Horoscope : ದಿನಭವಿಷ್ಯ: ಹೂಡಿಕೆಗೆ ಮೊದಲು ಪರಿಣಿತರ ಸಲಹೆ ಪಡೆಯಿರಿ

ಮೇಷರಾಶಿ
ದುಶ್ಚಟಗಳಿಂದ ದೂರವಿರಿ, ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಿ, ವೈಯಕ್ತಿಕ ಜೀವನದ ಕಡೆಗೆ ಗಮನ ಹರಿಸಿ, ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಮುಂಗೋಪವನ್ನು ಕಡಿಮೆ ಮಾಡಿಕೊಳ್ಳಿ, ಕೈಗೊಂಡ ಪ್ರವಾಸವು ಫಲಪ್ರದವಾಗಲಿದೆ, ಬಾಲ್ಯದ ಸ್ನೇಹಿತರ ಭೇಟಿಯಿಂದ ಸಂತಸ, ಸಂಗಾತಿಯಿಂದ ಒತ್ತಡ ಕಡಿಮೆಯಾಗಲಿದೆ.

ವೃಷಭರಾಶಿ
ನಿಮ್ಮ ನಡವಳಿಕೆ ಇಂದು ಪ್ರಶಂಸೆಗೆ ಪಾತ್ರವಾಗಲಿದೆ, ಹಣವನ್ನು ಸಂಗ್ರಹಿಸುವ ಹಾಗೂ ಉಳಿಸುವ ಕೌಶಲ್ಯವನ್ನು ಕಲಿಯಲಿದ್ದೀರಿ, ಅನಿರೀಕ್ಷಿತ ಸುದ್ದಿ ಇಡೀಗ ಕುಟುಂಬಕ್ಕೆ ಸಂತೋಷವನ್ನು ತರಲಿದೆ, ವ್ಯವಹಾರದಲ್ಲಿ ವಂಚನೆಯಿಂದ ನಿಮ್ಮನ್ನು ತಪ್ಪಿಸಿಕೊಳ್ಳಿ, ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳಲ್ಲಿ ಗೆಲುವು.

ಮಿಥುನರಾಶಿ
ಪ್ರಭಾವಶಾಲಿ ಜನರ ಬೆಂಬಲ ದೊರೆಯಲಿದೆ, ಮನೆಯ ಸದಸ್ಯರು ಹಣಕಾಸಿನ ನೆರವು ಕೇಳಲಿದ್ದಾರೆ, ನಿಮ್ಮ ಅದೃಷ್ಟ ಇಂದು ಶುಭವನ್ನು ತರಲಿದೆ, ಬಿಡುವಿನ ಸಮಯವನ್ನು ಕುಟುಂಬಸ್ಥರಿಗಾಗಿ ವಿನಿಯೋಗಿಸಿ, ಸಂಭಾಷಣೆಯ ವೇಳೆಯಲ್ಲಿ ಹಿಡಿತವಿರಲಿ, ದಂಪತಿಗಳಿಗೆ ಹೊಂದಾಣಿಕೆ ಅಗತ್ಯ, ಮಕ್ಕಳ ವಿಚಾರದಲ್ಲಿ ಕಿರಿಕಿರಿ ಅನುಭವಿಸುವಿರಿ.

ಕರ್ಕಾಟಕರಾಶಿ
ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚಿನ ಹಣವನ್ನು ವ್ಯಯಿಸಬೇಕಾಗುತ್ತದೆ, ಕುಟುಂಬ ಜೀವನವು ಹೆಚ್ಚು ಅರ್ಥಪೂರ್ಣವಾಗಿರಲಿದೆ, ಪ್ರೇಮ ಸಂಬಂಧಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ, ಕೆಲಸದ ಸ್ಥಳದಲ್ಲಿ ದಕ್ಷತೆಯನ್ನು ಸುಧಾರಿಸಲು ಕೌಶಲ್ಯ ಮಟ್ಟವನ್ನು ಹೆಚ್ಚಿಸಿಕೊಳ್ಳಿ, ನೆರೆ ಹೊರೆಯವರಿಂದ ಟೀಕೆಗೆ ಗುರಿಯಾಗುವ ಸಾಧ್ಯತೆ.

ಸಿಂಹರಾಶಿ
ಕುಟುಂಬ ಸದಸ್ಯರು ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ, ಆದಾಯಕ್ಕಿಂತಲೂ ಅಧಿಕ ಖರ್ಚು, ಪ್ರೀತಿಯಲ್ಲಿ ನಿರಾಸೆ ಕಳೆದುಕೊಳ್ಳಬೇಡಿ, ಪಾಲುದಾರಿಕೆ ಮಾಡುವ ಮೊದಲು ಆಂತರಿಕ ಭಾವನೆಯನ್ನು ಅರಿತುಕೊಳ್ಳಿ, ಅಚ್ಚರಿಯ ಉಡುಗೊರೆಯಿಂದ ಸಂತಸ ಮೂಡಲಿದೆ, ವ್ಯವಹಾರ ಕ್ಷೇತ್ರದಲ್ಲಿ ಹೊಸ ಭರವಸೆ ದೊರೆಯಲಿದೆ.

ಇದನ್ನೂ ಓದಿ : ಇಲ್ಲಿಗೆ ಬಂದ್ರೆ ಸಂಕಷ್ಟಗಳು ದೂರ : ವರ್ಷಕ್ಕೊಮ್ಮೆ 36 ಗಂಟೆ ದರ್ಶನ ನೀಡುತ್ತಾಳೆ ಚೌಡೇಶ್ವರಿ

ಕನ್ಯಾರಾಶಿ
ಅನಾರೋಗ್ಯದ ಬಗ್ಗೆ ಅನಗತ್ಯ ಚಿಂತೆ ಬಿಡಿ, ಅತಿಯಾದ ಮಾತು ಅಪಾಯವನ್ನು ತರಲಿದೆ, ಹಣ ಉಳಿಸುವ ನಿಮ್ಮ ಪ್ರಯತ್ನ ವ್ಯರ್ಥವಾಗಲಿದೆ, ಸ್ನೇಹ ಆಳವಾಗಿ ಪ್ರಣಯಕ್ಕೆ ದಾರಿ ಮಾಡಿಕೊಡಲಿದೆ, ಕೆಲಸದ ಸ್ಥಳದಲ್ಲಿ ಪರಿಶೀಲನೆ ನಡೆಸಬೇಕಾದ ಅನಿವಾರ್ಯತೆ, ವ್ಯವಹಾರದಲ್ಲಿ ಚೇತರಿಕೆ ಕಂಡುಬರಲಿದೆ, ದಿನಾಂತ್ಯಕ್ಕೆ ಶುಭ ಸುದ್ದಿ.

ತುಲಾರಾಶಿ
ಧಾರ್ಮಿಕ ಕಾರ್ಯಕ್ಕೆ ಹಣ ಹೂಡಿಕೆ, ಮಾನಸಿಕ ನೆಮ್ಮದಿ ದೊರೆಯಲಿದೆ, ಕುಟುಂಬ ಸದಸ್ಯರ ಜೊತೆಗೆ ಭಿನ್ನಾಭಿಪ್ರಾಯ, ಸಂಗಾತಿಯು ಅಸಮಾಧಾನಗೊಳ್ಳುವ ಸಾಧ್ಯತೆ, ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ, ಕೃಷಿ ಕಾರ್ಯದಲ್ಲಿ ಅಧಿಕ ಲಾಭ, ಕಲಾವಿದರಿಗೆ ಹೊಸ ಅವಕಾಶ ದೊರೆಯಲಿದೆ, ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ವೃಶ್ಚಿಕರಾಶಿ
ಹೊಸ ಹೂಡಿಕೆ ಮಾಡುವ ಮೊದಲು ಪರಿಣಿತರ ಸಲಹೆ ಪಡೆಯಿರಿ, ಕುಟುಂಬದ ಜವಾಬ್ದಾರಿಯನ್ನು ನಿರ್ವಹಣೆ ಮಾಡಿ, ಕೋಪ ಕುಟುಂಬದ ನೆಮ್ಮದಿಯನ್ನು ಹಾಳು ಮಾಡಲಿದೆ, ಹೃದಯಕ್ಕೆ ಇಷ್ಟವಾಗುವ ವ್ಯಕ್ತಿಗಳ ಭೇಟಿ ಸಾಧ್ಯತೆ, ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿದೆ, ಒಬ್ಬಂಟಿಯಾಗಿದ್ದರೂ ಹಲವು ಚಿಂತೆ ನಿಮ್ಮ ಕಾಡಲಿದೆ.

ಇದನ್ನೂ ಓದಿ : ಚೂಯಿಂಗ್ ಗಮ್ ತಿನ್ನುವ ಅಭ್ಯಾಸವಿದೆಯಾ ? ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು.

ಧನಸ್ಸುರಾಶಿ
ಆತ್ಮವಿಶ್ವಾಸ ನಿಮಗೆ ಹೊಸ ಹುಮ್ಮಸ್ಸನ್ನು ತಂದು ಕೊಡಲಿದೆ, ದ್ವೇಷ, ಅಸೂಯೆ, ಸೇಡು ತೀರಿಸಿಕೊಳ್ಳುವ ಮನೋಭಾವವನ್ನು ಬಿಟ್ಟುಬಿಡಿ, ಹಣವನ್ನು ವ್ಯಯಿಸುವಾಗ ಎಚ್ಚರಿಕೆಯನ್ನು ವಹಿಸಿ, ಸ್ನೇಹಿತರ ಭೇಟಿಯಿಂದ ಆಹ್ಲಾದಕರ ಅನುಭವ, ಅನಿರೀಕ್ಷಿತ ಲಾಭ ಸಂತಸವನ್ನು ತರಲಿದೆ, ಭವಿಷ್ಯದ ಯೋಜನೆಯನ್ನು ರೂಪಿಸಲು ಇಂದು ಸಕಾಲ.

ಮಕರರಾಶಿ
ಹಣವನ್ನು ಉಳಿಸುವ ನಿಮ್ಮ ಪ್ರಯತ್ನ ವಿಫಲವಾಗಲಿದೆ, ನಿಮಗೆ ಇಂದು ಅನಿರೀಕ್ಷಿತ ಲಾಭ ದೊರೆಯಲಿದೆ, ಸಂಗಾತಿ ವಿಶೇಷ ಉಡುಗೊರೆಯೊಂದನ್ನು ನೀಡುವರು, ಕಲಾತ್ಮಕ ಹಾಗೂ ಸೃಜನಾತ್ಮಕ ಸಾಮರ್ಥ್ಯವು ಹೆಚ್ಚಲಿದೆ, ಕುಟುಂಬ ಸದಸ್ಯರು ಇಂದು ಹೆಚ್ಚು ಸಹಕಾರ ನೀಡಲಿದ್ದಾರೆ, ಧಾರ್ಮಿಕ ಕ್ಷೇತ್ರಗಳ ಭೇಟಿಯಿಂದ ಮನಸಿಗೆ ನೆಮ್ಮದಿ.

ಇದನ್ನೂ ಓದಿ : ಮಂಗಳೂರು ಡಯಟ್‌ನಲ್ಲಿ ತಲವಾರು ದಾಳಿ : ಆರೋಪಿ ಕುಂದಾಪುರದ ನವೀನ್‌ ಅರೆಸ್ಟ್‌

ಕುಂಭರಾಶಿ
ಹೊರಾಂಗಣ ಚಟುವಟಿಕೆಗಳು ನಿಮ್ಮನ್ನು ಆಕರ್ಷಿಸಲಿದೆ, ಯೋಗವು ಹೆಚ್ಚು ಲಾಭವನ್ನು ತರಲಿದೆ, ದೂರದ ಸಂಬಂಧಿಗಳಿಂದ ಅನಿರೀಕ್ಷಿತ ಶುಭ ಸುದ್ದಿಯನ್ನು ಕೇಳುವಿರಿ, ಮೇಲಾಧಿಕಾರಿಗಳ ಸಹಕಾರ ದೊರೆಯಲಿದೆ, ಗಾಸಿಪ್‌ ಹಾಗೂ ವದಂತಿಗಳಿಂದ ದೂರವಿರಿ, ಜೀವನ ಸಂಗಾತಿಯಿಂದ ನೆಮ್ಮದಿ ದೊರೆಯಲಿದೆ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ.

ಮೀನರಾಶಿ
ಧಾರ್ಮಿಕ ಹಾಗೂ ಆಧ್ಯಾತ್ಮಿಕ ಆಸಕ್ತಿಯನ್ನು ಅನುಸರಿಸಲು ಒಳ್ಳೆಯ ದಿನ, ದೀರ್ಘಾವಧಿಯ ದೃಷ್ಟಿಕೋನದಿಂದ ಹೂಡಿಕೆಯನ್ನು ಮಾಡಿ, ವಿಶ್ರಾಂತಿಯನ್ನು ಪಡೆಯಿರಿ, ರಂಗಭೂಮಿ ಹಾಗೂ ಕಲಾವಿದರಿಗೆ ಶುಭ ಸುದ್ದಿ, ವೃತ್ತಿರಂಗದಲ್ಲಿ ಹೊಸ ಅವಕಾಶಗಳು ದೊರೆಯಲಿದೆ, ಏಕಾಂತದಿಂದ ನೆಮ್ಮದಿ, ಹೊಂದಾಣಿಕೆಯಿಂದ ಕೆಲಸ ಕಾರ್ಯಗಳಲ್ಲಿ ಗೆಲುವು.

ಇದನ್ನೂ ಓದಿ : 17 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ : ವಿಡಿಯೋ ಹರಿಬಿಟ್ಟ ಕಾಮುಕರು


( Horoscope today astrological prediction for September 21)

Comments are closed.