Marigold Vastu Tips: ಮನೆಯ ಈ ದಿಕ್ಕಿಗೆ ಚೆಂಡು ಹೂವಿನ ಗಿಡ ಬೆಳೆಸಿ; ಸಂಪತ್ತು ವೃದ್ಧಿಸಿ

ಹೂವುಗಳು ಈ ಪ್ರಕೃತಿಯ ಅದ್ಭುತ ಕೊಡುಗೆ. ಮೊಗ್ಗು ಹೂವಾಗಿ ಅರಳಿ ನಿಂತಾಗ ಅದು ಎಲ್ಲರನ್ನು ತನ್ನತ್ತ ಆಕರ್ಷಿಸುತ್ತದೆ. ಅಂತಹ ಸುಂದರ ಸುವಾಸನೆ ಬೀರುವ ಹೂವುಗಳಲ್ಲಿ ಬಗೆ ಬಗೆಯ ಪ್ರಕಾರಗಳಿವೆ.

ಮುಂಜಾನೆಯಲ್ಲಿ ಅರಳುವ ಹೂವುಗಳು, ಮುಸ್ಸಂಜೆಯ ವೇಳೆಯಲ್ಲಿ ಅರಳುವ ಹೂವುಗಳು, ರಾತ್ರಿಯ ವೇಳೆ ಅರಳುವ ಹೂವುಗಳಿವೆ. ಅವೆಲ್ಲವೂ ಒಂದಕ್ಕಿಂತ ಒಂದು ಚೆಂದ.

ದೇವರ ಮುಡಿಗೇರುವ ಈ ಹೂವುಗಳಿಗೆ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನವಿದೆ. ದೇವರ ಪೂಜೆ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಹೂವುಗಳನ್ನು ಬಳಸಲಾಗುತ್ತದೆ.

ವಾಸ್ತು ಶಾಸ್ತ್ರದಲ್ಲಿಯೂ ಕೂಡಾ ಗಿಡ, ಮರ ಮತ್ತು ಹೂವುಗಳಿಗೆ ಮಹತ್ವ ನೀಡಲಾಗಿದೆ. ವಾಸ್ತುವಿನಲ್ಲಿ ಕೆಲವು ಹೂವಿನ ಗಿಡಗಳನ್ನು ಮನೆಯಲ್ಲಿ ಬೆಳೆಸುವುದರಿಂದ ಗೃಹದೋಷ, ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಎಂದು ಹೇಳಲಾಗಿದೆ.

ಆದರೆ ಅವುಗಳನ್ನು ಸರಿಯಾದ ದಿಕ್ಕಿನಲ್ಲಿ ನೆಡಬೇಕು ಎಂಬುದನ್ನೂ ಸ್ಪಷ್ಟವಾಗಿ ಹೇಳಿದೆ. ಧಾರ್ಮಿಕ ಕಾರ್ಯಗಳಲ್ಲಿ ಬಳಸುವ ಚೆಂಡು ಹೂವಿಗೆ ವಾಸ್ತು ಶಾಸ್ತ್ರದಲ್ಲಿ ವಿಶೇಷ ಮಹತ್ವವನ್ನು ನೀಡಲಾಗಿದೆ‌.

ಈ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಧನಾತ್ಮಕ ಶಕ್ತಿಯ ಹರಡುತ್ತದೆ ಹಾಗೂ ಧನ–ಧಾನ್ಯಗಳು ತುಂಬಿರುತ್ತವೆ.

ಆದ್ದರಿಂದ ಚೆಂಡು ಹೂವು ಗಿಡವನ್ನು ವಾಸ್ತು ಪ್ರಕಾರ ಯಾವ ದಿಕ್ಕಿನಲ್ಲಿ ನೆಡಬೇಕು ಮತ್ತು ಅದರಿಂದ ಸಿಗುವ ಪ್ರಯೋಜನಗಳೇನು ಎಂದು ತಿಳಿಯೋಣ.

Marigold Plant Vastu Tips: ಚೆಂಡು ಹೂವು ಗಿಡವನ್ನು ಯಾವ ದಿಕ್ಕಿಗೆ ನೆಡಬೇಕು?

ಚೆಂಡು ಹೂವು ಗಿಡವನ್ನು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ನೆಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. ಅಲ್ಲದೇ ಇದು ಸುತ್ತಲಿನ ಪರಿಸರವನ್ನು ಸಕಾರಾತ್ಮಕ ಗೊಳಿಸುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ಚೆಂಡು ಹೂವಿನ ಗಿಡವನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ನೆಡಬೇಕು. ಇದರ ಹೊರತಾಗಿ ಈ ಗಿಡವನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿಯೂ ನೆಡಬಹುದು.

ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಲು ಸುಲಭವಾಗುತ್ತದೆ. ಲಕ್ಷ್ಮಿ ದೇವಿ ಮತ್ತು ವಿಷ್ಣುವಿಗೆ ಪ್ರಿಯವಾದ ಈ ಹೂವನ್ನು ಮನೆಯಲ್ಲಿ ಬೆಳೆಸುವುದರಿಂದ ಮನೆಯ ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆ.

ಸಂಪತ್ತು ಗಳಿಸುವ ಮಾರ್ಗಗಳು ಸಿಗುತ್ತವೆ. ಜೀವನದಲ್ಲಿ ಪ್ರಗತಿಯ ಹೊಸ ಹಾದಿಗಳು ತೆರೆದುಕೊಳ್ಳುತ್ತವೆ.

ಇದನ್ನೂ ಓದಿ: Aquarium Vastu Tips: ಅದೃಷ್ಟವನ್ನು ತರುವ ಅಕ್ವೇರಿಯಂನ ಅಂದದ ಮೀನುಗಳು

ಚೆಂಡು ಹೂವು ಗಿಡದಿಂದ ಸಿಗುವ ವಾಸ್ತು ಲಾಭಗಳು

ಈ ಶುಭ ಸಸ್ಯವನ್ನು ಮನೆಯ ಮುಖ್ಯ ದ್ವಾರದ ಬಳಿ ನೆಡುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ.

ವಾಸ್ತು ಪ್ರಕಾರ ಈ ಗಿಡವನ್ನು ಮನೆಯ ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಎಂದಿಗೂ ನೆಡಬೇಡಿ.

ಈ ಗಿಡವನ್ನು ತಪ್ಪಾಗಿಯೂ ಸ್ನಾನಗೃಹ, ಶೌಚಾಲಯ ಅಥವಾ ಕೊಳಕು ಜಾಗದಲ್ಲಿ ನೆಡಬೇಡಿ. ಇದು ಮನೆಗೆ ಅಶುಭವನ್ನುಂಟು ಮಾಡುತ್ತದೆ.

ಹಳದಿ ಚೆಂಡು ಹೂವುಗಳು ಲಕ್ಷ್ಮಿ ದೇವಿ ಮತ್ತು ವಿಷ್ಣುವಿಗೆ ಬಹಳ ಪ್ರಿಯವಾಗಿದೆ. ಆ ಹೂವುಗಳನ್ನು ಅರ್ಪಿಸುವುದರಿಂದ ಲಕ್ಷ್ಮಿ ದೇವಿಯ ಕೃಪೆ ನಿಮಗೆ ಸಿಗಲಿದೆ. ಇದರಿಂದ ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ.

ಚೆಂಡು ಹೂವಿನ ಹಾರ ಮಾಡಿ ದೇವರಿಗೆ ಅರ್ಪಿಸುವುದರಿಂದ ದೇವರ ಆಶೀರ್ವಾದ ಪಡೆಯಬಹುದು.

ಇದನ್ನೂ ಓದಿ: Vastu Tipe : ಕನಸಿನ ಮನೆ ಕಟ್ಟಿಸೋಕೆ ಜಾಗ ಪರಿಶೀಲಿಸುತ್ತಿದ್ದೀರಾ ? ಒಂದು ನಿಮಿಷ ತಾಳಿ, ವಾಸ್ತುಶಾಸ್ತ್ರ ಏನು ಹೇಳುತ್ತೆ ?

Vastu Tips plant the marigold plant in home according to vastu rule to get prosperity in kannada

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.

Related Stories