Silver Rate: ಸಖತ್ ಖುಷಿ ಕೊಟ್ಟ ಬೆಳ್ಳಿ, ಬೆಲೆಯಲ್ಲಿ ಭಾರೀ ಪ್ರಮಾಣದ ಇಳಿಕೆ!

ಬೆಂಗಳೂರು: ಹೊಸ ವರ್ಷದಂದು ಎಲ್ಲರಿಗೂ ಎದೆ ಬಡಿತ ಹೆಚ್ಚಿಸಿದ್ದ ಅತ್ಯಮೂಲ್ಯ ಲೋಹ ಗ್ರಾಹಕನ ಮೇಲೆ ಕೊಂಚ ಕರುಣೆ ತೋರಿದ ಹಾಗಿದೆ. ಈ ಕಾರಣದಿಂದ ಭಾರೀ ಮೊತ್ತದ ಇಳಿಕೆಯನ್ನು ಬೆಳ್ಳಿಗಳು ಕಂಡಿದೆ. ಈ ವರ್ಷದ ಮೊದಲ ದಿನವಾದ ಇಂದು (ಗುರುವಾರ), ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ ಕಂಡುಬಂದಿದ್ದು, ಬೆಳ್ಳಿಯ ದರದಲ್ಲಿ ತುಸು ಇಳಿಕೆಯಾಗಿದೆ.
ಬೆಂಗಳೂರಿನ ಮಾರುಕಟ್ಟೆಯಲ್ಲಿ ಆಭರಣ ಚಿನ್ನದ (22 ಕ್ಯಾರಟ್) ಮತ್ತು ಶುದ್ಧ ಚಿನ್ನದ (24 ಕ್ಯಾರಟ್) ದರಗಳು ಈ ಕೆಳಗಿನಂತಿವೆ:
ಇದನ್ನೂ ಓದಿ-Sirsi-Kumta: ಖರ್ಚು ಕಮ್ಮಿ ,ಪ್ರಯಾಣವೂ ಸುಲಭ; ಹೊಸ ವರ್ಷಕ್ಕೆ ಇದೊಂದು ಸಿಹಿ ಸುದ್ದಿ, ಅರ್ಧಕ್ಕರ್ಧ ಇಳಿಯಲಿದೆ ಈ ಮಾರ್ಗದ ಟಿಕೇಟ್ ದರ! https://kannada.newsnext.live/district/kumta-sirsi-highway-opened-to-busses/
- 22 ಕ್ಯಾರಟ್ ಚಿನ್ನ (ಆಭರಣ): 1 ಗ್ರಾಂಗೆ ₹12,380 ಆಗಿದ್ದು, ಕಳೆದ ದಿನಕ್ಕೆ ಹೋಲಿಸಿದರೆ ₹15ರಷ್ಟು ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ₹1,23,800 ಆಗಿದೆ.
- 24 ಕ್ಯಾರಟ್ ಚಿನ್ನ (ಅಪರಂಜಿ): 1 ಗ್ರಾಂಗೆ ₹13,506 ಆಗಿದ್ದು, ₹17ರಷ್ಟು ಏರಿಕೆ ಕಂಡಿದೆ. 10 ಗ್ರಾಂಗೆ ₹1,35,060 ಬೆಲೆ ನಿಗದಿಯಾಗಿದೆ.
- 18 ಕ್ಯಾರಟ್ ಚಿನ್ನ: 1 ಗ್ರಾಂಗೆ ₹10,129 ಬೆಲೆ ಇದೆ.
ಇನ್ನೂ ಬೆಳ್ಳಿಯ ದರದಲ್ಲಿ ಇಳಿಕೆ ಕಂಡುಬಂದಿದ್ದು ಅದರ ವಿವರ ಹೀಗಿದೆ. ಹೂಡಿಕೆದಾರರು ಮತ್ತು ಗ್ರಾಹಕರಿಗೆ ಸಮಾಧಾನದ ಸಂಗತಿಯೆಂದರೆ, ಬೆಳ್ಳಿಯ ದರ ಇಂದು ಸತತ ನಾಲ್ಕನೇ ದಿನವೂ ಇಳಿಕೆ ಕಂಡಿದೆ.
- ಬೆಳ್ಳಿ ಬೆಲೆ (1 ಕೆ.ಜಿ): ಇಂದು ಒಂದು ಕಿಲೋ ಬೆಳ್ಳಿಯ ಬೆಲೆ ₹2,38,000 ಆಗಿದೆ.
- ಪ್ರತಿ ಗ್ರಾಂಗೆ: 1 ಗ್ರಾಂ ಬೆಳ್ಳಿಯ ಬೆಲೆ ₹238 ತಲುಪಿದೆ.
ಗೆಲ್ಲೋದು ಬೆಳ್ಳಿನೇ! ಎಂಬುದು ತಜ್ಞರ ಮಾತು
ಒಟ್ಟಾರೆಯಾಗಿ ಒಮ್ಮೆಲೆ ಬೇಡಿಕೆ-ಪೂರೈಕೆಯ ನಡುವಿನ ಅಜಗಜಾಂತರ ವ್ಯತ್ಯಾಸದಿಂದ ಸಡನ್ ಏರಿಕೆ ಕಂಡಿದ್ದ ಬೆಳ್ಳಿ ನಾಲ್ಕನೇ ದಿನವೂ ದರದಲ್ಲಿ ಕೆಳಮುಖವಾಗುತ್ತಾ ಬಂದರೆ ಚಿನ್ನ ಮಾತ್ರ ಪೈಪೋಟಿ ಬಿಟ್ಟು ಕೊಡದೇ ಆಗಸದೆತ್ತರದ ಬೆಲೆ ತಲುಪಿದೆ. ಮಾರ್ಕೆಟ್ ತಜ್ಞರ ಪ್ರಕಾರ 2038 ರ ವೇಳೆಗೆ ಬೆಳ್ಳಿ ಚಿನ್ನವನ್ನು ಸರಿಗಟ್ಟಿ ವಿಕ್ರಮ ಸಾಧಿಸಲಿದೆ ಎನ್ನಲಾಗುತ್ತಿದೆ.



