ಉಡುಪಿ : ಕಳುವಾಗಿದ್ದ ಬರೋಬ್ಬರಿ 60 ಮೊಬೈಲ್​ ಪತ್ತೆ ಮಾಡುವಲ್ಲಿ ಖಾಕಿ ಯಶಸ್ವಿ : ಮೊಬೈಲ್​ ಮಾಲೀಕರ ಮೊಗದಲ್ಲಿ ಮಂದಹಾಸ

ಈಗಿನ ಜಮಾನದಲ್ಲಿ ಚಿನ್ನ – ಬೆಳ್ಳಿಗೆ ಮಾತ್ರವಲ್ಲದೇ, ಮೊಬೈಲ್​ಗಾಗಿಯೂ ಲಕ್ಷಾಂತರ ರೂಪಾಯಿ ಖಾಲಿ ಮಾಡುವುದು ಟ್ರೆಂಡ್​ ಆಗಿದೆ. ಇಎಂಐ ಸೌಲಭ್ಯ ಲಭ್ಯವಿರೋದ್ರಿಂದ ಅಂದುಕೊಂಡ ಮೊಬೈಲ್​ ಖರೀದಿ ಮಾಡುವುದು ಈಗ ಸುಲಭ..! ಆದರೆ ನಾವು ಇಷ್ಟ ಪಟ್ಟು ಕಷ್ಟ ಪಟ್ಟು ಖರೀದಿ ಮಾಡಿದ ಮೊಬೈಲ್​ ಕಳುವಾದರೆ ? ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತೆ ಆಗಬಹುದು ಅಲ್ಲವೇ ? ಇದೇ ರೀತಿ ಉಡುಪಿ ಠಾಣೆಯಾದ್ಯಂತ ಮೊಬೈಲ್​ ಕಳೆದುಕೊಂಡಿದ್ದ ಅನೇಕರ ಮೊಗದಲ್ಲಿ ಇದೀಗ ಮಂದಹಾಸ ಮೂಡಿದೆ.

ಉಡುಪಿ ನಗರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಮೊಬೈಲ್​ ಕಳೆದುಕೊಂಡಿದ್ದ 60 ಮಂದಿಯ ಮೊಬೈಲ್ ವಾಪಸ್​ ನೀಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಒಟ್ಟೂ 6 ಲಕ್ಷದ 83 ಸಾವಿರದ 400 ರೂಪಾಯಿ ಮೌಲ್ಯದ ಮೊಬೈಲ್​ಗಳನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದುಕೊಂಡ ಮೊಬೈಲ್​ಗಳನ್ನು ವಾಪಾಸ್​ ಪಡೆದುಕೊಂಡವರ ಖುಷಿ ಮುಗಿಲು ಮುಟ್ಟಿತ್ತು.
ಮೊಬೈಲ್​ ಕಳೆದುಕೊಂಡ ಬಳಿಕ ಸಿಐಆರ್​ ಪೋರ್ಟಲ್​ನಲ್ಲಿ ದೂರು ದಾಖಲಿಸಿದ್ದ 60 ಮಂದಿಯ ಮೊಬೈಲ್​​ಗಳನ್ನು 3 ತಿಂಗಳ ಅಂತರದಲ್ಲಿ ಪೊಲೀಸರು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ನಲ್ಲೂರು ಅಕ್ರಮ ಕಸಾಯಿಖಾನೆ ಪ್ರಕರಣಕ್ಕೆ ಹೊಸ ಟ್ವಿಸ್ಟ್: ದನ-ಕರು ಮಾರಾಟ ಮಾಡಿದ್ದ ಸಂಘ ಪರಿವಾರದ ಕಾರ್ಯಕರ್ತ ಬಂಧನ

ಕಷ್ಟಪಟ್ಟು ಸಾಲ ಮಾಡಿ ಮೊಬೈಲ್​ ತೆಗೆದುಕೊಂಡು ಕಳೆದುಹೋದ ಬಳಿಕ ನಿರಾಶೆಯಲ್ಲಿಯೇ ಇಎಂಐ ಕಟ್ಟುತ್ತಿದ್ದ ಅನೇಕರು ಇಂದು ಸಖತ್​ ಖುಷಿ ಆಗಿದ್ದರು. ಉಡುಪಿ ನಗರ ಠಾಣಾ ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಈ ವಿಚಾರವಾಗಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಡಿವೈಎಸ್ಪಿ ಡಿ.ಟಿ ಪ್ರಭು, ಮೊಬೈಲ್​ ಕಳೆದುಕೊಂಡರೆ ಗಾಬರಿಯಾಗದೇ ಸಿಐಆರ್​ ಪೋರ್ಟಲ್​ನಲ್ಲಿ ದೂರು ದಾಖಲಿಸಿ. ಈ ವರ್ಷ ಸಿಐಆರ್​ ಪೋರ್ಟಲ್​ನಲ್ಲಿ ಮೊಬೈಲ್​ ಕಳುವು ಪ್ರಕರಣ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿತ್ತು. ಇದೀಗ ಅನೇಕರ ಮೊಬೈಲ್​ ವಾಪಸ್​ ದೊರಕಿಸಿಕೊಟ್ಟಿದ್ದೇವೆ. ಹೀಗಾಗಿ ನಿರ್ಲಕ್ಷ್ಯ ಬೇಡ ಹಾಗಂತ ಮೊಬೈಲ್​ ಕಳೆದು ಹೋದರೆ ತೀರಾ ಆತಂಕಕ್ಕೆ ಒಳಗಾಗುವ ಅಗತ್ಯವೂ ಇಲ್ಲ ಎಂದು ಸಲಹೆ ನೀಡಿದ್ದಾರೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories