ್ನು ಮುಗಿಸಿ, ವ್ಯಕ್ತಿಯು ಸಾಮರ್ಥ್ಯಕ್ಕೆ ಅನುಗುಣವಾಗಿ ಬಡವರಿಗೆ ದಾನ ಮಾಡಬೇಕು. ಇದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ.

ತುಳಸಿ ಗಿಡದ ಬಳಿ ದೀಪ ಬೆಳಗಿಸಿ. ಸಾಧ್ಯವಾದರೆ ದೇವಾಲಯದಲ್ಲಿ ದೀಪವನ್ನು ಬೆಳಗಿಸಿ. ನಂತರ, ವಿಷ್ಣು ಮತ್ತು ಲಕ್ಷ್ಮಿ ದೇವಿಗೆ ಪೂಜೆ ಸಲ್ಲಿಸಿ.

ಹೂವು, ಗಂಧ ಅರ್ಪಿಸಿ. ದೀಪವನ್ನು ಬೆಳಗಿಸಿ ವಿಷ್ಣು ಚಾಲೀಸಾವನ್ನು ಪಠಿಸಿ. ದೇವರ ನಾಮ ಜಪಿಸುವುದರಿಂದ ದೇವರ ಕೃಪೆಗೆ ಪಾತ್ರರಾಗಬಹುದಾಗಿದೆ.

ನಂತರ ದೇವರಿಗೆ ಹಣ್ಣು, ಸಿಹಿತಿಂಡಿಗಳನ್ನು ಅರ್ಪಿಸಿ. ಎಲ್ಲರಿಗೂ ಪ್ರಸಾದವನ್ನು ವಿತರಿಸಿ.

ಇದನ್ನೂ ಓದಿ: Vastu Tips: ಫ್ಯಾನ್, ಲೈಟ್ ಅಳವಡಿಸುವಾಗ ಮಾಡುವ ಈ ತಪ್ಪುಗಳು ಮನೆಯ ಸಂತೋಷ ಕಸಿದುಕೊಳ್ಳಬಹುದು ಎಚ್ಚರ!

(When is Kartika Purnima 2025 Know the Date Time Pooja Vidhi and Significance)

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories