ರಾತ್ರಿ ಹೊತ್ತು ಡಾರ್ಕ್ ಚಾಕಲೇಟ್ ತಿನ್ನುವುದು ಆರೋಗ್ಯಕ್ಕೆ ಹಾನಿಕಾರವೇ : ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ
Dark chocolate: ಕೆಲವರಿಗೆ ರಾತ್ರಿ ಊಟದ ಬಳಿಕ ಡಾರ್ಕ್ ಚಾಕಲೇಟ್ ತಿನ್ನುವ ಅಭ್ಯಾಸ ಇರುತ್ತದೆ. ಸ್ವಲ್ಪ ಕಹಿ, ಸ್ವಲ್ಪ ಸಿಹಿ ಅನುಭವವು ಅನೇಕರಿಗೆ ವಿಪರೀತ ತೃಪ್ತಿ ನೀಡುತ್ತದೆ. ಒಂದು ರೀತಿಯಲ್ಲಿ ಹಲವರಿಗೆ ಅವರ ದಿನವನ್ನು ಪೂರ್ಣಗೊಳಿಸಲು ಒಂದು ಡಾರ್ಕ್ ಚಾಕಲೇಟ್ ಬೇಕೇ ಬೇಕು.
ಆದರೆ ರಾತ್ರಿ ಮಲಗುವ ಮುನ್ನ ಡಾರ್ಕ್ ಚಾಕಲೇಟ್ ತಿಂದು ಹಾಸಿಗೆಯಲ್ಲಿ ಕಣ್ಮುಚ್ಚುವ ನಿಮ್ಮ ದೇಹದ ಒಳಗೆ ಈ ಡಾರ್ಕ್ ಚಾಕಲೇಟ್ ಏನು ಮಾಡಬಹುದು ಎಂದು ಎಂದಾದರೂ ಯೋಚಿಸಿದ್ದೀರೇ ? ಡಾರ್ಕ್ ಚಾಕಲೇಟ್ ಸಕ್ಕರೆ ಮಟ್ಟವನ್ನು ಕಡಿಮೆ ಪ್ರಮಾಣದಲ್ಲಿ ಹೊಂದಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ಎನಿಸಿದರೂ ಸಹ ರಾತ್ರಿ ವೇಳೆ ತಿನ್ನುವುದು ಸೂಕ್ತವಾದ ಸಮಯವೇ ಅಲ್ಲವೇ ಎಂಬುದನ್ನು ತಿಳಿದುಕೊಳ್ಳಲೇಬೇಕು.
ನೀವು ರಾತ್ರಿ ಚಾಕಲೇಟ್ ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಾಗುತ್ತದೆ ಈ ಬದಲಾವಣೆ :
1. ಆಂಟಿ ಆಕ್ಸಿಡಂಟ್ಗಳಿಂದ ನಿಮ್ಮ ದೇಹಕ್ಕೆ ಲಾಭ :
ಡಾರ್ಕ್ ಚಾಕಲೇಟ್ಗಳಲ್ಲಿ ಅಗಾಧ ಪ್ರಮಾಣದಲ್ಲಿರುವ ಫ್ಲೇವನಾಯ್ಡ್ಗಳು ಉರಿಯೂತ ಮತ್ತು ಆಕ್ಸಿಡೇಟಿವ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ರಾತ್ರಿ ಸಮಯದಲ್ಲಿ ಆಂಟಿ ಆಕ್ಸಿಡಂಟ್ಗಳು ಜೀವಕೋಶಗಳ ಚೇತರಿಕೆಗೆ ಬೆಂಬಲ ನೀಡುತ್ತವೆ. ಹೀಗಾಗಿ ಊಟದ ನಂತರ ಡಾರ್ಕ್ ಚಾಕಲೇಟ್ ಸೇವನೆ ಈ ಕಾರಣದಿಂದ ಒಳ್ಳೆಯದು ಎಂದು ಪರಿಗಣಿಸಬಹುದು.
- ಮೂಡ್ನಲ್ಲಿ ಬದಲಾವಣೆ ತರುತ್ತದೆ :
ಇಡೀ ದಿನದ ಜಂಜಾಟ, ಕೆಲಸದ ಒತ್ತಡದಿಂದ ಜೀವನವೇ ಹೈರಾಣಾಗಿ ಹೋಗಿರುತ್ತದೆ. ಅಂತಹ ಸಂದರ್ಭದಲ್ಲಿ ರಾತ್ರಿ ಮಲಗುವ ಮುನ್ನ ಒಂದು ತುಂಡು ಡಾರ್ಕ್ ಚಾಕಲೇಟ್ ಸೇವನೆ ಮಾಡುವುದರಿಂದ ಹಿತವಾದ ಭಾವನೆ ನಿಮ್ಮದಾಗುತ್ತದೆ. ದೇಹಕ್ಕೆ ಹಿತವನ್ನು ನೀಡುವಂತಹ ಸಿರೊಟೋನಿನ್ ಮತ್ತು ಎಂಡಾರ್ಫಿನ್ಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ. . ರಾತ್ರಿಯಿಡೀ ವಿಶ್ರಾಂತಿ ಪಡೆಯುವಾಗ ಇದು ನಿಮ್ಮನ್ನು ಶಾಂತ ಮತ್ತು ಸಂತೋಷದ ಸ್ಥಿತಿಯಲ್ಲಿರಿಸುತ್ತದೆ. ಭಾವನಾತ್ಮಕವಾಗಿ ತಿನ್ನುವವರಿಗೆ, ಇದು ತುಂಬಾ ಸಾಂತ್ವನ ನೀಡುವ ಒಂದು ಕಾರಣವಾಗಿದೆ. - ಕೆಫಿನ್ನಿಂದ ನಿದ್ರೆಗೆ ಭಂಗ :
ಪ್ರತಿಯೊಂದು ಒಳ್ಳೆಯದರ ಜೊತೆ ಕೆಟ್ಟದ್ದನ್ನೂ ಹೊಂದಿರುತ್ತದೆ. ಹಾಗೆಯೇ ಡಾರ್ಕ್ ಚಾಕಲೇಟ್ಗಳು ಕೂಡ,,! ಡಾರ್ಕ್ ಚಾಕಲೇಟ್ನಲ್ಲಿರುವ ಕೆಫೀನ್ ಮತ್ತು ಥಿಯೋಬ್ರೋಮಿನ್ ಅಂಶಗಳು ನಿಮ್ಮ ನಿದ್ರೆಯ ಮೇಲೆ ದುಷ್ಪರಿಣಾಮ ಬೀರಬಹುದು. ನೀವು ತಡರಾತ್ರಿ ಚಾಕಲೇಟ್ ತಿಂದರೆ ನಿದ್ರೆ ಬರುವುದು ಇನ್ನೂ ತಡವಾಗಬಹುದು. ನಿದ್ರೆಯ ಗುಣಮಟ್ಟ ಹಾಳಾಗಬಹುದು. ವಿಶ್ರಾಂತಿ ಪಡೆಯುವ ಬದಲು ನೀವು ಜಾಗರೂಕ ಸ್ಥಿತಿ ತಲುಪಿಬಿಡುತ್ತೀರಿ. - ರಾತ್ರಿ ಸಕ್ಕರೆಯುಕ್ತ ಆಹಾರ ತಿನ್ನುವ ಬಯಕೆ ಹೆಚ್ಚುವುದು :
ಸಾಮಾನ್ಯ ಚಾಕಲೇಟ್ಗಳಿಗೆ ಹೋಲಿಕೆ ಮಾಡಿದರೆ ಡಾರ್ಕ್ ಚಾಕಲೇಟ್ಗಳಲ್ಲಿ ಸಕ್ಕರೆ ಅಂಶ ಕಡಿಮೆ ಇರುತ್ತದೆ. ಆದರೂ ಇದು ನಿಮ್ಮ ದೇಹದಲ್ಲಿ ಸಕ್ಕರೆಯುಕ್ತ ಆಹಾರವನ್ನು ಸೇವಿಸಬೇಕು ಎನ್ನುವ ಬಯಕೆಯನ್ನು ಜಾಸ್ತಿ ಮಾಡುತ್ತದೆ. ಈ ಕಾರಣಕ್ಕೆ ರಾತ್ರಿ ಮಲಗುವ ಸಂದರ್ಭದಲ್ಲಿ ಡಾರ್ಕ್ ಚಾಕಲೇಟ್ ಸೇವನೆ ಸೂಕ್ತ ಎಂದು ಪರಿಗಣಿಸಲು ಸಾಧ್ಯವಿಲ್ಲ. - ಹೊಟ್ಟೆಯುಬ್ಬರ ಸಮಸ್ಯೆ :
ಆ್ಯಸಿಡಿಟಿ ಅಥವಾ ಹೊಟ್ಟೆಯುಬ್ಬರ ಸಮಸ್ಯೆ ಹೊಂದಿರುವ ವ್ಯಕ್ತಿಗಳು ರಾತ್ರಿ ಮಲಗುವ ಸಂದರ್ಭದಲ್ಲಿ ಚಾಕಲೇಟ್ ತಿಂದರೆ ಇನ್ನಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಥಿಯೋಬ್ರೋಮಿನ್ ಅನ್ನನಾಳದ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ, ಇದು ಆ್ಯಸಿಡಿಟೊ ಲಕ್ಷಣಗಳನ್ನು ಇನ್ನಷ್ಟು ಹದಗೆಡಿಸಬಹುದು. ಹೀಗಾಗಿ ಈ ರೀತಿ ಸಮಸ್ಯೆ ಹೊಂದಿರುವವರು ಸಂಜೆಯ ಒಳಗಾಗಿ ಡಾರ್ಕ್ ಚಾಕಲೇಟ್ ತಿನ್ನುವುದು ಉತ್ತಮ.
Also Read: ನಿಮ್ಮ ಈ ಅಭ್ಯಾಸಗಳು ಕಿಡ್ನಿ ಆರೋಗ್ಯವನ್ನು ಹಾಳುಗೆಡಬಹುದು : ಈಗಲೇ ಎಚ್ಚೆತ್ತುಕೊಳ್ಳಿ



