Health Tips: ದಿನಕ್ಕೆ ಎಷ್ಟು ಮೊಟ್ಟೆಗಳನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ? ಆಹಾರ ತಜ್ಞರು ನೀಡಿದ್ದಾರೆ ಮಾಹಿತಿ
Health Tips: ಕೋಳಿ ಮೊಟ್ಟೆಗಳಲ್ಲಿ ಆರೋಗ್ಯಕರ ಲಾಭ ಎಷ್ಟಿದೆ ಎಂದರೆ ಇದನ್ನು ಸೂಪರ್ ಫುಡ್ ಎಂದೇ ಕರೆಯಲಾಗುತ್ತದೆ. ಇದರಲ್ಲಿರುವ ಗುಣಮಟ್ಟದ ಪ್ರೋಟಿನ್, ಆರೋಗ್ಯಕರ ಕೊಬ್ಬುಗಳು, ಅಗತ್ಯ ಜೀವಸತ್ವಗಳು ಮನುಷ್ಯನ ದೇಹಕ್ಕೆ ಅಗಾಧ ಪ್ರಮಾಣ ಲಾಭವನ್ನು ನೀಡುತ್ತದೆ. ಪ್ರತಿಯೊಂದು ಮೊಟ್ಟೆಯಲ್ಲಿ ವಿಟಮಿನ್ ಬಿ 12, ಡಿ ಮತ್ತು ಎ ನಂತಹ ಪೋಷಕಾಂಶಗಳಿದ್ದು, ಕೋಲೀನ್ ಕೂಡ ಇದೆ, ಇದು ಮೆದುಳಿನ ಆರೋಗ್ಯ ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.
ಮೊಟ್ಟೆ ಸೇವನೆ ಹಿಂದಿರುವ ಆರೋಗ್ಯ ಪ್ರಯೋಜನಗಳು :
ಮೊಟ್ಟೆಯಲ್ಲಿ ಅಡಕವಾಗಿರುವ ಪ್ರೋಟಿನ್ಗಳು ನಮ್ಮ ಸ್ನಾಯುಗಳ ಬಲವರ್ಧನೆಗೆ ಸಹಾಯಕಾರಿಯಾಗಿದೆ. ಮೊಟ್ಟೆಯನ್ನು ಸೇವಿಸುವುದರಿಂದ ಹೆಚ್ಚು ಕಾಲ ಹೊಟ್ಟೆ ತುಂಬಿದ ಅನುಭವವವಾಗಲಿದೆ. ಅಲ್ಲದೇ ತೂಕವನ್ನು ನಿಯಂತ್ರಿಸಲು ಮೊಟ್ಟೆ ಸೇವನೆ ಅತ್ಯಂತ ಒಳ್ಳೆಯದು ಎನ್ನಲಾಗಿದೆ.
ಮೊಟ್ಟೆ ಸೇವನೆಯಿಂದ ಹೊಟ್ಟೆ ತುಂಬಿದ ಅನುಭವವಾಗುವುದರಿಂದ ಅನಗತ್ಯ ತಿಂಡಿ ಸೇವನೆಗೆ ದಾರಿ ಮಾಡಿಕೊಡುವುದಿಲ್ಲ. ದೃಷ್ಟಿ ಸಮಸ್ಯೆಗಳಿಂದ ರಕ್ಷಿಸುವ ಲುಟೀನ್ ಮತ್ತು ಜಿಯಾಕ್ಸಾಂಥಿನ್ ನಂತಹ ಉತ್ಕರ್ಷಣ ನಿರೋಧಕಗಳು ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಮೊಟ್ಟೆಗಳಿಂದ ಮಾಡುವ ಎಲ್ಲಾ ಖಾದ್ಯಗಳು ರುಚಿಕರವಾಗಿರುತ್ತದೆ. ಅವುಗಳನ್ನು ಬೇಯಿಸಿ ತಯಾರಿಸುವ ಎಲ್ಲಾ ಖಾದ್ಯಗಳು ಬಾಯಿಯಲ್ಲಿ ನೀರೂರಿಸುವಂತದ್ದು. ಮೊಟ್ಟೆಗಳನ್ನು ಸೇವಿಸುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚುವುದಿಲ್ಲ. ಬದಲಿಗೆ ಇದರಲ್ಲಿರುವ ಒಳ್ಳೆಯ ಕೊಬ್ಬು ದೇಹದಲ್ಲಿ HDL ಪ್ರಮಾಣ ಹೆಚ್ಚಿಸುತ್ತದೆ.
Also Read: ನಿಮ್ಮ ಈ ಅಭ್ಯಾಸಗಳು ಕಿಡ್ನಿ ಆರೋಗ್ಯವನ್ನು ಹಾಳುಗೆಡಬಹುದು : ಈಗಲೇ ಎಚ್ಚೆತ್ತುಕೊಳ್ಳಿ
ದಿನಕ್ಕೆ ನೀವು ಎಷ್ಟು ಮೊಟ್ಟೆಗಳನ್ನು ಸೇವನೆ ಮಾಡಬಹುದು ?
ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಪೌಷ್ಟಿಕ-ದಟ್ಟವಾದ ಆಹಾರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ ಏಕೆಂದರೆ ಅವು ಉತ್ತಮ ಗುಣಮಟ್ಟದ ಪ್ರೋಟೀನ್, ವಿಟಮಿನ್ ಡಿ, ಬಿ 12 ಮತ್ತು ಕೋಲೀನ್ನಲ್ಲಿ ಸಮೃದ್ಧವಾಗಿವೆ. ಆರೋಗ್ಯವಂತ ಮನುಷ್ಯನಿಗೆ ಮೊಟ್ಟೆ ಸೇವನೆಯಿಂದ ಅನೇಕ ಲಾಭವಿದೆ. ಕೆಲ ಅನಾರೋಗ್ಯ ಪೀಡಿತರಿಗೆ ಮೊಟ್ಟೆ ಸೇವನೆಯನ್ನು ಶಿಫಾರಸು ಮಾಡಲಾಗುವುದಿಲ್ಲ.
ಸಾಮಾನ್ಯ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದಿರುವ ಆರೋಗ್ಯವಂತ ವ್ಯಕ್ತಿಗೆ, ದಿನಕ್ಕೆ ಒಂದು ಅಥವಾ ಎರಡು ಮೊಟ್ಟೆಗಳನ್ನು ಸೇವಿಸುವುದು ಸಂಪೂರ್ಣವಾಗಿ ಸುರಕ್ಷಿತ ಮತ್ತು ಪ್ರಯೋಜನಕಾರಿಯಾಗಿದೆ. ಅವು ಸ್ನಾಯುಗಳ ದುರಸ್ತಿ, ಮೆದುಳಿನ ಕಾರ್ಯನಿರ್ವಹಣೆ ಮತ್ತು ಹೊಟ್ಟೆ ತುಂಬುವಿಕೆಗೆ ಸಹಾಯ ಮಾಡುತ್ತದೆ.
ಆದರೆ ಮಧುಮೇಹ, ಹೃದ್ರೋಗ ಅಥವಾ ಹೆಚ್ಚಿನ ಎಲ್ಡಿಎಲ್ ಹೊಂದಿದ್ದರೆ ವಾರಕ್ಕೆ ನಾಲ್ಕು ಅಥವಾ ಐದು ಮೊಟ್ಟೆಗಳಿಗೆ ಸಂಪೂರ್ಣ ಮೊಟ್ಟೆಗಳನ್ನು ಸೀಮಿತಗೊಳಿಸುವುದು ಮತ್ತು ಕೇವಲ ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ಸೇವಿಸುವುದು ಉತ್ತಮ.
Also Read: Covid 19: ಕೊರೊನಾ ಲಸಿಕೆ ಹಾಕಿಸಿದವರಿಗೆ ಕ್ಯಾನ್ಸರ್ನಿಂದ ಅಪಾಯ ಕಡಿಮೆ : ಅಧ್ಯಯನದಲ್ಲಿ ಹೊರಬಿತ್ತು ಮಹತ್ವದ ಮಾಹಿತಿ
ಕೇವಲ ಮೊಟ್ಟೆ ಸೇವಿಸಿದ ಮಾತ್ರಕ್ಕೆ ಆರೋಗ್ಯ ವೃದ್ಧಿಸುವುದಿಲ್ಲ. ಇದರ ಜೊತೆಯಲ್ಲಿ ಸಾಕಷ್ಟು ಹಣ್ಣು, ತರಕಾರಿಗಳ ಸೇವನೆ ಕೂಡ ಮುಖ್ಯ. ಮೊಟ್ಟೆಯಿಂದ ಕೊಲೆಸ್ಟ್ರಾಲ್ ಹೆಚ್ಚುತ್ತದೆ ಎಂಬ ಭಯ ಬೇಡ. ಆದರೆ ನೀವು ಮೊಟ್ಟೆಯನ್ನು ಯಾವ ರೀತಿಯ ಖಾದ್ಯದೊಂದಿಗೆ ಸೇವಿಸುತ್ತೀರಿ ಎಂಬುದು ಮುಖ್ಯ. ಮೊಟ್ಟೆ ಒಳ್ಳೆಯದು ಎಂದ ಮಾತ್ರಕ್ಕೆ ಎಣ್ಣೆಯಲ್ಲಿ ಕರಿದ ಮೊಟ್ಟೆ ಬೊಂಡಾ ಕೂಡ ಒಳ್ಳೆಯದು ಎಂದು ಹೇಳಲು ಸಾಧ್ಯವಿಲ್ಲ.
ಮೊಟ್ಟೆ(Egg) ನೈಸರ್ಗಿಕವಾಗಿ ದೊರಕುವಂತಹ ಶಕ್ತಿ ಕೇಂದ್ರವಾಗಿದ್ದು ನೀರಿನಲ್ಲಿ ಬೇಯಿಸಿ ನಿಯಮಿತವಾಗಿ ತಿನ್ನುವುದರಿಂದ ಹೆಚ್ಚಿನ ಆರೋಗ್ಯ ಲಾಭ ಪಡೆಯಲು ಸಾಧ್ಯವಿದೆ.



