ನಿಮ್ಮ ಈ ಅಭ್ಯಾಸಗಳು ಕಿಡ್ನಿ ಆರೋಗ್ಯವನ್ನು ಹಾಳುಗೆಡಬಹುದು : ಈಗಲೇ ಎಚ್ಚೆತ್ತುಕೊಳ್ಳಿ

Kidney Health: ಕಿಡ್ನಿ ಸಮಸ್ಯೆಗಳು ಮನುಷ್ಯನ ಜೀವಕ್ಕೇ ಮಾರಕವಾಗಬಹುದು. ಕಿಡ್ನಿ ಫೇಲ್ಯೂರ್ನಿಂದ ಮೃತಪಟ್ಟವರು ಅನೇಕರಿದ್ದಾರೆ. ಕಿಡ್ನಿಯಲ್ಲಿ ಕಲ್ಲಾಗಾದಾಗ ಉಂಟಾಗುವ ನೋವು ಯಾವ ನರಕಯಾತನೆಗೂ ಕಡಿಮೆಯಿಲ್ಲ. ಹೀಗಾಗಿ ಕಿಡ್ನಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ನೀವು ಮಾಡುತ್ತಿರುವ ಈ ತಪ್ಪುಗಳನ್ನು ನಿಮಗೆ ಅರಿವಿಲ್ಲದಂತೆ ನಿಮ್ಮ ಕಿಡ್ನಿಯ ಆರೋಗ್ಯವನ್ನು ಹಾಳುಮಾಡಬಹುದು.

ಸರಿಯಾಗಿ ನೀರು ಕುಡಿಯದೇ ಇರುವುದು : ರಕ್ತ ಶುದ್ಧೀಕರಣ ಕಾರ್ಯ ನಡೆಸುವ ಕಿಡ್ನಿಗಳಿಗೆ ನೀರು ಬೇಕು. ಹೀಗಾಗಿ ನಾವು ನಿತ್ಯ ಸರಿಯಾದ ಪ್ರಮಾಣದಲ್ಲಿ ನೀರು ಸೇವನೆ ಮಾಡಬೇಕು. ಆದರೆ ಸರಿಯಾಗಿ ನೀರು ಕುಡಿಯದೇ ಇರುವುದರಿಂದ ಮೂತ್ರಕೋಶದಲ್ಲಿ ಕಲ್ಲು ಹಾಗೂ ಸೋಂಕು ಸಂಭವಿಸುವಂತೆ ಮಾಡುತ್ತದೆ.

ನೋವು ನಿವಾರಕ ಮಾತ್ರೆಗಳ ಸೇವನೆ : ಕೆಲವರಿಗೆ ಪದೇ ಪದೇ ನೋವು ನಿವಾರಕ ಮಾತ್ರ ಸೇವಿಸುವ ಅಭ್ಯಾಸ ಇರುತ್ತದೆ. ಆದರೆ ನೋವು ನಿವಾರಕ ಮಾತ್ರೆಗಳು ಕಿಡ್ನಿಯಲ್ಲಿ ರಕ್ತದ ಚಲನೆಯನ್ನು ಕಡಿಮೆ ಮಾಡಿ ಟಿಶ್ಯೂಗಳಿಗೆ ಹಾನಿಯುಂಟು ಮಾಡುವ ಸಾಧ್ಯತೆ ಇರುತ್ತದೆ. ಇದರಿಂದ ಶಾಶ್ವತ ಕಿಡ್ನಿ ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು.

Also Read: Covid 19: ಕೊರೊನಾ ಲಸಿಕೆ ಹಾಕಿಸಿದವರಿಗೆ ಕ್ಯಾನ್ಸರ್​ನಿಂದ ಅಪಾಯ ಕಡಿಮೆ : ಅಧ್ಯಯನದಲ್ಲಿ ಹೊರಬಿತ್ತು ಮಹತ್ವದ ಮಾಹಿತಿ

ಅತಿಯಾದ ಉಪ್ಪು ಸೇವನೆ : ದೇಹದಲ್ಲಿ ಅತಿಯಾದ ಸೋಡಿಯಂ ಸೇವನೆಯಿಂದ ಅಧಿಕ ರಕ್ತದೊತ್ತಡ ಉಂಟಾಗುತ್ತದೆ. ಇದರಿಂದ ಕಿಡ್ನಿಗಳ ಮೇಲೆ ಒತ್ತಡ ಹೆಚ್ಚುತ್ತದೆ.ಇದರಿಂದ ರಕ್ತ ಶುದ್ಧೀಕರಣ ಪ್ರಕ್ರಿಯೆ ಸರಿಯಾಗಿ ಆಗುವುದಿಲ್ಲ.

ಅತಿಯಾದ ಸಕ್ಕರೆ ಸೇವನೆ : ಅತಿಯಾದ ಸಕ್ಕರೆ ಸೇವನೆಯಿಂದ ಮಧುಮೇಹ ಹಾಗೂ ಸ್ಥೂಲಕಾಯದ ಸಮಸ್ಯೆ ಉಂಟಾಗುತ್ತದೆ. ಈ ಎರಡೂ ಸಮಸ್ಯೆಗಳು ಮೂತ್ರಕೋಶದ ಮೇಲೆ ನೇರ ಪರಿಣಾಮ ಬೀರುವುದುರಿಂದ ಕಿಡ್ನಿಯ ಕಾರ್ಯವೈಖರಿಯಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ.

ಮೂತ್ರ ವಿಸರ್ಜನೆಯಲ್ಲಿ ವಿಳಂಬ : ಮೂತ್ರ ವಿಸರ್ಜನೆ ಮಾಡದೇ ಮೂತ್ರ ಹಿಡಿದಿಟ್ಟುಕೊಳ್ಳುವುದರಿಂದ ಮೂತ್ರಪಿಂಡದ ಮೇಲೆ ಒತ್ತಡ ಉಂಟು ಮಾಡುತ್ತದೆ .ಇದರಿಂದ ಸೋಂಕು ಉಂಟಾಗುತ್ತದೆ.

ಮದ್ಯಪಾನ ಸೇವನೆ : ಮದ್ಯಪಾನ ಸೇವನೆ ಯಾವುದೆ ಕಾರಣಕ್ಕೂ ಒಳ್ಳೆಯದಲ್ಲ. ಮೂತ್ರಕೋಶದ ಆರೋಗ್ಯದ ದೃಷ್ಟಿಯಿಂದಂತೂ ಸ್ವಲ್ಪ ಕೂಡ ಒಳ್ಳೆಯದಲ್ಲ. ಅತಿಯಾದ ಮದ್ಯಪಾನ ಸೇವನೆಯಿಂದ ರಕ್ತದೊತ್ತಡ ಉಂಟಾಗುತ್ತದೆ. ಹಾಗೂ ರಕ್ತಕ್ಕೆ ವಿಷಕಾರಿ ಅಂಶಗಳು ಸೇರಿಕೊಳ್ಳುತ್ತದೆ. ಇವುಗಳನ್ನು ಶುದ್ಧೀಕರಿಸಲು ಮೂತ್ರಪಿಂಡ ಹೆಚ್ಚು ಕಾರ್ಯನಿರ್ವಹಿಸಬೇಕಾಗಿ ಬರುತ್ತದೆ.

Also Read: ಕೆಮ್ಮು ಸಿರಪ್‌ 2 ವರ್ಷದೊಳಗಿನ ಮಕ್ಕಳಿಗೆ ಬೇಡ : ಕೇಂದ್ರ ಸರಕಾರದ ಎಚ್ಚರಿಕೆ

ನಿದ್ರಾಹೀನತೆ : ಕಡಿಮೆ ನಿದ್ರೆ ಅಥವಾ ಕಳೆ ನಿದ್ರೆಯು ಕಿಡ್ನಿಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಲೂ ರಕ್ತದೊತ್ತಡ ಹೆಚ್ಚುವುದರಿಂದ ಕಿಡ್ನಿಯ ಮೇಲೆ ಒತ್ತಡ ಉಂಟಾಗುತ್ತದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories