ಕೇರಳ ಬಸ್​ ವಿಡಿಯೋ ಪ್ರಕರಣ : ಕೊನೆಗೂ ವೀವ್ಸ್​ಗಾಗಿ ಜೀವ ತೆಗೆದವಳ ಬಂಧನ

ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆ ಗಳಿಸಲು ವ್ಯಕ್ತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿ ಬಸ್​ನಲ್ಲಿ ವಿಡಿಯೋ ಮಾಡಿದ್ದ ಮಹಿಳೆ ಕೊನೆಗೂ ಕಂಬಿ ಹಿಂದೆ ಹೋಗುವಂತಾಗಿದೆ. ಕೇರಳದಲ್ಲಿ ಅಮಾಯಕನ ಜೀವ ಬಲಿ ಪಡೆದಿದ್ದ ಮಹಿಳೆ ಇದೀಗ ಪೊಲೀಸ್​ ಠಾಣೆ ಅತಿಥಿಯಾಗಿದ್ದಾಳೆ. ಕೇರಳ ಪೊಲೀಸರು ಆರೋಪಿ ಶಿಂಜಿತಾ ಮುಸ್ತಫಾಳನ್ನು ಬಂಧಿಸಿದ್ದಾರೆ .

ಆತ್ಮಹತ್ಯೆಗೆ ಪ್ರಚೋದನೆ ಆರೋಪದ ಅಡಿಯಲ್ಲಿ ಶಿಂಜಿತಾ ಮುಸ್ತಫಾಳನ್ನು ಪೊಲೀಸರು ಬಂಧಿಸಿದ್ದು ಸದ್ಯ 4 ದಿನಗಳ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಕೋಯಿಕ್ಕೋಡ್​ ಜಿಲ್ಲೆಯ ಬಡಗರದಲ್ಲಿದ್ದ ಸಂಬಂಧಿಕರ ಮನೆಯಲ್ಲಿ ವಾಸವಿದ್ದ ಶಿಂಜಿತಾಳನ್ನು ಪೊಲೀಸರು ಬಂಧಿಸಿದ್ದರು.

ಖಾಸಗಿ ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಶಿಂಜಿತಾ ಅದೇ ಬಸ್​ನಲ್ಲಿದ್ದ ದೀಪಕ್​ ಎಂಬವರಿಂದ ತನಗೆ ಲೈಂಗಿಕ ಕಿರುಕುಳವಾಗ್ತಿದೆ ಎಂದು ಆರೋಪಿಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಳು. ಈ ವಿಡಿಯೋ ವ್ಯಾಪಕವಾಗಿ ವೈರಲ್​ ಆದ ಬಳಿಕ ದೀಪಕ್​ ತೀವ್ರ ಟ್ರೋಲ್​ಗೆ ಒಳಗಾಗಿದ್ದರು. ಇದರಿಂದ ಮನನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ಈ ಪ್ರಕರಣ ತಿರುವು ಪಡೆದುಕೊಂಡಿದ್ದು ಕೇರಳ ಮಾತ್ರವಲ್ಲದೇ ಸಂಪೂರ್ಣ ದೇಶಾದ್ಯಂತ ಮಹಿಳೆ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ವ್ಯೂವ್ಸ್​ಗಾಗಿ ಅಮಾಯಕನ ಜೀವವನ್ನೇ ಬಲಿ ಪಡೆದಳು ಎಂದು ಅನೇಕರು ಕಿಡಿಕಾರಿದ್ದರು.

ಇದನ್ನೂ ಓದಿ: ಕಾರ್ಕಳ : ಕೋಳಿ ಅಂಕದ ಮೇಲೆ ದಾಳಿ, ಲಕ್ಷಾಂತರ ಮೌಲ್ಯದ ಸ್ವತ್ತು ವಶಕ್ಕೆ

ವಿಡಿಯೋದಲ್ಲಿ ಯಾವುದೇ ರೀತಿಯ ಲೈಂಗಿಕ ದೌರ್ಜನ್ಯದ ಅಂಶಗಳು ಇರಲಿಲ್ಲ. ಈ ಹಿನ್ನೆಲೆಯಲ್ಲಿ ದೀಪಕ್ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಅಡಿಯಲ್ಲಿ ಜಾಮೀನು ರಹಿತ ಸೆಕ್ಷನ್​ಗಳ ಅಡಿಯಲ್ಲಿ ಕೇಸು ದಾಖಲಿಸಲಾಗಿತ್ತು. ಆದರೆ ಫೋನ್​ ಸ್ವಿಚ್​ ಆಫ್​ ಮಾಡಿಕೊಂಡು ಶಿಂಜಿತಾ ತಲೆಮರೆಸಿಕೊಂಡಿದ್ದಳು. ಹಲವು ದಿನಗಳ ಹುಡುಕಾಟದ ಬಳಿಕ ಕೊನೆಗೂ ಶಿಂಜಿತಾ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories