ಕುಡಿದ ಮತ್ತಿನಲ್ಲಿ ಅವಾಂತರ : ನಟ ಮಯೂರ್ ಪಟೇಲ್ರಿಂದ ಸರಣಿ ಅಪಘಾತ
Sandalwood Actor Mayur Patel : ಕನ್ನಡ ಚಿತ್ರರಂಗದ ನಟ ಮಯೂರ್ ಪಟೇಲ್ ಕುಡಿದ ಮತ್ತಿನಲ್ಲಿ ಬಹುದೊಡ್ಡ ಅವಾಂತರವನ್ನೇ ಮಾಡಿದ್ದಾರೆ. ತಡರಾತ್ರಿ ಬೆಂಗಳೂರಿನಲ್ಲಿ ಮದ್ಯದ ಅಮಲಿನಲ್ಲಿ ಫಾರ್ಚೂನರ್ ಕಾರನ್ನು ಬೇಕಾಬಿಟ್ಟಿ ಚಲಾಯಿಸಿ ಸರಣ ಅಪಘಾತಕ್ಕೆ ಕಾರಣರಾಗಿದ್ದಾರೆ. ಮಯೂರ್ ಪಟೇಲ್ ಅವರ ಕಾರು ನಿಂತಿದ್ದ ಕಾರುಗಳು ಹಾಗೂ ಸರ್ಕಾರಿ ವಾಹನಗಳಿಗೆ ಡಿಕ್ಕಿ ಹೊಡೆದಿದೆ.
ಬೆಂಗಳೂರಿನ ದೊಮ್ಮಲೂರು ಬಳಿಯ ಕಮಾಂಡೋ ಆಸ್ಪತ್ರೆ ಸಮೀಪ ಈ ಸರಣಿ ಅಪಘಾತ ಸಂಭವಿಸಿದೆ. ಕುಡಿದು ಕಾರು ಓಡಿಸುತ್ತಿದ್ದ ಮಯೂರ್ ಪಟೇಲ್ ಶ್ರೀನಿವಾಸ್ (Sandalwood Actor Mayur Patel) ಹಾಗೂ ಅಭಿಷೇಕ್ ಎಂಬವರ ಕಾರುಗಳಿಗೆ ಗುದ್ದಿದ್ದಾರೆ. ಬಳಿಕ ಸರ್ಕಾರಿ ವಾಹನವನ್ನೂ ಜಖಂಗೊಳಿಸಿದ್ದಾರೆ. ಕೂಡಲೇ ಪ್ರತ್ಯಕ್ಷದರ್ಶಿಗಳು ಕಂಟ್ರೋಲ್ರೂಮಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಹೊಯ್ಸಳ ಪೊಲೀಸರು ಮಯೂರ್ ಪಟೇಲ್ರನ್ನು ಠಾಣೆಗೆ ಕರೆದೊಯ್ದು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಕುಡಿದು ವಾಹನ ಚಲಾಯಿಸುರುವುದು ಗಮನಕ್ಕೆ ಬಂದಿದೆ.
ಇದನ್ನೂ ಓದಿ: ಮನೆಗೆಲಸದ ಸೋಗಿನಲ್ಲಿ ಬಂದು 18 ಕೋಟಿ ರೂಪಾಯಿ ಮೌಲ್ಯದ ಸ್ವತ್ತು ಎಗರಿಸಿದ ಖದೀಮ ದಂಪತಿ
ಶ್ರೀನಿವಾಸ್ ಎಂಬವರು ನೀಡಿದ ದೂರು ಆಧರಿಸಿ ಹಲಸೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪೊಲೀಸರು ಮಯೂರ್ ಪಟೇಲ್ ಕಾರನ್ನು ಜಪ್ತಿ ಮಾಡಿದ್ದಾರೆ.. ಅಲ್ಲದೇ ಈ ಕಾರಿಗೆ ಇನ್ಸೂರೆನ್ಸ್ ಕೂಡ ಇಲ್ಲವೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. .



